ಸುಳ್ಯದಲ್ಲಿ ಕಂಟೈನರ್ ಮತ್ತು ರಿಕ್ಷಾ ನಡುವೆ ಅಫಘಾತ – ತಂದೆ ಮಗು ಸಾವು
ಸುಳ್ಯ: ಕಂಟೈನರ್ ಮತ್ತು ರಿಕ್ಷಾ ನಡುವೆ ನಡೆದ ಅಫಘಾತದಲ್ಲಿ ಗಂಡ ಮತ್ತು ಮಗು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸುಳ್ಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರರನ್ನು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಚಿತ್ತರಂಜನ್ ಮತ್ತು ಅವರ ಮಗ ಲಿಯಾ ಎಂದು ಗುರುತಿಸಲಾಗಿದೆ
ಮಾರ್ಚ್ 24ರಂದು ಮೃತ ಚಿತ್ತರಂಜನ್ ಅವರ ಪತ್ನಿ ಮಂಜುಳಾ ಮತ್ತು ಮಗು ಲಿಯಾ ಅವರೊಂದಿಗೆ ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮದ ಅರಂಬೂರು ಮರದ ಮಿಲ್ ಬಳಿ ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸೀತಾರಾಮ ಆಟೋರಿಕ್ಷಾ ನ೦ KA21A3753 ನೇಯದು ರಲ್ಲಿ ಪೆರಾಜೆ ಕಡೆಗೆ ಹೋಗುತ್ತಿದ್ದಾಗ ಸಮಯ ಸುಮಾರು 21:30 ಗಂಟೆಗೆ ಕಂಟೈನಲ್ ಲಾರಿಯನ್ನು ಅದರ ಚಾಲಕ ರಸ್ತೆ ಬದಿ ನಿಲ್ಲಿಸಿ ದುರಸ್ತಿ ಪಡಿಸುತ್ತಿದ್ದಾಗ ಟಯರಯೊಂದನ್ನು ರಸ್ತೆಯಲ್ಲಿ ಹಾಕಿದ್ದು ಆಟೋ ರಿಕ್ಷಾವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದ ಸೀತಾರಾಮ ಅವರು ಟಯರಿನ ಮೇಲೆ ರಿಕ್ಷಾವನ್ನು ಹತ್ತಿಸಿದ ಪರಿಣಾಮ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಗೆ ಒರೆಸಿಕೊಂಡು ಹೋದಾಗ ಮಂಜುಳಾರ ಮಗು ಲಿಯಾ ಮತ್ತು ಗಂಡ ಚಿತ್ತರಂಜನ್ ಎಂಬವರು ರಸ್ತೆಗೆ ಎಸೆಯಲಪಟ್ಟು ತಲೆಗೆ ಗಂಭೀರ ಗಾಯಗೊಂಡು ಮೃತ ಪಟ್ಟಿದ್ದಾರೆ.
ಘಟನೆ ಕುರಿತಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.