Home Mangalorean News Kannada News ಸಿದ್ಧರಾಮಯ್ಯ ಬಜೆಟ್ : ಜಿಲ್ಲೆಯ ನೀರಾವರಿಗೆ ಒತ್ತು- ಸಚಿವ ಯು.ಟಿ. ಖಾದರ್

ಸಿದ್ಧರಾಮಯ್ಯ ಬಜೆಟ್ : ಜಿಲ್ಲೆಯ ನೀರಾವರಿಗೆ ಒತ್ತು- ಸಚಿವ ಯು.ಟಿ. ಖಾದರ್

Spread the love

ಸಿದ್ಧರಾಮಯ್ಯ ಬಜೆಟ್ : ಜಿಲ್ಲೆಯ ನೀರಾವರಿಗೆ ಒತ್ತು- ಸಚಿವ ಯು.ಟಿ. ಖಾದರ್

ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಂಡಿಸಿರುವ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಿದ್ದು, ಜಿಲ್ಲೆಯ ನೀರಾವರಿ ಸಾಮಥ್ರ್ಯವನ್ನು ಸಶಕ್ತೀಕರಣಗೊಳಿಸಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಕರಾವಳಿಯ ಪ್ರವಾಸಿ ಸ್ಥಳಗಳಲ್ಲಿ ಬೋಟ್ ಹೌಸ್, ತೇಲುವ ಉಪಹಾರ ಗೃಹಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿರುವುದು ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರವನ್ನು ವೃದ್ಧಿಸಲಿದೆ. ಜಿಲ್ಲೆಯಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ಸುಮಾರು 85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ನೇತ್ರಾವತಿ ನದಿಯಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಮಂಗಳೂರು ತಾಲೂಕಿನ ಹರೇಕಳ ಮತ್ತು ಅಡ್ಯಾರು ಮಧ್ಯೆ ಸುಮಾರು ರೂ. 174 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದ್ದು, ಇದು ಜಿಲ್ಲೆಯ ನೀರಾವರಿ ಸಾಮಥ್ರ್ಯವನ್ನು ವೃದ್ಧಿಸಲಿದೆ.

ಆಹಾರ ಇಲಾಖೆಯಲ್ಲಿ ಪಡಿತರ ವಿತರಕರ ಕಮಿಷನ್ ಮೊತ್ತವನ್ನು ಪ್ರತೀ ಕ್ವಿಂಟಾಲ್‍ಗೆ ರೂ. 87ರಿಂದ ರೂ. 100ಕ್ಕೆ ಹೆಚ್ಚಿಸಲಾಗಿದೆ. ಜನಪರ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.


Spread the love

Exit mobile version