ಸೆ. 12 ರಂದು “ಕರ್ಮ” ತುಳು ಕಿರುಚಿತ್ರ ಬಿಡುಗಡೆ

Spread the love

ಸೆ. 12 ರಂದು “ಕರ್ಮ” ತುಳು ಕಿರುಚಿತ್ರ ಬಿಡುಗಡೆ

ಮಂಗಳೂರು: ಸಮಾಜಕ್ಕೊಂದಷ್ಟು ಸಮಾಜಿಕ ಕಳಕಳಿ ಇರುವ ತುಳು ಕಿರುಚಿತ್ರವನ್ನು ತರಬೇಕೆಂಬ ಉದ್ದೇಶದಿಂದ ಒಂದು ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು “ಕರ್ಮ” ಎಂಬ ತುಳು ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಈ ತುಳು ಕಿರುಚಿತ್ರವು ಸೆ. 12ರಂದು ಮಂಗಳೂರಿನ ಡಾನ್‍ಬಾಸ್ಕೋ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.

ಚಿತ್ರದ ಕತೆಯು ನಮ್ಮ ದೇಶದಲ್ಲಿ ಪ್ರತಿ ನಿಮಿಷಗೊಂದು ರಸ್ತೆ ಅಪಘಾತಗಳು ನಡೆದು ಹಲವು ಸಾವು-ನೋವು ಸಂಭವಿಸುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ಗುಂಪು ಸೇರುವಂತಹ ಸಾರ್ವಜನಿಕರು ಗಾಯಾಳುಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿ ಅವರ ಜೀವ ರಕ್ಷಿಸುವ ಬದಲಾಗಿ ಮೂಕ ಪ್ರೇಕ್ಷಕರಾಗಿ ನಿಂತು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆಯುತ್ತಿರುವುದು ಇತ್ತೀಚಿನ ಬೆಳವಣಿಗೆ. ಹಾಗಂತ ಕರ್ತವ್ಯ ಪ್ರಜ್ಞೆ ಮರೆತರೆ ಕೆಲವೊಬ್ಬರಲ್ಲಿ ಪಾಪ ಪ್ರಜ್ಞೆ, ಪಶ್ಚಾತ್ತಾಪ ಗಾಢವಾಗಿ ಕಾಡತೊಡಗುತ್ತೆ ಇದು ಒಂದು ರೀತಿಯಲ್ಲಿ ರೋಗವಾಗಿಯೂ ನಮ್ಮನ್ನು ಯಾವ ರೀತಿ ಹಿಂಸಿಸುತ್ತೆ ಮತ್ತು ಯಾವ ಹಂತಕ್ಕೆ ಕೊಂಡೊಯ್ಯುತ್ತೆ ಅನ್ನೋದನ್ನು ನಿರ್ದೇಶಕ ರಂಜಿತ್ ಬಜಾಲ್ “ಕರ್ಮ” ಅನ್ನುವ ಈ ತುಳು ಕಿರುಚಿತ್ರದ ಮೂಲಕ ತೋರಿಸಲು ಪ್ರಯತ್ನಿಸಿರುತ್ತಾರೆ. ಇದು ಇವರ ಎರಡನೇ ಪ್ರಯೋಗದ ಚಿತ್ರ ಈ ಹಿಂದೆ ಸೆಕೆಂಟ್ ಚಾನ್ಸ್ ಅನ್ನುವ ಕಿರುಚಿತ್ರವನ್ನು ರಚಿಸಿ ನಿರ್ದೇಶಿಸಿರುವುದು ಇಲ್ಲಿ ನೆನಪಿಸಬಹುದು. ನನ್ನ ಈ ಹೊಸ ಪ್ರಯತ್ನದ ಹುಡುಕಾಟಕ್ಕೆ ನನ್ನ ಗೆಳೆಯರುಗಳಾದ ರಕ್ಷಿತ್‍ಕುಮಾರ್, ಸಚಿನ್ ಶೆಟ್ಟಿ ಕುಂಪಲ ಹಾಗೂ ಹರಿಪ್ರಸಾದ್ ಪೇರಿಂಜೆ ಸಾಥ್ ನೀಡಿದ್ದಾರೆ. ಮುಖ್ಯ ಪಾತ್ರದಲ್ಲಿ ಹರಿಪ್ರಸಾದ್ ಪೇರಿಂಜೆ ಹಾಗೂ ಸಚಿನ್ ಶೆಟ್ಟಿ ಕುಂಪಲ ನಟಿಸಿದ್ದು ಸಿನಿಮಾಟೋಗ್ರಾಫಿ ರಕ್ಷಿತ್‍ಕುಮಾರ್, ಹಿನ್ನಲೆ ಗಾಯನ ಆಕಾಶ್ ಶಿವಮಲ್ಲು ಅವರು ನೀಡಿದ್ದಾರೆ.

ಈ ಚಿತ್ರದ ಯಶಸ್ವಿಗೆ ಕಲಾಭಿಮಾನಿಗಳ ಪ್ರೋತ್ಸಾಹವನ್ನು ನಿರ್ದೇಶಕ ರಂಜಿತ್ ಬಜಾಲ್ ಹಾಗೂ ತಂಡ ಯಾಚಿಸಿದ್ದಾರೆ. ಮಾತ್ರವಲ್ಲ ಈ ಕಿರುಚಿತ್ರದಿಂದ ಬಂದ ಸಂಪೂರ್ಣ ಗಳಿಕೆಯನ್ನು ಅನಾಥ ವೃದ್ಧಾಶ್ರಮಕ್ಕೆ ದೇಣಿಗೆಯಾಗಿ ನೀಡುವ ಉದ್ದೇಶವನ್ನಿಟ್ಟುಕೊಂಡಿರುತ್ತೇವೆ. ಈ ಕರ್ಮ ತುಳು ಕಿರು ಚಿತ್ರವು ಸೆ. 12ರಂದು ನಗರದ ಡಾನ್‍ಬಾಸ್ಕೋ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ರಂಜಿತ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love