ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಕೋಕೆನ್ ನೊಂದಿಗೆ ಘಾನಾ ಪ್ರಜೆ ಸೆರೆ

Spread the love

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಕೋಕೆನ್ ನೊಂದಿಗೆ ನೈಜಿರಿಯ ಪ್ರಜೆ ಸೆರೆ

ಮಂಗಳೂರು: ನಗರದಲ್ಲಿ ಬೆಲೆಬಾಳುವ ಮಾದಕ ವಸ್ತುವಾದ ಕೋಕೆನ್ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಘಾನಾ  ರಾಷ್ಷ್ರದ ಪ್ರಜೆಯನ್ನು ರೂ. 5.5 ಲಕ್ಷ ಮೌಲ್ಯದ ಕೋಕೇನ್ ನೊಂದಿಗೆ ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಘಾನಾ ದೇಶದ ನಿವಾಸಿ ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋಫರ್ (37) ಎಂದು ಗುರುತಿಸಲಾಗಿದೆ.

ಜನವರಿ 16 ರಂದು ಗೋವಾ ಮೂಲಕ ಮಂಗಳೂರು ನಗರಕ್ಕೆ ಮಾದಕ ವಸ್ತುವಾದ ಕೋಕೆನ್ ನ್ನು ಮಾರಾಟ ಮಾಡಲು ಘಾನಾ  ದೇಶದ ಫ್ರಾನ್ಸಿಸ್ ಕ್ರಿಸ್ಟೋಫರ್ ಬಂದು ಮಂಗಳೂರು ನಗರದಲ್ಲಿ ಗ್ರಾಹಕರನ್ನು ಹುಡುಕಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಂಗಳೂರು ನಗರದ ಮಲ್ಲಿಕಟ್ಟೆ ಲೋಬೋ ಲೇನ್ ರಸ್ತೆಯಲ್ಲಿ ಮಾದಕ ವಸ್ತುವಾದ ಕೋಕೇನ್ ನ್ನು ಅಕ್ರಮವಾಗಿ ತನ್ನ ವಶದಲ್ಲಿಸಿಕೊಂಡಿದ್ದ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಸುಮಾರು 5,50,000/- ಬೆಲೆಬಾಳುವ ಮಾದಕ ವಸ್ತುವಾದ ಕೋಕೆನ್ ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈತನು ಸುಮಾರು 2 ವರ್ಷದ ಹಿಂದೆ ಭಾರತಕ್ಕೆ ಬಿಸಿನೆಸ್ ವೀಸಾದಲ್ಲಿ ಬಂದವನು ನಂತರ ಘಾನಾ ದೇಶಕ್ಕೆ ವಾಪಾಸು ಹೋಗದೇ ಅನಧಿಕೃತವಾಗಿ ಭಾರತದಲ್ಲಿ ವಾಸ್ತವ್ಯವಿದ್ದುಕೊಂಡು ಈ ರೀತಿ ಕೊಕೇನ್ ನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿದೆ.

ಈತನ ವಶದಿಂದ ಕೊಕೇನ್, ಮೊಬೈಲ್ ಫೋನುಗಳು-2, ಹಾಗೂ ನಗದು ರೂ. 3,300/- ಹೀಗೆ ಒಟ್ಟು ರೂ. 5,55,300/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಈ ಹಿಂದೆ 2-3 ಬಾರಿ ಈತನು ಮಂಗಳೂರಿಗೆ ಬಂದು ಹಲವಾರು ಮಂದಿಗೆ ಕೊಕೇನ್ ನ್ನು ಮಾರಾಟ ಮಾಡಿದ ಬಗ್ಗೆ ತಿಳಿದುಬಂದಿರುತ್ತದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love