Home Mangalorean News Kannada News ಸಿಸಿಬಿ ಪೊಲೀಸರ ಕಾರ್ಯಾಚರಣೆ, ಬೃಹತ್ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ಪತ್ತೆ – ಇಬ್ಬರ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ, ಬೃಹತ್ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ಪತ್ತೆ – ಇಬ್ಬರ ಬಂಧನ

Spread the love

ಸಿಸಿಬಿ ಪೊಲೀಸರ ಕಾರ್ಯಾಚರಣೆ, ಬೃಹತ್ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ಪತ್ತೆ – ಇಬ್ಬರ ಬಂಧನ

ಮಂಗಳೂರು: ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಪಿಕಪ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೇರಳ ಕಾಸರಗೋಡು ನಿವಾಸಿ ಕಲಂದರ್ ಮಹಮ್ಮದ್ ಶಾಹ [35] ಮತ್ತು ಮೊಯಿದ್ದೀನ್ ಅನ್ಸಾರ್ (27) ಎಂದು ಗುರುತಿಸಲಾಗಿದೆ.

ಬಂಧಿತರಿಂದ 132 ಕೆ.ಜಿ ಗಾಂಜಾ, ಮಹೀಂದ್ರ ಬೊಲೆರೋ ಪಿಕ್ ಅಪ್ ವಾಹನ, ಬೆಂಗಾವಲಿದ್ದ ಸ್ವಿಫ್ಟ್ ಕಾರು, ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಈಗಿನ ಒಟ್ಟು ಮಾರುಕಟ್ಟೆ ಬೆಲೆ ರೂ 43,00,000 ಆಗಿರುತ್ತದೆ.

ಈ ದಾಳಿಯನ್ನು ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ವಿಕಸ್ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ರವರು ಜಗದೀಶ್ ರವರ ಉಪಸ್ಥಿತಿಯಲ್ಲಿ ಪಿ.ಸಿ.ಐ ಘಟಕದ ನಿರೀಕ್ಷಕರಾದ ಶಿವಪ್ರಕಾಶ್ ಅರ್ ನಾಯಕ್ರವರ ನೇತೃತ್ವದಲ್ಲಿ ನಡೆದಿದ್ದು, ದಾಳಿಯಲ್ಲಿ ಇ.ಎನ್.ಸಿ.ಪಿ.ಎಸ್ನ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ, ಸಿ.ಸಿ.ಐ ಘಟಕದ ಪೊಲೀಸ್ ಉಪನಿರೀಕ್ಷಕರಾದ ಕಬ್ಬಳ್ ರಾಜು, ಪ್ರದೀಪ್ ಬಿ.ಆರ್, ಸಹಾಯಕ ಮೋನಸ್ ಉಪ ನಿರೀಕ್ಷಕರಾದ ಮೊಹನ್ ಎಲ್, ಮೋಹನ್ ಕೆ.ಪಿ. ತೇಜ ಕುಮಾರ್ ಮತ್ತು ಸಿಬ್ಬಂದಿಯವರು ಗಳಾದ ಚಂದ್ರ ಅಡೂರು, ಯೋಗಿಶ್, ಚಂದ್ರಹಾಸ ಸನೀಲ್, ಗಿರೀಶ್ ಸುವರ್ಣ, ರಾಜೇಂದ್ರ ಪ್ರಸಾದ್ , ರೆಜಿ, ಮಣಿ ಎಂ.ಎನ್, ಅಬ್ದುಲ್ ಜಬ್ಬಾರ್, ನೂತನ್ ಕುಮಾರ್, ಸುಧೀರ್ ಕುಮಾರ್, ರಾಜ, ಅಶಿತ್ ವಿಶಾಲ್ ಡಿಸೋಜಾ, ಅಂಜನಪ್ಪ ಹಾಗೂ ಮನೋಜ್ ಕುಮಾರ್ ರವರು ಭಾಗವಹಿಸಿದ್ದರು.


Spread the love

Exit mobile version