ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಕರ್ನಾಟಕ ಆಲ್ಪ್ಸ್ತಂಡ, ಬ್ರಾಂಡ್ ರಾಯಭಾರಿ ಪ್ರಕಟ
ಬೆಂಗಳೂರು: ಕರ್ನಾಟಕ ಆಲ್ಪ್ಸ್ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ 2016ರ ಫ್ರಾಂಚೈಸಿಯಾಗಿದ್ದು, ಸ್ಯಾಂಡಲ್ವುಡ್ ಚಿತ್ರೋದ್ಯಮದ ಖ್ಯಾತರು ಇದರೊಂದಿಗೆ ನಂಟು ಬೆಸೆದುಕೊಂಡಿದ್ದಾರೆ. ‘ಆಲ್ಪ್ಸ್’ ಅಂದರೆ ಅತಿ ಎತ್ತರದ ಕಟ್ಟಡ ಎಂದರ್ಥ. ಇದನ್ನು ಬಳಸಿಕೊಂಡು ಕರ್ನಾಟಕ ಆಲ್ಪ್ಸ್ ಹೆಸರು ನೀಡಲಾಗಿದ್ದು, ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬುದಕ್ಕೆ ದ್ಯೋತಕವಾಗಿದೆ.
ಆಲ್ಫಾ ಡಿಜಿಟೆಕ್ ಕಂಪೆನಿಯ ನಿರ್ದೇಶಕರಾಗಿರುವ ಜಸ್ಟಿನ್ ಸ್ಯಾಮುಯೆಲ್ ಜೇಮ್ಸ್ ಕರ್ನಾಟಕ ಆಲ್ಪ್ಸ್ನ ಮಾಲೀಕರು. ನಟಿ ಸಾಂಘವಿ ಕಾವ್ಯ ರಮೇಶ್ ಸಹ ಮಾಲೀಕತ್ವ ಹೊಂದಿದ್ದಾರೆ. ಮೋಸಸ್ ಟೈಷಿಕಸ್ ಅವರು ಕರ್ನಾಟಕ ಆಲ್ಪ್ಸ್ನ ವಹಿವಾಟು ನೋಡಿ ಕೊಳ್ಳುತ್ತಿದ್ದಾರೆ. ವಿನೂತನವಾದ, ಸಂಪೂರ್ಣ ಮನೋರಂಜನೆ ಒದಗಿಸುವ ಲೀಗ್ ನಡೆಸಲು ಕರ್ನಾಟಕ ಆಲ್ಪ್ಸ್ ಉದ್ದೇಶಿಸಿದೆ. ಅಲ್ಲದೇ ಸೆಲೆಬ್ರಿಟಿಗಳೂ ಬ್ಯಾಡ್ಮಿಂಟನ್ನಲಿ ್ಲತಮ್ಮ ಪ್ರತಿಭೆತೋರುವ ಅವಕಾಶವನ್ನು ಇದು ಒದಗಿಸಲಿದೆ. ಪ್ರತಿಭಾವಂತರನ್ನು ಗುರುತಿಸಿ ಅವರನ್ನು ವೃತ್ತಿಪರ ಆಟಗಾರರನ್ನಾಗಿ ರೂಪಿಸುವುದು ಲೀಗ್ನ ಗುರಿಯಾಗಿದೆ. ಇಷ್ಟೇ ಅಲ್ಲದೇ ಲೀಗ್ನಿಂದ ಸಂಗ್ರಹವಾದ ಹಣವನು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಬಾಲ ಕಾರ್ಮಿಕರ ಕಲ್ಯಾಣಕ್ಕೆ ಬಳಸಲಾಗುವುದು.
ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕರ್ನಾಟಕ ಆಲ್ಪ್ಸ್ನ ಬ್ರಾಂಡ್ ರಾಯಭಾರಿಯಾಗಿದ್ದಾರೆ. ನಟ ದಿಗಂತ್ ನೇತೃತ್ವದಲ್ಲಿರುವ ತಂಡದಲ್ಲಿ ಇಂದ್ರಜಿತ್ ಲಂಕೇಶ್, ಯೋಗೇಶ್, ರವಿಚೇತನ್, ಅರ್ಜುನ್, ಜಗದೀಶ್, ಸಾಂಘವಿ, ಐಂದ್ರಿತಾರೇ, ಕವಿತಾ ಲಂಕೇಶ್, ಸಿಂಧೂ ಲೋಕನಾಥ್ ಮತ್ತು ಕೃಷಿ ಇದ್ದಾರೆ.
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ದಕ್ಷಿಣ ಭಾರತ ಚಲನ ಚಿತ್ರೋದ್ಯಮವನ್ನು ಒಗ್ಗೂಡಿಸಲಿದೆ. ಮುಂದಿನ ವರ್ಷದಿಂದರಾಷ್ಟ್ರೀಯ ಮಟ್ಟದಲ್ಲಿ ಇದನ್ನು ನಡೆಸುವ ಎಲ್ಲ ಸಾಧ್ಯತೆ ಇದೆ. ಲೀಗಿನ ಫೈನಲ್ಗಳು ಕ್ವಾಲಾಲಂಪುರದಲ್ಲಿ ನಡೆಯಲಿದೆ. ದಕ್ಷಿಣದ ಚಿತ್ರಗಳು ಅಲ್ಲಿ ಹೆಚ್ಚು ಜನಪ್ರಿಯವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಸ್ಟಿನ್ ಸ್ಯಾಮುಯೆಲ್ ಜೇಮ್ಸ್ ಅವರು “ಎಲ್ಲ ಆಟಗಾರರಿಗೂ ತಂಡದ ಮಾಲೀಕರು ಸಹಜವಾಗಿಯೇ ಸ್ಫೂರ್ತಿ ನೀಡುತ್ತಾರೆ. ಉತ್ತಮ ತಂಡದ ಸದಾ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ತಂಡದ ಹಿತಾಸಕ್ತಿಯ ದೃಷ್ಟಿಯಿಂದ ಇದು ಮುಖ್ಯ’ ಎಂದು ಅಭಿಪ್ರಾಯಪಟ್ಟರು.
22 ವರ್ಷಗಳಲ್ಲಿ 99ಕ್ಕೂ ಹೆಚ್ಚು ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಸಾಂಘವಿ ಮಾತನಾಡಿ ಪುನೀತ್ರಾಜಕುಮಾರ್ ಅವರು ತಂಡದ ಬ್ರಾಂಡ್ ರಾಯಭಾರಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪುನೀತ್ ಅವರು ಉತ್ತಮ ಸ್ಕ್ವಾಷ್ ಮತ್ತು ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ. ಅಲ್ಲದೇ ಸಾಕಷ್ಟು ಸಂಖ್ಯೆಯಲ್ಲಿ ನಟನಟಿಯರು ಬ್ಯಾಡ್ಮಿಂಟನ್ ಕ್ರೀಡೆಯನ್ನು ಇಷ್ಟಪಡುತ್ತಾರೆ. ಲೀಗ್ನ ಯಶಸ್ಸಿಗೆ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ ಎಂದರು. ಪ್ರಕಾಶ್ ಪಡುಕೋಡೆ ಸ್ಪೋಟ್ರ್ಸ್ ಮ್ಯಾನೇಜ್ಮೆಂಟ್ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಜಯ ಲ್ಯಾನ್ಸಿ ಅವರೂ ತಂಡದ ತರಬೇತುದಾರರಾಗಿದ್ದಾರೆ. ‘ತಂಡ ಸ್ಪೂರ್ತಿತಂಡ ವಿಜಯಕ್ಕೆ ಮುಖ್ಯ ಕಾರಣವಾಗಲಿದೆ’ ಎಂದು ಅವರು ಹೇಳಿದರು.
ಆಲ್ಫಾ ಡಿಜಿಟೆಕ್ ಕಂಪೆನಿಯ ವಹಿವಾಟು ಅಬಿವೃದ್ಧಿ ವಿಭಾಗದ ಮುಖ್ಯಸ್ಥರಾದ ಮೋಸಸ್ ಟೈಷಿಕಸ್ ಮಾತನಾಡಿ ಲೀಗಿನ ಪಂದ್ಯಗಳನ್ನು ಅತ್ಯಂತ ಕರಾರುವಕ್ಕಾಗಿ ರೂಪಿಸಲಾಗಿದೆ. ವಹಿವಾಟು ಉದ್ದೇಶಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅವರದು ಎತ್ತಿದ ಕೈ. ಲೀಗ್ನ ತಂಡಗಳ ವೆಚ್ಚಕ್ಕಾಗಿ ಕಂಪೆನಿಯು 1.5 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಉಳಿದ ಹಣವನ್ನು ಸಾಮಾಜಿಕ ಕೆಲಸಗಳಿಗೆ ಮೀಸಲಿಡಲಾಗಿದೆ. ಉತ್ತಮ ಪ್ರಾಯೋಜಕರಿಗಾಗಿ ಟೂರ್ನಿ ಮುಕ್ತವಾಗಿದೆ. ಪ್ರೆಸೆಟಿಂಗ್ ಸ್ಪಾನ್ಸರ್, ಪವರ್ಡ್ ಬೈ ಸ್ಪಾನ್ಸರ್, ಅಸೋಸಿಯೇಟ್ ಮತ್ತು ಸಪೋರ್ಟ್ ಸ್ಪಾನ್ಸರ್ಗಳನ್ನು ಪ್ರಾಯಜಿಸಬಹುದು.