ಸುರತ್ಕಲ್ ಬೀಚಿನಲ್ಲಿ ಚಿನ್ನಾಭರಣ ಸುಲಿಗೆ – ಇಬ್ಬರ ಬಂಧನ
ಮಂಗಳೂರು: ಸುರತ್ಕಲ್ ಬೀಚಿಗೆ ತೆರಳಿದ್ದ ವೇಳೆ ಚಿನ್ನಾಭರಣದ ಬ್ಯಾಗನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್ ಸಲ್ಮಾನ್ (26) ಮತ್ತು ಬಂಟ್ವಾಳ ಕೈಕಂಬ ನಿವಾಸಿ ಮಹಮ್ಮದ್ ಹುಸೈನ್ ತನ್ವೀರ್ (28) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಮಂಗಳೂರು ನಗರ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿರ್ಯಾದಿದಾರರು ದಿನಾಂಕ:26-08-2018 ರಂದು ಸಂಬಂಧಿಕರ ಮನೆಯಾದ ಮಂಗಳೂರು ತಾಲೂಕು ಸುರತ್ಕಲ್ನ ಚೊಕ್ಕಬೆಟ್ಟು ಎಂಬಲ್ಲಿಗೆ ಹೋದವರು ನಂತರ ವಾಪಾಸು ಮನೆಗೆ ಹೋಗುವ ಸಮಯ ಸುರತ್ಕಲ್ ಗ್ರಾಮದ ಮುಕ್ಕ ಮಲ್ಲಮಾರ್ ಬೀಚಿಗೆ ಹೋಗುವ ಬಗ್ಗೆ ತೀರ್ಮಾನಿಸಿ, ತಾನು ಧರಿಸಿದ್ದ ಚಿನ್ನಾಭರಣಗಳನ್ನು ತನ್ನ ಹ್ಯಾಂಡ್ ಬ್ಯಾಂಗ್ ನಲ್ಲಿ ಹಾಕಿ, ಬೀಚಿಗೆ ಹೋಗಿದ್ದು, ಬೀಚಿನಲ್ಲಿರುವ ಸಮಯ 2.00 ಗಂಟೆ ಸುಮಾರಿಗೆ ಆರೋಪಿಗಳಾದ ಸಲ್ಮಾನ್ ಖಾನ್ ಮತ್ತು ತನ್ವೀರ್ ಎಂಬವರು ಪಿರ್ಯಾದಿದಾರರು ಸಮುದ್ರ ನೋಡುತ್ತಿರುವ ಸಮಯ ಸಲ್ಮಾನ್ ಖಾನ್ ಎಂಬಾತನು ಪಿರ್ಯಾದಿದಾರರ ಹಿಂದಿನಿಂದ ಬಂದು ಅವರ ಹ್ಯಾಂಡ್ ಬ್ಯಾಗನ್ನು ಎಳೆದುಕೊಂಡು ಸುಲಿಗೆ ಮಾಡಿ ಇಬ್ಬರೂ ಅಲ್ಲಿಂದ ಓಡಿ ಪರಾರಿಯಾಗಿರುತ್ತಾರೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ.ಡಿ.ಎಸ್ ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಕೆ.ಜಿ ಹಾಗೂ ಠಾಣಾ ಸಿಬ್ಬಂದಿಯವರು ದಿನಾಂಕ: 04-09-2018 ರಂಧು ಆರೋಪಿಗಳನ್ನು ತೊಕ್ಕೊಟ್ಟು ಕಲ್ಲಾಪು ಬಳಿ ದಸ್ತಗಿರಿಮಾಡಿದ್ದು, ಆರೋಪಿಗಳಿಂದ ಪ್ರಕರಣಕ್ಕೆ ಸಂಭಂದಿಸಿದಂತೆ ರಾಬರಿ ಮಾಡಿದ್ದ ಸುಮಾರು 336.34 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ 8,50,000 ಮತ್ತು ಕೆಎ-19-ಇ ಎಕ್ಸ್-2918 ಅ್ಯಕ್ಸಿಸ್ ದ್ವಿಚಕ್ರ ವಾಹನ ಅಂದಾಜು ಮೌಲ್ಯ 50,000 ಮತ್ತು 2ನೇ ಆರೋಪಿಯಿಂದ ಕೆಎ-19-ಎಂಸಿ-4170 ನೇ ಹುಂಡೈ ಇಯಾನೋ ಕಾರು ಅಂದಾಜು ಮೌಲ್ಯ 2,50,000 ನೇದನ್ನು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 11,50,000 ರೂ ಆಗಿರುತ್ತದೆ.