ಸಿಗದ ಮೂಲಗೇಣಿ ನ್ಯಾಯ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕಾಯ್ದೆ ಕುರಿತು ಪರಿಷತ್ ನಲ್ಲಿ ಐವಾನ್ ಡಿಸೋಜಾ ಪ್ರಶ್ನೆ
ಮೂಲಗೇಣಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕಾಯ್ದೆ ಜಾರಿಯಾಗಿ 12 ವರ್ಷಕಳೆದರೂ ಒಕ್ಕಲುಗಳಿಗೆ ಇನ್ನೂ ನ್ಯಾಯ ಸಿಕ್ಕಿಲ. ಅನುಭೋಗಿ ನೆಲ ಸ್ವಂತದ್ದಾಗಿಲ್ಲ. ಮೂಲಗೇಣಿ ಪದ್ಧತಿ ರದ್ದತಿಗೆ 2012ರ ಜುಲೈಎ 13 ರಂದು ರಾಷ್ಟ್ರಪತಿ ಅಂಕಿತ ದೊರಕಿತ್ತು. ಮೂಲಗೇಣಿದಾರರಿಗೆ ಮಾಲೀತ್ವ ನೀಡಲು ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಮಾಲೀತ್ವವನ್ನು ಪ್ರದಾನ ಮಾಡುವ ಅಧಿನಿಯಮ2011ನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ 25-07-2012ರಂದು ಪ್ರಕಟಿಸಿತ್ತು. 2012ರಲ್ಲಿ ಕಾಯ್ದೆ ಜಾರಿಯಾಗುತ್ತಿದ್ದಂತೆಯೇ ಲಕ್ಷಾಂತರ ಮಂದಿ ಒಕ್ಕಲುಗಳು ತಮ್ಮದೇ ಜಾಗದ ಕನಸು ಕಾಣುತ್ತಿದ್ದರು. ಈ ಕುರಿತು ನಿಯಮಾವಳಿ 17-11-2016ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿತ್ತು. 2016ರಲ್ಲಿ ಈ ಕುರಿತ ನಿಯಮಗಳ ರಚನೆಯಾಗಿ ಇನ್ನೇನು ಎಲ್ಲವೂ ಸರಿಯಾಗುತ್ತದೆ ಎನ್ನುವಾಗಲೇ ಇದರವಿರುದ್ದ ಮೂಲಿದಾರರು ಹೈಕೋರ್ಟ್ ಮೆಟ್ಟಿಲೇರಿದರು. ಬಳಿಕ ಸರ್ಕಾರದ ಮರ ತೀರ್ಪು ಪ್ರಕಟವವಾದರೂ, ಒಕ್ಕಲುಗಳಿಗೆ ನ್ಯಾಯಾ ಒದಗಿಸಲು ಸರ್ಕಾರ ಮುಂದಾಗಲಿಲ್ಲ.
ಪ್ರಸ್ತುತ ಸರ್ಕಾರವು ಮೂಲಗೇಣಿ ನೀಡುವ ಬಗ್ಗೆ 2012ರಲ್ಲಿ ಅರ್ಜಿಗಳ ಅಹ್ವಾನಿಸಿ ದ.ಕ ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಅರ್ಜಿದಾರರು ಸರ್ಕಾರಕ್ಕೆ ಸಲ್ಲಿಸಿದರು. ಇದೂವರೆಗೂ ಇತ್ಯಾರ್ಥಕ್ಕೆ ತಾಲ್ಲೂಕು ಕಛೇರಿಯಲ್ಲಿ ಬಾಕಿ ಇದ್ದೆ. ಇದರ ಬಗ್ಗೆ ಮೂಲಿದಾರರು ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿ, ಬಡ ಮೂಲಗೇಣಿದಾರರಿಗೆ ತೋಡುದರೆಯನ್ನು ನೀಡುತ್ತಿದ್ದಾರೆ. ಈ ಬಗ್ಗೆ ವಿಶೇಷ ಅಭಿಯೋಜಕರನ್ನು ರಚನೆ ಮಾಡಿ, ಸದರಿ ಪ್ರಕರಣ ಇತ್ಯಾರ್ಥಗೊಳಿಸಿ, ಸರ್ಕಾರ ಮುತ್ತುವರ್ಜಿ ವಹಿಸಬೇಕು. ಕರ್ನಾಟಕ ಹೈಕೋರ್ಟ್ ನ್ಯಾಯಾಲಯದಲ್ಲಿ ಮೂಲಗೇಣಿ ಪರವಾಗಿ ತೀರ್ಪು ಬಂದಿದೆ. ಇದು ಮೂಲಿದಾರರು ಅಪೀಲು ಸಲ್ಲಿಸುವ ಮೂಲಕ ತೊಂದರೆಯನ್ನು ನೀಡುತ್ತಿದ್ದಾರೆ. ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಮತ್ತು ಮೂಲಗೇಣಿದಾರರನ್ನು ಒಕ್ಕಲು ಎಬ್ಬಿಸಲು ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಆದರಿಂದ ವಿಶೇಷ ಅಭಿಯೋಜಕರನ್ನು ನೇಮಕ ಮಾಡಿ ಕೂಡಲೇ ಮೂಲಗೇಣಿದಾರರು ಸಲ್ಲಿಸಿರುವ ಅರ್ಜಿಗಳನ್ನು ಇತ್ಯಾರ್ಥಗೊಳಿಸಲು ಕ್ರಮಕೈಗೊಂಡು ಅವರಿಗೆ ಭೂಮಿ ಹಕ್ಕನ್ನು ನೀಡಬೇಕೆಂದು ಮಾನ್ಯ ಕಂದಾಯ ಸಚಿವರಿಗೆ ಶೂನ್ಯವೇಳೆಯಲ್ಲಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ವಿಷಯನ್ನು ಪ್ರಸ್ತಾಪಿಸಿದ್ದಾರೆ.