ಸುಳ್ಯ -ಸಂಪಾಜೆ ಸಂಪತ್ ಕುಮಾರ್ ಕೊಲೆ – ನಾಲ್ವರ ಬಂಧನ
ಮಂಗಳೂರು: ಸುಳ್ಯ ಸಂಪಾಜೆ ಕಲ್ಲುಗುಂಡಿ ನಿವಾಸಿ ಸಂಪತ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರು ಸುಳ್ಯದವರಾಗಿದ್ದು ಆರೋಪಿಗಳ ಗುರುತು ಹಚ್ಚುವ ಕವಾಯತು ನಡೆಸಲು ಬಾಕಿ ಇರುವುದರಿಂದ ತನಿಖಾ ಸಲುವಾಗಿ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ
ಆರೋಪಿಗಳನ್ನು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಎಂಬಲ್ಲಿ -ಸುಬ್ರಹ್ಮಣ್ಯ ಬಿಸ್ಥೆ ಘಾಟ್ ರಸ್ತೆಯಲ್ಲಿ ಕಾರಿನಲ್ಲಿ ತಲೆಮರೆಸಿಕೊಳ್ಳಲು ಕೆಎ 12 ಎಂ ಎ4385 ಸ್ವಿಫ್ಟ್ ಕಾರಿನಲ್ಲಿ ತೆರುಳುತ್ತಿದ್ದವರನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿರುವುದಾಗಿ. ಈಗಾಗಲೇ ಕೃತ್ಯಕ್ಕೆ ಬಳಸಿರುವ ಕಾಲಿಸ್ ವಾಹನ ಕೆಎ 19 ಎಂಎಫ್ 0789 ನೆಯನ್ನು ವಾಹನವನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ. ಆರೋಪಿತರು ಗಳು ಕೊಲೆ ಮಾಡಲು ಮೂರು ಬಂದೂಕು, ಒಂದು ಕತ್ತಿ ಮತ್ತು ಒಂದು ಚೂರಿಯನ್ನು ಉಪಯೋಗಿಸುವುದಾಗಿ. ಪ್ರಕರಣದಲ್ಲಿ ತನಿಖೆ ಮುಂದುವರೆದಿರುತ್ತದೆ.
ಪ್ರಕರಣದಲ್ಲಿ ಕೊಲೆಯಾದ ಸಂಪತ್ ಎಂಬಾತನು 2019 ನೇ ಸಾಲಿನಲ್ಲಿ ಮಡಿಕೇರಿಯಲ್ಲಿ ನಡೆದ ಕಳಗಿ ಬಾಲಚಂದ್ರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಪ್ರಸ್ತುತ ಜಾಮೀನು ಪಡೆದುಕೊಂಡು ಸುಳ್ಯದ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ದಾಗಿದೆ. ಆರೋಪಿತರುಗಳು ಕಳಗಿ ಬಾಲಚಂದ್ರ ಅವರನ್ನು ಸಂಪತ್ ಕೊಲೆ ಮಾಡಿರುವ ಬಗ್ಗೆ ದ್ವೇಷದಿಂದ ಈ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಸಿ ಪಿ ಐ ಸುಳ್ಯ ನವೀನ್ ಚಂದ್ರ ಜೋಗಿ ರವರ ನೇತೃತ್ವದಲ್ಲಿ ಪಿ ಎಸ್ ಐ ಹರೀಶ್ ತಂಡ ಹಾಗು ಡಿ ಸಿ ಐ ಬಿ ತಂಡ ಪತ್ತೆ ಕಾರ್ಯಾಚರಣೆ ನಡೆಸಿರುತ್ತಾರೆ.