ಸುಳ್ಯ ವಸತಿ ಗೃಹದಲ್ಲಿ ಯುವಕ-ಯುವತಿ ನೇಣು ಬಿಗಿದು ಆತ್ಮಹತ್ಯೆ

Spread the love

ಸುಳ್ಯ ವಸತಿ ಗೃಹದಲ್ಲಿ ಯುವಕ-ಯುವತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ: ನಗರದ ವಸತಿ ಗೃಹವೊಂದರಲ್ಲಿ ಯುವಕ ಮತ್ತು ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

ಮೃತರನ್ನು ಸುಳ್ಯ ತಾಲೂಕಿನ ಐವರ್ನಾಡಿನ ಕಟ್ಟತ್ತಾರಿನ ದರ್ಶನ್ (20) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಮಾಜೆಯ ಇಂದಿರಾ (19) ಎಂದು ಗುರುತಿಸಲಾಗಿದೆ.

ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದ್ದು ಇಬ್ಬರು ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ಯುವಕ ಭಾನುವಾರ ಸಂಜೆ ವಸತಿ ಗೃಹದಲ್ಲಿ ಕೊಠಡಿಯನ್ನು ಕಾದಿರಿಸಿದ್ದು ಯುವತಿ ಕೂಡ ಆಗಮಿಸಿದ್ದಳು ಎನ್ನಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲಿ

ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love