ಸೆ.1 ರಿಂದ 13 : ರಂಜನಿ ಮೆಮೋರಿಯಲ್ ಟ್ರಸ್ಟ್ ನ ವಾರ್ಷಿಕ ಸಂಗೀತೋತ್ಸವ
ಉಡುಪಿ: ರಂಜನಿ ಮೆಮೋರಿಯಲ್ ಟ್ರಸ್ಟ್ ನ ಈ ವರ್ಷದ ವಾರ್ಷಿಕ ಸಂಗೀತೋತ್ಸವ ವಿಶಿಷ್ಟ ರೀತಿಯಲ್ಲಿ ಆಯೋಜನೆಯಾಗಿದೆ. ಸೆ.1 ರಿಂದ ಸೆ.13 ವರೆಗೆ ಫೇಸ್ ಬುಕ್ ಲೈವ್ ನಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಪ್ರತೀ ದಿನ ಬೆಳಿಗ್ಗೆ 11.45 ಮತ್ತು ಸಂಜೆ 6.30 ಕ್ಕೆ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿದೆ.
ಸೆ.1. ತಿರುಮೆಗ್ನನಂ ಟಿಪಿಎನ್ ರಮಾನಾಥನ್ ಮತ್ತು ಪಂಡಮಂಗಲಂ ಪಿ.ಜಿ.ಯುವರಾಜ್ ಅವರಿಂದ ನಾದಸ್ವರಂ, ಚೆನ್ನೈನ ಪ್ರಾರ್ಥನಾ ಸಾಯಿ ನರಸಿಂಹನ್ ಅವರಿಂದ ಕರ್ನಾಟಕ ಶಾಸ್ರ್ತೀಯ ಸಂಗೀತ ನಡೆಯಲಿದೆ. ಸೆ.2 ರಂದು ಬೆಂಗಳೂರಿನ ಸಿದ್ದಾರ್ಥ ಬೆಳ್ಮಣ್ಣು ಅವರ ಹಿಂದೂಸ್ತಾನಿ ಗಾಯನ, ಯು.ಎಸ್. ಎ, ಹ್ಯೂಸ್ಟನ್ ನಿಂದ ಕೃತಿ ಭಟ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸೆ.3 ರಂದು ಚೆನ್ನೈ ನ ಶ್ರೀರಾಮ್ ಪರಶುರಾಮ್ ಅವರಿಂದ ಉಪನ್ಯಾಸ, ರಮಣಾ ಬಾಲಚಂದ್ರನ್, ಅಣ್ಣಾಮಲೈ ಅವರಿಂದ ವೀಣಾ ವಾದನ ಜರುಗಲಿದೆ. ಸೆ.4 ರಂದು ಚೆನ್ನೈನ ಸತ್ಯನಾರಾಯಣ ಅವರಿಂದ ಕರ್ನಾಟಕ ಶಾಸ್ತ್ರೀಯ ಶೈಲಿಯ ಕೀಬೋರ್ಡ್ ವಾದನ, ಬೆಂಗಳೂರಿನ ಸ್ಪೂರ್ತಿ ರಾವ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಸೆ. 5 ರಂದು ಬೆಂಗಳೂರಿನ ಐಶ್ವರ್ಯ ವಿದ್ಯಾ ರಘುನಾಥ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಚೆನ್ನೈನ ಜೆ.ಬಿ.ಶೃತಿ ಸಾಗರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಕೊಳಲುವಾದನ ನಡೆಯಲಿದೆ.
ಸೆ.6 ರಂದು ಮೈಸೂರಿನ ಶ್ರೀಮತಿದೇವಿ ಅವರಿಂದ ಹಿಂದೂಸ್ತಾನಿ ಸಂಗೀತ, ರಂಜನಿ ಹೆಬ್ಬಾರ್ ಅವರು 2007 ರಲ್ಲಿ ನೀಡಿದ ಸಂಗೀತ ಕಚೇರಿಯ ಮರುಪ್ರಸಾರ.ಸೆ.7 , ರಘುನಾಥದಾಸ ಮಹಾರಾಜ್ ಜೀ ಅವರಿಂದ ಉಪನ್ಯಾಸ, ಅನುಪಮಾ ಭಾಗವತ್ ಅವರಿಂದ ಹಿಂದೂಸ್ತಾನಿ ಸಿತಾರ್ ವಾದನ ಜರುಗಲಿದೆ.ಸೆ.8 ರಂದು ಲಕ್ಷ್ಮೀಶ ತೋಳ್ಪಾಡಿ ಅವರಿಂದ ಉಪನ್ಯಾಸ, ಸಂಜೆ ಕು. ಸಮನ್ವಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸೆ.9 ರಂದು ರಂಜನಿ ಹೆಬ್ಬಾರ್ ಅವರ ಪ್ರತಿಮೆಯ ಅನಾವರಣ, ಸ್ವಾಮಿ ಸೂರ್ಯಪಾದ ಅವರಿಂದ ಸತ್ಸಂಗ ಭಜನೆ. ಬೆಂಗಳೂರಿನ ವಿಠಲ ರಂಗನ್ ಅವರಿಂದ ವಯೋಲಿನನ್ ವಾದನ.ಸೆ.10 ಕ್ಕೆ ಬೆಳ್ಳಾರಿ ಎಂ. ರಾಘವೇಂದ್ರ ಅವರಿಂದ ಭಕ್ತಿಸಂಗೀತ. ಶೆರ್ಟಾಲೈ ಡಾ.ಕೆ.ಎನ್,ರಂಗನಾಥ ಶರ್ಮ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸೆ.11 ರಂದು ಮಧುಸೂದನನ್ ಕಲೈಚೆಲ್ವನ್ ಅವರಿಂದ ಉಪನ್ಯಾಸ, ಒ.ಎಸ್.ತ್ಯಾಗರಾಜನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸೆ.12 ರಂದು ಅರ್ಚನಾ ಉಪಾದ್ಯಾಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರವಿಕಿರಣ್ ಅವರಿಂದ ಚಿತ್ರವೀಣಾ ವಾದನ. ಸೆ.13 ಕ್ಕೆ ಬೆಳಿಗ್ಗೆ 10 ಕ್ಕೆ ದಾಸಕೀರ್ತನಾ ಅಂತಿಮ ಸುತ್ತಿನ ಸ್ಪರ್ಧೆಮತ್ತು ಚೆನ್ನೈನ ರಾಮಕೃಷ್ಣಮೂರ್ತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರುಗಲಿದೆ. ಎಲ್ಲಾ ಕಲಾವಿದರು ತಮ್ಮ ತಮ್ಮ ಊರುಗಳಿಂದಲೇ ಫೇಸ್ ಬುಕ್ ಲೈವ್ ಮೂಲಕ ಈ ಸಂಗೀತ್ಸೋತ್ಸವದಲ್ಲಿ ಭಾಗಿಯಾಗುತ್ತಾರೆ ಎಂದು ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.