Home Mangalorean News Kannada News ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ

ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ

Spread the love

ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ

ಮಂಗಳೂರು: ಕಳೆದೆರಡು ತಿಂಗಳಿನಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಮುಚ್ಚಲ್ಪಟ್ಟ ಸೆಲೂನ್ ಶಾಪ್ ಗಳನ್ನು ಇಂದಿನಿಂದ ಸರಕಾರ ತೆರೆಯಲು ಅನುಮತಿ ನೀಡಿದ್ದು ಈ ಕೆಳಗಿನ ಮುಂಜಾಗ್ರತೆಗಳನ್ನು ವಹಿಸಲು ಸರಕಾರ ಸೂಚನೆ ನೀಡಿದೆ

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ:
1. ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವ ವ್ಯಕ್ತಿಗಳಿಗೆ ಒಳಗೆ ಪ್ರವೇಶ ನೀಡುವಂತಿಲ್ಲ.
2. ಮುಖ ಗವಸು ಇಲ್ಲದ (ಗ್ರಾಹಕರು ಮತ್ತು ಸಿಬ್ಬಂದಿ) ವ್ಯಕ್ತಿಗಳಿಗೆ ಪ್ರವೇಶ ನಿಷಿದ್ಧ.
3. ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಲಭ್ಯವಿರುವಂತೆ ವ್ಯವಸ್ಥೆ ಮಾಡಿರಬೇಕು.
4. ಯಾವಾಗಲೂ ಎಲ್ಲಾ ಸಿಬ್ಬಂದಿಯೂ ಕಡ್ಡಾಯವಾಗಿ ಮುಖಗವಸು, ತಲೆಗೆ ಟೋಪಿ ಮತ್ತು ಏಪ್ರನ್ ಧರಿಸಬೇಕು.
5. ಪ್ರತಿಯೊಬ್ಬ ಗ್ರಾಹಕನಿಗೆ ಪ್ರತ್ಯೇಕವಾಗಿ ಬಳಸಿದ ಎಸೆಯಬಹುದಾದ ಟವೆಲ್/ಪೇಪರ್ ಶೀಟ್ ಬಳಕೆ
ಮಾಡಬೇಕು.
6. ಪ್ರತಿಯೊಬ್ಬ ಗ್ರಾಹಕನಿಗೆ ಬಳಕೆ ಮಾಡಿದ ಬಳಿಕ ಎಲ್ಲ ಸಾಧನಗಳನ್ನು 30 ನಿಮಿಷಗಳ ಕಾಲ ಶೇ.7 ರ ಲೈಸಲ್ ಬಳಸಿ ಸೋಂಕು ನಿವಾರಣೆ ಮಾಡಬೇಕು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಾಧನಗಳನ್ನು ಬಳಸುವಂತೆ ಸಲಹೆ ಮಾಡಲಾಗಿದೆ. ಒಂದು ಸೆಟ್ ಸಾಧನಗಳು ಬಳಕೆ ಯಲ್ಲಿದ್ದಾಗ ಇನ್ನೊಂದು ಸೆಟ್ ಅನ್ನು ಸೋಂಕು ನಿವಾರಣೆ ಮಾಡಲು ಇಡಬಹುದಾಗಿದೆ.
7. ಪ್ರತಿ ಹೇರ್-ಕಟ್ ಮಾಡಿದ ಬಳಿಕ ಸಿಬ್ಬಂದಿ ತಮ್ಮ ಕೈಗಳನ್ನು ಸ್ಯಾನಿಟೈಸರ್ ಮಾಡಿಕೊಳ್ಳಬೇಕು.
8. ಒಂದೇ ಸಮಯದಲ್ಲಿ ಹೆಚ್ಚಿನ ಗ್ರಾಹಕರು ಪ್ರವೇಶಿಸುವುದನ್ನು ತಡೆಯಲು ಗ್ರಾಹಕರ ಸಮಯವನ್ನು ಕಾಯ್ದಿರಿಸುವ ಅಥವಾ ಟೋಕನ್ ವ್ಯವಸ್ಥೆ ಮೂಲಕ ಹೆಚ್ಚಿನ ಜನ ಸಾಂದ್ರತೆ ಉಂಟಾಗದಂತೆ ನಿಯಂತ್ರಿಸುವುದು,
9, ಆಸನಗಳ ನಡುವೆ ಸಾಕಷ್ಟು ಅಂತರ (ಕನಿಷ್ಠ 1 ಮೀಟರ್) ಇರುವಂತೆ ನಿರ್ವಹಣೆ ಮಾಡುವುದು.
10. ನೆಲ, ಲಿಫ್ಟ್, ಲಾಂಜಾ/ಸುತ್ತಲಿನ ಪ್ರದೇಶ, ಮೆಟ್ಟಿಲು ಮತ್ತು ಕೈಹಿಡಿಕೆಗಳು ಸೇರಿದಂತೆ ಎಲ್ಲ ಜಾಗಗಳನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಶೇ.1ರ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಮೂಲಕ ಸೋಂಕು ನಿವಾರಣೆ ಮಾಡಿಕೊಳ್ಳಬೇಕು,
11, ಕಾರ್ಪೆಟ್ ಗಳು ಮತ್ತು ಕೊಠಡಿಯ ನೆಲದ ಭಾಗವನ್ನು ಆಗಾಗ ಸ್ವಚ್ಛಗೊಳಿಸಬೇಕು.
12. ಬೆಡ್, ಎಸೆಯಬಹುದಾದ ರೇಜರ್ ಸೇರಿದಂತೆ ಇತ್ಯಾದಿ ಚೂಪಾದ ತ್ಯಾಜ್ಯಗಳನ್ನು ಶೇ.1ರ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದೊಂದಿಗೆ ಒಡೆದು ಹೋಗ, ಸೋರಿಕೆಯಾಗುವ ಬಿಳಿ బళిర ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಏಜೆನ್ನಿಗೆ ಒಪ್ಪಿಸಬೇಕು.
13. ಪ್ರವೇಶ ದ್ವಾರದಲ್ಲಿ ಕೆಮ್ಮು ಮತ್ತು ಸಾಮಾಜಿಕ ಅಂತರದ ಬಗ್ಗೆ ಶಿಷ್ಟಾಚಾರ ಗಳಿಗೆ ಸಂಬಂಧಿಸಿದ ಪೋಸ್ಟರ್ ಲಗತ್ತಿಸಬೇಕು. ಹೆಚ್ಚಿನ ವಿವರಗಳಿಗಾಗಿ – https://karunadu.karnataka.gov.in/hfw ar-aams, sees Jea,
14, ಮುಖಗವಸು ಮತ್ತು ಕೆಮ್ಮಿಗೆ ಸಂಬಂಧಿಸಿದ ಶಿಷ್ಟಾಚಾರದ ಬಗ್ಗೆ ಎಲ್ಲ ಸಿಬ್ಬಂದಿ ಮತ್ತು ಸಹಾಯ ಮಾರ್ಗದರ್ಶನ ನೀಡಬೇಕು, ಅವರಲ್ಲಿ ಕೋವಿಡ್-19ಗೆ ಸಂಬಂಧಿಸಿದ ರೋಗಲಕ್ಷಣ ಕಂಡು ಬಂದರೆ ಅವರನ್ನು ತಕ್ಷಣ ಫೀವರ್ ಕ್ಲಿನಿಕ್.ಗೆ ಕಳುಹಿಸಬೇಕು ಅಥವಾ ಆಪ್ತ ಸಹಾಯವಾಣಿ 14.410 ಸಂಖ್ಯೆಗೆ ಕರೆ ಮಾಡಬೇಕು, ಅವರು ಸಂಪೂರ್ಣವಾಗಿ ಗುಣಮುಖರಾಗುವ ತನಕ ಅವರನ್ನು ಮತ್ತೆ ಆವರಣ ಪ್ರವೇಶಕ್ಕೆ ಅವಕಾಶ ಕೊಡಬಾರದು.


Spread the love

Exit mobile version