ಸುಳ್ಯದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪತ್ರಿಕಾ ದಿನಾಚರಣೆ
ಸುಳ್ಯ: ಕರ್ನಾಟಕ ಜರ್ನಲಿಸ್ಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ – 2020 ಸುಳ್ಯದ ಗ್ರ್ಯಾಂಡ್ ಪರಿವಾರ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ವಿಶೇಷ ಉಪನ್ಯಾಸ ನೆರವೇರಿಸಿದ ದ.ಕ.ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರಾನಾಥ ಗಟ್ಟಿ ಕಾಪಿಕಾಡ್ ರವರು ” ಕೋವಿಡ್ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು ಆತಂಕವನ್ನು ಬಿತ್ತಿ ಆತಂಕವನ್ನೆ ಬೆಳೆಸುತ್ತಿವೆ ಹೊರತು ಜನರಿಗೆ ಧೈರ್ಯ ತುಂಬಿಸುವ ಕೆಲಸ ಮಾಡುತ್ತಿಲ್ಲ. ಸರಕಾರವನ್ನುಮಾಧ್ಯಮಗಳು ವಿಮರ್ಶಿಸಬೇಕೇ ಹೊರತು ಓಲೈಸಬಾರದು. ಓಲೈಸಿದರೆ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಅವು ಸೋಲುತ್ತವೆ ” ಎಂದು ಹೇಳಿದರು.
“ಮಲೆನಾಡ ಮಡಿಲಿನ ಸುಳ್ಯದಲ್ಲಿ ಹುಟ್ಟಿ, ಕರಾವಳಿಯ ತುಳುನಾಡಿನಲ್ಲಿ ಬೆರೆತು, ಕನ್ನಡದಲ್ಲಿ ಕೃಷಿ ಮಾಡಿ ಬದುಕಿನ ವಿವಿಧ ಮಗ್ಗುಲುಗಳನ್ನು ಕಂಡ ನನಗೆ ನಿಮ್ಮ ಸನ್ಮಾನದಿಂದ ಇಂದು ಮನಸ್ಸು ತುಂಬಿ ಬಂದಿದೆ” ಎಂದವರು ಹೇಳಿದರು. ಸಂಕಪ್ಪ ಸಾಲಿಯಾನ್ ಮತ್ತು ತೇರಪ್ಪ ಮಣಿಯಾಣಿಯವರು ಕೃತಜ್ಞತೆ ಸಲ್ಲಿಸಿದರು .
ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಅಭಿನದನಾ ಭಾಷಣ ಮಾಡಿದರು.
ಸಭಾಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ವಹಿಸಿದ್ದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ , ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಜೆ.ಕೆ.ರೈ ಮುಖ್ಕ ಅತಿಥಿಗಳಾಗಿದ್ದರು. ಪತ್ರಿಕಾ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ಬಹುಮಾನಿತರಾದ ಕು.ಚರಿಷ್ಮಾ ಕಡಪಳ, ಸಂದೇಶ್ ಕೊಡಿಯಾಲಬೈಲ್ ಹಾಗೂ ಆಯಿಷತ್ ಜುಮಾನ ರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಸಂಘದ ನಿಯೋಜಿತ ಅಧ್ಯಕ್ಷ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ಖಜಾಂಚಿ ಉಮೇಶ್ ಮಣಿಕ್ಕರ ವಂದಿಸಿದರು. ರಮೇಶ್ ನೀರಬಿದಿರೆ ಮತ್ತು ಪೂಜಾಶ್ರೀ ಪೈಚಾರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಡ ಎಲ್ಲರಿಗೆ ಸ್ಯಾನಿಟೈಸರ್ ನೀಡಿ ಉಷ್ಣತಾ ಮಾಪಕದಲ್ಲಿ ತಪಾಸಣೆ ಮಾಡುವ ವ್ಯವಸ್ಥೆ ಅಳವಡಿಸಲಾಗಿತ್ತು.