ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ

Spread the love

ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ

ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2018 ಜನವರಿ 15ರಂದು ಆಯೋಜಿಸಲಾಗುವ ಕಲೆ ಮತ್ತು ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಕಂಗೀಲು, ಕೀಲು ಕುದುರೆ ಕರಗ ನೃತ್ಯ, ಸುಗ್ಗಿ ಕುಣಿತ, ಕಂಸಾಳೆ, ವೀರಗಾಸೆ, ಜನಪದ ಗೀತೆ, ಚೆನ್ನು ಕುಣಿತ, ಹುಲಿವೇಷ, ಹಾಲಕ್ಕಿ ಕುಣಿತ, ಕನ್ಯಾಪು, ಗೀಗಿಪದ, ಮೊದಲಾದ ಕಲಾ ಪ್ರದರ್ಶನ ನೀಡಲು ಅವಕಾಶವಿದೆ.

ಆದುದರಿಂದ ಆಸಕ್ತ ಕಲಾತಂಡಗಳು ಈ ಹಿಂದೆ ಕಾರ್ಯಕ್ರಮ ನೀಡಿದ ಬಗ್ಗೆ ಛಾಯಾ ಚಿತ್ರ ಮತ್ತಿತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ತುಳು ಭವನ, ಉರ್ವಸ್ಟೋರ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು-575006, ದೂ: 0824-2451527, ಇವರಿಗೆ ಅಕ್ಟೋಬರ್ 30 ರ ಒಳಗೆ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love