ಸೆ 12 : ಉಡುಪಿ ಜಿಲ್ಲೆಯಲ್ಲಿ 169 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 2 ಸಾವು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 169 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 13912 ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಉಡುಪಿಯ 95, ಕುಂದಾಪುರದ 47, ಕಾರ್ಕಳದ 22 ಹಾಗೂ ಇತರೆ ಜಿಲ್ಲೆಗಳ 5 ರೋಗಿಗಳು ಇದ್ದಾರೆ. 76 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 93 ಮಂದಿಗೆ ಲಕ್ಷಣಗಳು ಇಲ್ಲ.
ಪ್ರಾಥಮಿಕ ಸಂಪರ್ಕದ 58, ಐಎಲ್ಐ ಲಕ್ಷಣಗಳಿರುವ 46, ‘ಸಾರಿ’ ಲಕ್ಷಣಗಳಿರುವ 1 ಮಂದಿಗೆ, ಹಾಗೂ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ವಿದೇಶದಿಂದ ಬಂದ 6 ಮಂದಿಗೆ ಸೋಂಕು ತಗುಲಿದ್ದು, 58 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1125 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಶನಿವಾರ 915 ವರದಿಗಳು ನೆಗೆಟಿವ್ ಬಂದಿದ್ದು, 169 ಪಾಸಿಟಿವ್ ಬಂದಿವೆ. 451 ವರದಿಗಳು ಬರುವುದು ಬಾಕಿ ಇದೆ.
ಶನಿವಾರ ಒಟ್ಟು 238 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 12022 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1760 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಶನಿವಾರ 2 ಮಂದಿ ಕೊರೊನಾದಿಂದ ಸಾವನಪ್ಪಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 130 ಮಂದಿ ಸಾವನಪ್ಪಿದ್ದಾರೆ.