ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ ಸಾಧನೆ

Spread the love

ಸಿಎ-ಸಿಪಿಟಿ ಫಲಿತಾಂಶ: ಆಳ್ವಾಸ್ ಸಾಧನೆ

ಮೂಡುಬಿದಿರೆ: 2019-20ನೇ ಸಾಲಿನ ಸಿಎ-ಸಿಪಿಟಿ ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಅನ್ಸಿಲಾ ಡಿ’ಸೋಜ 200 ಅಂಕಗಳಲ್ಲಿ 162 ಅಂಕಗಳನ್ನು ಪಡೆದು ರಾಜ್ಯ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯಲ್ಲಿ ಟಾಪರ್ ಆಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪ್ರಕಟಗೊಂಡಿರುವ ಪಿಯುಸಿ ಫಲಿತಾಂಶದ ವಾಣಿಜ್ಯ ವಿಭಾಗದಲ್ಲಿ ಓಲಿಟ್ವಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

ಪರೀಕ್ಷೆಗೆ ಅಳ್ವಾಸ್ ಪಿಯು ಕಾಲೇಜಿನ 157 ಮಂದಿ ಹಾಜರಾಗಿದ್ದು, 85 ಮಂದಿ ಉತ್ತೀರ್ಣರಾಗಿದ್ದಾರೆ. 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಒಟ್ಟು ಶೇ. 54.14 ಫಲಿತಾಂಶ ದಾಖಲಾಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು ಸಿಎ-ಸಿಪಿಟಿ ಪರೀಕ್ಷೆಗೆ ಹಾಜರಾಗಿ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಕೀರ್ತಿಗೆ ಆಳ್ವಾಸ್ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಾಧಕರು: ಚೈತನ್ಯ ಕೆ.-153, ಸುದೀಪ್ತಿ ಪಿ.-152, ಪಲ್ಲವಿ ಎಚ್.ಆರ್-150, ದಿವ್ಯಾ ಎಂ.-146, ಅನುಪ್ ಎಂ. ಗಂಜಲ್-143, ಉಮಂಗ್ ಇನ್ನನಿ-143, ಕಿರಣ್ ಎನ್. ಭಾರಧ್ವಜ್-142, ಸಂಸ್ಕøತಿ ಎಸ್. ಮನ್ನೂರ್-142, ಎ. ಕೌಶಿಕ್-142 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಎಂದು ಡಾ.ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಪಿಆರ್‍ಒ ಡಾ.ಪದ್ಮನಾಭ ಶೆಣೈ ಉಪಸ್ಥಿತರಿದ್ದರು.


Spread the love