ಸಿ.ಎಫ್.ಎ.ಎಲ್ ನಡೆಸಿದ ಕಾರ್ಯಕ್ರಮದಲ್ಲಿ ಅತಿದೊಡ್ಡ ಆಕಾಶಕಾಯವನ್ನು  ವೀಕ್ಷಿಸಿದ ಮಂಗಳೂರಿಗರು

Spread the love

ಸಿ.ಎಫ್.ಎ.ಎಲ್ ನಡೆಸಿದ ಕಾರ್ಯಕ್ರಮದಲ್ಲಿ ಅತಿದೊಡ್ಡ ಆಕಾಶಕಾಯವನ್ನು  ವೀಕ್ಷಿಸಿದ ಮಂಗಳೂರಿಗರು

ಡಿಸೆಂಬರ್ 26, 2019 ರ ಸೂರ್ಯಗ್ರಹಣವು ಗುರುವಾರ ಬೆಳಿಗ್ಗೆ ಪ್ರಕಾಶಮಾನವಾದ ಬೆಂಕಿಯ ಉಂಗುರದಿಂದ ಆಕಾಶವನ್ನು ಬೆಳಗಿಸಿತು. ಮಂಗಳೂರಿನ ಆಕಾಶ ವೀಕ್ಷಕರು ದಿ ಭಾರತ ಅಕಾಡೆಮಿಯ ಆವರಣದಲ್ಲಿ ಸಿ.ಎಫ್.ಎ.ಎಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರ್ಷಿತರಾದರು,

ಈ ವರ್ಷಕ್ಕೆ ವಿದಾಯ ಹೇಳುವ ಮೊದಲು ಸೂರ್ಯಗ್ರಹಣವು ಒಂದು ಕೊನೆಯ ಭವ್ಯ ಆಕಾಶ ಫಟನೆಯಾಗಿದೆ. ಬೆಳಿಗ್ಗೆ 9.24ರ ಸುಮಾರಿಗೆ ಪ್ರಾರಂಭವಾದ ಈ ಗ್ರಹಣವನ್ನು ಮಂಗಳೂರಿಗರು ತಮ್ಮ ಸೌರ ಕನ್ನಡಕವನ್ನು ಧರಿಸಿ, ಸೂರ್ಯನನ್ನು ನೊಡುತ್ತಿರುವ ದೃಶ್ಯ ಸಮಾನ್ಯವಾಗಿತ್ತು.

ಗ್ರಹಣವನ್ನು ವೀಕ್ಷಿಸುವ ಸಮಾರಂಭದಲ್ಲಿ ನಾಸಾ ಪ್ರಮಾಣಿತ ಸುರಕ್ಷಿತ ಸೌರ ಕನ್ನಡಕವನ್ನು ಜನರು ಉತ್ತಮ ನೋಟವನ್ನು ಹೊಂದಲು ಕೊಡಲಾಗಿತ್ತು. ಜನರು ತಮ್ಮ ಮನೆಗಳಲ್ಲಿ ಕುಳಿತುಕೊಂಡು ಈ ಸೂರ್ಯಗ್ರಹಣವನ್ನು ಆನಂದಿಸಲು ಈ ಕಾರ್ಯಕ್ರಮವನ್ನು ಸಿ.ಎಫ್.ಎ.ಎಲ್ ನ ಯ್ಯುಟ್ಯೂಬ್ ಚೆನಲ್‍ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಪ್ರತ್ಯೂಶ್ ಪೊಡುವಾಳ್ ( ಬೆಳ್ಳಿ ಪದಕ ವಿಜೇತ- Iಔಂಂ 2018 ) ಮತ್ತು ಸಿ.ಎಫ್.ಎ.ಎಲ್ ನ ಅನೇಕ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿ.ಎಫ್.ಎ.ಎಲ್ ನ ಎರಡು ವರ್ಷಗಳ ತರಬೇತಿ, 1400 ಗಂಟೆಗಳ ತರಗತಿ ಅವಧಿ, ಮಾದರಿ ಪರೀಕ್ಷೆಗಳು, ಅಣಕು ಪರೀಕ್ಷೆಗಳು, ಅತ್ಯುತ್ತಮ ಕಲಿಕಾ ಸಾಧನಗಳು, ಉತ್ತಮ ಗ್ರಂಥಾಲಯ ಮೊದಲಾದವುಗಳನ್ನು ಒಳಗೊಂಡಿದ್ದು, ಇಲ್ಲಿ ನುರಿತ, ಅನುಭವಿ ಶಿಕ್ಷಕರು ತರಬೇತಿಯನ್ನು ನೀಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಜೆಇಇ-ಮೈನ್, ಜೆಇಇ- ಎಡ್ವಾನ್ಸ್ಡ್ , ಕೆ.ವಿ.ಪಿ.ವೈ, ಒಲಿಂಪಿಯಾಡ್ಸ್, ಬಿಟ್ಸ್‍ಸಾಟ್, ನೀಟ್, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಷನ್, ಐ.ಐ.ಎಸ್.ಇ.ಆರ್., ಸಿ.ಇ.ಟಿ ಹಾಗೂ ಇತರ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾರೆ.


Spread the love