ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಪದ್ಮಶ್ರೀ ಹಾಜಬ್ಬ ಮನವಿ
ಮಂಗಳೂರು : ನಗರಗಳ ನಾಗರೀಕರಿಗೆ ಸ್ವಚ್ಚ, ಸುಸ್ಥಿರ, ಉತ್ತಮ ಪರಿಸರದ ಸುಲಲಿತ ಜೀವನಕ್ಕಾಗಿ ಯೋಗ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಸಚಿವಾಲಯವು ಸಮೀಕ್ಷೆಯನ್ನು ನಡೆಸುತ್ತಿದ್ದು, ಮಂಗಳೂರಿನ ಸಾರ್ವಜನಿಕರು https://eol2019.org/CitizenFeedback ಆನ್ಲೈನ್ ಮುಖಾಂತರ ತಮ್ಮ ಅಭಿಪ್ರಾಯವನ್ನು ವಿದ್ಯುನ್ಮಾನ ವಾಹಿನಿ, ಟ್ವಿಟ್ಟರ್ ಮತ್ತು ಫೇಸ್ಬುಕ್ @SmartCitiesMission, @easeofliving2019 ಫೆಬ್ರವರಿ 29ರ ವರೆಗೆ ಕೆಳಗಿನ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ: www.mangalurusmartcity.net ದೂರವಾಣಿ: 0824-2986321 https://eol2019.org/CitizenFeedback @SmartCitiesMission ಫೇಸ್ಬುಕ್ – @easeofliving2019 nélÖgï – @easeofliving19 @MoHUA. ಸಮೀಕ್ಷೆಯ ಆಧಾರಿತ ವಿಧಾನದಿಂದ ನಗರಗಳ ಯೋಜನೆ ಮತ್ತು ನಿರ್ವಹಣೆಗೆ ಅಂತಿಮವಾಗಿ ಸರಿಯಾದ ಯೋಜನೆಯತ್ತ ಸಾಗಲು ಸಹಾಯ ಮಾಡುತ್ತದೆ.
ಪ್ರಶ್ನೆಗಳ ವಿವರ : ನಿಮ್ಮ ನಗರದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೈಗೆಟುಕುವುದು ಎಂದು ನೀವು ಎಷ್ಟು ಮಟ್ಟಿಗೆ ಒಪ್ಪುತ್ತೀರಿ/ಒಪ್ಪುವುದಿಲ್ಲ?, ನಿಮ್ಮ ನಗರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯುವುದು ಕೈಗೆಟುಕುವುದು ಎಂದು ನೀವು ಎಷ್ಟರ ಮಟ್ಟಿಗೆ ಒಪ್ಪುತ್ತೀರಿ/ಒಪ್ಪುವುದಿಲ್ಲ?, ನಿಮ್ಮ ನಗರದಲ್ಲಿ ಬಾಡಿಗೆ / ವಸತಿ ಕೈಗೆಟುಕುವುದು ಎಂದು ನೀವು ಎಷ್ಟರ ಮಟ್ಟಿಗೆ ಒಪ್ಪುತ್ತೀರಿ?, ನಿಮ್ಮ ನಗರದ ಸ್ವಚ್ಚತೆಯ ಸ್ಥಿತಿಯಲ್ಲಿ ನೀವು ಎಷ್ಟು ತೃಪ್ತರಾಗಿದ್ದೀರಿ? ತುಂಬ ತೃಪ್ತಿಯಾಯಿತು.,
ನಿಮ್ಮ ನಗರದಲ್ಲಿ ಕುಡಿಯುವ ನೀರು ಸರಬರಾಜನ್ನು ನೀವು ಹೇಗೆ ರೇಟ್ ಮಾಡುತ್ತೀರಿ? ನಿಮ್ಮ ನಗರದಲ್ಲಿ ನೀರಿನ ಲಾಗಿಂಗ್ ಸಮಸ್ಯೆಗಳನ್ನು ನೀವು ಎಷ್ಟು ಬಾರಿ ಎದುರಿಸುತ್ತೀರಿ?, ನಿಮ್ಮ ನಗರದಲ್ಲಿ ಪ್ರಯಾಣವು ಸುರಕ್ಷಿತವಾಗಿದೆ ಎಂದು ನೀವು ಎಷ್ಟರ ಮಟ್ಟಿಗೆ ಒಪ್ಪುತ್ತೀರಿ/ಒಪ್ಪುವುದಿಲ್ಲ?, ನಿಮ್ಮ ನಗರವು ವಾಸಿಸಲು ಸುರಕ್ಷಿತ ಮತ್ತು ಸುರಕ್ಷಿತ ಸ್ಥಳವಾಗಿದೆ ಎಂದು ನೀವು ಎಷ್ಟರ ಮಟ್ಟಿಗೆ ಒಪ್ಪುತ್ತೀರಿ/ ಒಪ್ಪುವುದಿಲ್ಲ?, ನಿಮ್ಮ ನಗರದಲ್ಲಿ ಅಗ್ನಿಶಾಮಕ ದಳ ಮತ್ತು ಆಂಬುಲೆನ್ಸ್ ನಂತಹ ತುರ್ತು ಸೇವೆಗಳ ದಕ್ಷತೆಯನ್ನು ನೀವು ಎಷ್ಟು ಉತ್ತಮವಾಗಿ ರೇಟ್ ಮಾಡಿತ್ತೀರಿ?, ನಿಮ್ಮ ಅಭಿಪ್ರಾಯದಲ್ಲಿ ನಿಮ್ಮ ನಗರದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳು ಎಷ್ಟು ಸುರಕ್ಷಿತ?, ಜೀವನೋಪಾಯವನ್ನು ಪಡೆಯಲು ಬಯಸುವವರಿಗೆ ಈ ನಗರವು ದೊಡ್ಡ ಅವಕಾಶಗಳನ್ನು ನೀಡುತ್ತದೆ ಎಂಬ ಹೇಳಿಕೆಯನ್ನು ನೀವು ಎಷ್ಟು ಮಟ್ಟಿಗೆ ಒಪ್ಪುತ್ತೀರಿ ಅಥವಾ ಒಪ್ಪುವುದಿಲ್ಲ?,
ನಿಮ್ಮ ನಗರದಲ್ಲಿನ ಜೀವನ ವೆಚ್ಚವನ್ನು ಪರಿಗಣಿಸಿ, ಯೋಗ್ಯವಾದ ಜೀವನ ಮಟ್ಟವನ್ನು ಪಡೆಯಲು ನಿಮ್ಮ ಮನೆಯ ಆದಾಯವು ಸೂಕ್ತವೆಂದು ಭಾವಿಸುತ್ತೀರಾ?, ನಿಮ್ಮ ದೃಷ್ಟಿಯಲ್ಲಿ, ನಿಮ್ಮ ನಗರದಲ್ಲಿ ಗಾಳಿಯ ಗುಣಮಟ್ಟ ತೃಪ್ತಿಕರವೇ? ನಿಮ್ಮ ನಗರದಲ್ಲಿ ಹಸಿರು ಹೊದಿಕೆಯ ವ್ಯಾಪ್ತಿಯಲ್ಲಿ ನೀವು ಎಷ್ಟು ತೃಪ್ತರಾಗಿದ್ದೀರಿ?, ನಿಮ್ಮ ನಗರದಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟದಿಂದ ನೀವು ಎಷ್ಟು ತೃಪ್ತರಾಗಿದ್ದೀರಿ? ನಿಮ್ಮ ನಗರವು ಕೈಗೆಟುಕುವ ವಿದ್ಯುತ್ ಸರಬರಾಜನ್ನು ಒದಗಿಸುತ್ತದೆ ಎಂದು ನೀವು ಎಷ್ಟು ಮಟ್ಟಿಗೆ ಒಪ್ಪುತ್ತೀರಿ ಅಥವಾ ಒಪ್ಪುದಿಲ್ಲ?.
ಫೆಬ್ರವರಿ 24ರ ವರೆಗಿನ ಸಮೀಕ್ಷೆಯಂತೆ ಮಂಗಳೂರು 5ನೇ ಸ್ಥಾನದಲ್ಲಿದ್ದು, ಅತೀ ಹೆಚ್ಚು ನಾಗರಿಕರ ಅಭಿಪ್ರಯಾ ಅವಶ್ಯವಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್ಸಿಟಿ ಇವರ ಪ್ರಕಟಣೆ ತಿಳಿಸಿದೆ.
ಪದ್ಮಶ್ರೀ ಹಾಜಬ್ಬ ಮನವಿ : ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಹರೇಕಳ ಹಾಜಬ್ಬ ಅವರು ಗುರುವಾರ ಮಂಗಳೂರು ಸ್ಮಾರ್ಟ್ಸಿಟಿ ಕಚೇರಿಗೆ ಭೇಟಿ ನೀಡಿದರು. ಕೇಂದ್ರ ಸರಕಾರ ನಡೆಸುತ್ತಿರುವ ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಮಂಗಳೂರು ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮೀಕ್ಷೆಯನ್ನು ಯಶಸ್ಸಿಗೊಳಿಸಬೇಕು. ಜನರ ಆದ್ಯತೆಗಳನ್ನು ಗುರುತಿಸಲು ಈ ಸಮೀಕ್ಷೆ ಬಹಳ ಸಹಕಾರಿಯಾಗಲಿದ್ದು, ಜನತೆ ಪಾಲ್ಗೊಳ್ಳಲು ಹಾಜಬ್ಬ ಮನವಿ ಮಾಡಿದ್ದಾರೆ.