ಸುಪ್ರೀಂ ಕೋರ್ಟಿನಲ್ಲಿ ಆಡಿಯೋ ವಿಚಾರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿಲ್ಲ – ಸಿದ್ದರಾಮಯ್ಯ

Spread the love

ಸುಪ್ರೀಂ ಕೋರ್ಟಿನಲ್ಲಿ ಆಡಿಯೋ ವಿಚಾರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿಲ್ಲ – ಸಿದ್ದರಾಮಯ್ಯ

ಉಡುಪಿ: ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೇಸ್ ವಾದಕ್ಕೆ ಹಿನ್ನಡೆಯಾಗಿಲ್ಲ. ಆಡಿಯೋವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಪ್ರತ್ಯೇಕ ವಿಚಾರಣೆ ಬೇಡ, ತೀರ್ಪಿನ ವೇಳೆ ಪರಿಗಣಿಸೋದಾಗಿ ಹೇಳಿದೆ. ನಾವು ಪ್ರತ್ಯೇಕ ವಿಚಾರಣೆಗೆ ಕೋರಿದ್ದೆವು, ಕೋರ್ಟ್ ಒಪ್ಪಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಏರ್ಪಡಿಸಲಾಗಿದ್ದ ಗಾಂಧಿ 150 ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಸಂದರ್ಭ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಬಿಎಸ್ ವೈ ನಡುವೆ ನಡೆದಿದೆ ಎನ್ನಲಾದ ಮಾತುಕತೆ ಕುರಿತು ಗಮನ ಸೆಳೆದಾಗ,ಅವರಿಬ್ಬರ ನಡುವೆ ಏನು ಒಳ ಒಪ್ಪಂದ ಆಗಿದ್ಯೋ ಗೊತ್ತಿಲ್ಲ.ಒಳ ಒಪ್ಪಂದದ ಟರ್ಮ್ಸ್ ಆಂಡ್ ಕಂಡೀಷನ್ಸ್ ಏನೋ ಗೊತ್ತಿಲ್ಲ.ಅವರಿಬ್ಬರ ನಡುವೆ ಮಾತುಕತೆ ಆಗಿರೋದಂತೂ ಸ್ಪಷ್ಟವಾಗಿದೆ. ಮಾತುಕತೆ ವಿಚಾರವನ್ನು ದೇವೇಗೌಡ, ಕುಮಾರಸ್ಬಾಮಿ ಇಬ್ರೂ ಒಪ್ಪಿಕೊಂಡಿದಾರೆ ಎಂದು ಹೇಳಿದರು. ಇನ್ನು ಸಿದ್ದರಾಮಯ್ಯ ಸರ್ಕಾರ ಬೀಳಿಸ್ತಾರೆ ‘ಎಂಬ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದು , ನಾನೇನೂ ಸರ್ಕಾರ ಬೀಳಿಸ್ತೀನಿ ಅಂದಿಲ್ಲ. ಕುಮಾರಸ್ವಾಮಿ ತಪ್ಪಾಗಿ ಪರಿಭಾವಿಸಿದ್ದಾರೆ.

ಬಿಜೆಪಿ ಸರ್ಕಾರ ಉಳಿಯಲು ಉಪಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲಬೇಕು.ಗೆಲ್ಲಕಾಗಿಲ್ಲ ಅಂದ್ರೆ ಯಡಿಯೂರಪ್ಪ ರಾಜಿನಾಮೆ ಕೊಡ್ಬೇಕಾಗುತ್ತೆ. ಈ ಸಂದರ್ಭ ಬಂದ್ರೆ ಮಧ್ಯಾವಧಿ ಚುನಾವಣೆ ಬರಬಹುದು ಅಂದಿದ್ದೆ ಅಷ್ಟೆ .ಅದು ಬಿಟ್ಟು ನಾನು ಮುಖ್ಯಮಂತ್ರಿ ಆಗ್ಬೇಕು ಅಂತ ಈ ಮಾತು ಹೇಳಿಲ್ಲ ಎಂದರು. ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡೋದಾದ್ರೆ ಕೊಡಲಿ.ಹಾಗೆ ಮಾಡಿದ್ರೆ ಜೆಡಿಎಸ್ ಜನರ ಮುಂದೆ ಎಕ್ಸ್ ಪೋಸ್ ಆಗುತ್ತೆ.ಅವರು ಎಷ್ಡು ಜಾತ್ಯಾತೀತರು ಅಂತ ಜನರಿಗೆ ಗೊತ್ತಾಗುತ್ತೆ.ನಿಜಕ್ಕೂ ಜಾತ್ಯತೀತ ರಾದ್ರೆ ಅವರು ಬಿಜೆಪಿಯನ್ನು ಬೆಂಬಲಿಸೋದಿಲ್ಲ ಎಂದು ಜೆಡಿಎಸ್ ನ್ನು ಕುಟುಕಿದ್ದಾರೆ.

ಈ ವೇಳೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು ಆರ್ ಸಭಾಪತಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಕಿಣಿ, ನಾಯಕರಾದ ಕಿಶನ್ ಹೆಗ್ಡೆ ಕೊಳಕೆಬೈಲು, ಎಮ್ ಎ ಗಫೂರ್ ಹಾಗೂ ಇತರರು ಉಪಸ್ಥಿತರಿದ್ದರು


Spread the love