ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಿದ್ದಾರೆ: ರಮೇಶ್ ಕಾಂಚನ್ ಸಂತಸ
ಉಡುಪಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆರನೇ, ಹಣಕಾಸು ಸಚಿವರಾಗಿ ಹದಿಮೂರನೇ ಬಜೆಟನ್ನು ಶುಕ್ರವಾರ ಮಂಡಿಸಿದ್ದು ಸರ್ವರಿಗೂ ನ್ಯಾಯದೊರಕಿಸಿಕೊಡುವ ಸಂಪೂರ್ಣ ಜನಪರ ಬಜೆಟ್ ನೀಡುವುದರೊಂದಿಗೆ ಎಲ್ಲಾ ವರ್ಗಗಳ ಹಿತವನ್ನು ಕಾಯುವ ಕೆಲಸ ಮಾಡಿದ್ದಾರೆ ಎಂದು ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೃಷಿ ಮೂಲಭೂತ ಸೌಕರ್ಯ, ಮಹಿಳಾ ಅಭಿವೃದ್ದಿ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಹಿಳೆಯರ ಸುರಾಕ್ಷತೆ, ಪತ್ರಕರ್ತರ ಹಿತಾಸಂರಕ್ಷಣೆ, ಶಾಲೆಗಳ ನವೀಕರಣ, ಪ್ರವಸೋದ್ಯಮಕ್ಕೆ ಉತ್ತೇಜನ, ಸಾಲಮನ್ನಾ, ಹೋಸ ಸ್ಟಾರ್ಟ್ ಅಪ್ ನೀತಿ, ಮೇವು ಭದ್ರತೆ ಇತ್ಯಾದಿಗಳಿಗೆ ಕಾಳಜಿ ವಹಿಸಿ ಸಾರ್ವಕಳಿಕ ಜನಪರ ಬಜೆಟ್ ಮೂಲಕ ರಾಜ್ಯದ ಸಮಸ್ಥ ಜನತೆಯ ಹಿತಾಸಕ್ತಿಗೆ ಆದ್ಯತೆ ನೀಡಿರುವುದು ಸಂತಸ ತಂದಿದೆ. ರಾಜ್ಯವು ಕಂಡ ಅತೀ ಉತ್ತಮ ಬಜೆಟ್ ಎಂದು ರಮೇಶ್ ಕಾಂಚನ್ ಸಂತಸ ವ್ಯಕ್ತಪಡಿಸಿದ್ದಾರೆ.