ಸೆಪ್ಟೆಂಬರ್24 ರಿಂದ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ ಅವಕಾಶ
ಮಂಗಳೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮೃಗಾಲಯ, ಲೇಕ್ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕøತಿ ಗ್ರಾಮವನ್ನು (ವಿಜ್ಞಾನ ಕೇಂದ್ರ ಮತ್ತು ತಾರಾಲಯ ಹೊರತುಪಡಿಸಿ) ಸೆಪ್ಟೆಂಬರ್24 ರಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು.
ವೀಕ್ಷಕರು ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸು (ಮಾಸ್ಕ್) ಧರಿಸಿ ವೀಕ್ಷಿಸಬಹುದಾಗಿದೆ. ಹಾಗೂ ಪ್ರತಿ ಸೋಮವಾರ ವಾರದ ರಜಾ ದಿನವಾಗಿರುತ್ತದೆ ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.