Home Mangalorean News Kannada News ಸೆ 14- 18 : ಉಡುಪಿ ಜಿಲ್ಲೆಯಲ್ಲಿ 845 ಮಂದಿಗೆ ಕೊರೋನಾ ಪಾಸಿಟಿವ್ , 9...

ಸೆ 14- 18 : ಉಡುಪಿ ಜಿಲ್ಲೆಯಲ್ಲಿ 845 ಮಂದಿಗೆ ಕೊರೋನಾ ಪಾಸಿಟಿವ್ , 9 ಸಾವು

Spread the love

ಸೆ 14- 18 : ಉಡುಪಿ ಜಿಲ್ಲೆಯಲ್ಲಿ 845 ಮಂದಿಗೆ ಕೊರೋನಾ ಪಾಸಿಟಿವ್ , 9 ಸಾವು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯರ ಮುಷ್ಕರಿದಿಂದ ಸ್ಥಗಿತಗೊಂಡಿದ್ದ ಕೋರೋನಾ ದೈನಂದಿನ ಬುಲೆಟಿನ್ ಶುಕ್ರವಾರದಿಂದ ಮತ್ತೆ ನೀಡಲಾಗಿದ್ದು ಸೆ. 14 ರಿಂದ 18 ರವರೆಗೆ ಒಟ್ಟು 845 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 14883 ಕ್ಕೆ ಏರಿಕೆಯಾಗಿದೆ .

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಸೋಂಕಿತರಲ್ಲಿ ಉಡುಪಿಯ 578, ಕುಂದಾಪುರದ 127, ಕಾರ್ಕಳದ 114 ಹಾಗೂ ಇತರೆ ಜಿಲ್ಲೆಗಳ 26 ರೋಗಿಗಳು ಇದ್ದಾರೆ. 379 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 466 ಮಂದಿಗೆ ಲಕ್ಷಣಗಳು ಇಲ್ಲ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಸಂಪರ್ಕದ 430, ಐಎಲ್ಐ ಲಕ್ಷಣಗಳಿರುವ 215, ‘ಸಾರಿ’ ಲಕ್ಷಣಗಳಿರುವ 23 ಮಂದಿಗೆ, ಹಾಗೂ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ವಿದೇಶದಿಂದ ಬಂದ 12 ಮಂದಿಗೆ ಸೋಂಕು ತಗುಲಿದ್ದು, 165 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 92474 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

5633 ವರದಿಗಳು ನೆಗೆಟಿವ್ ಬಂದಿದ್ದು, 845 ಪಾಸಿಟಿವ್ ಬಂದಿವೆ. 209 ವರದಿಗಳು ಬರುವುದು ಬಾಕಿ ಇದೆ. ಒಟ್ಟು 865 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 13041 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1703 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ 5 ದಿನದ ಅವಧಿಯಲ್ಲಿ ಒಟ್ಟು 9 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 139 ಮಂದಿ ಸಾವನಪ್ಪಿದ್ದಾರೆ.


Spread the love

Exit mobile version