ಸುಳ್ಯ ಅನ್ಸಾರಿಯಾ ಯತೀಂಖಾನಕ್ಕೆ ಸಚಿವ ಝಮೀರ್ ಭೇಟಿ
ಮಂಗಳೂರು: ಎಲ್ಲಾ ಧರ್ಮಗಳು ಶಾಂತಿ ಸೌಹಾರ್ಧತೆಯನ್ನು ಬೋಧಿಸುತ್ತದೆ. ಧಾರ್ಮಿಕ ಕ್ಷೇತ್ರಗಳು, ಸರ್ವಧರ್ಮ ಸಾಮರಸ್ಯ ಕೇಂದ್ರವಾಗಿ ಬೆಳೆಯಬೇಕು. ಧಾರ್ಮಿಕ ಶಿಕ್ಷಣ ಪಡೆದಾಗ ಆ ಸಮಾಜವು ಸುಸಂಸ್ಕೃತವಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಮದರಸ ಶಿಕ್ಷಣವನ್ನು ಸಬಲೀಕರಣಗೊಳಿಸಲು ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ವ್ಯವಸ್ಥೆಯಡಿ ಕಂಪ್ಯೂಟರ್ ಲೈಬ್ರರಿ, ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮದರಸ ಆಧುನೀಕರಣ ಯೋಜನೆ ಜಾರಿಗೆ ತಂದಿದ್ದು, ಪ್ರತೀ ಮದರಸಕ್ಕೆ ರೂ. 10 ಲಕ್ಷ ಅನುದಾನ ನೀಡಲಾಗುವುದು ಎಂದು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹಮದ್ ಖಾನ್ ಹೇಳಿದರು.
ಸುಳ್ಯ ಅನ್ಸಾರಿಯಾ ಅನಾಥಾಶ್ರಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಕಣಚೂರ್ ಮೋನ್ ಹಾಜಿ ವಹಿಸಿದ್ದರು. ಜಿಲ್ಲಾ ವಕ್ಫ್ ಸದಸ್ಯರುಗಳಾದ ಕೆ.ಎಂ. ಮುಸ್ತಫ, ನೂರುದ್ದೀನ್ ಸಾಲ್ಮರ, ಸುಲೈಮಾನ್ ಆಸೈಗೋಳಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.