Home Mangalorean News Kannada News ಸೆ. 18: ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲು ಉಚಿತ ಸೆಮಿನಾರ್

ಸೆ. 18: ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲು ಉಚಿತ ಸೆಮಿನಾರ್

Spread the love

ಸೆ. 18: ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲು ಉಚಿತ  ಸೆಮಿನಾರ್

ಮಂಗಳೂರು:  ಶತಮಾನದ ಹಿಂದೆ ಸ್ಥಾಪನೆಯಾದ ಬಂಟರ ಯಾನೆ ನಾಡವರ ಮಾತೃಸಂಘವು ನಮ್ಮ ಅವಿಭಜಿತ ಜಿಲ್ಲೆಯ ಜನರು ವಿದ್ಯೆ ಕಲಿಯುವ ಅವಕಾಶದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈಗಿನ ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಜಾತಿ, ಮತಬೇಧವಿಲ್ಲದೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟು ನಮ್ಮ ಜಿಲ್ಲೆಯ ಸಹಸ್ರಾರು ಮಂದಿ ವಿದ್ಯಾವಂತರಾಗಲು ಕಾರಣೀಭೂತರಾಗಿದ್ದರು. ಅವರಲ್ಲಿ ನೂರಾರು ಮಂದಿ ವೈದ್ಯರು, ಇಂಜಿನಿಯರ್, ವಕೀಲರು, ಮಿಲಿಟರಿಯಲ್ಲಿ ಮತ್ತು ಕೇಂದ್ರ ಹಾಗೂ ರಾಜ್ಯಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ನಮ್ಮ ಜಿಲ್ಲೆಯ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವನ್ನು ವಹಿಸಿ, ನಮ್ಮ ಜಿಲ್ಲೆಗೆ ಗೌರವವನ್ನು ತಂದು ಕೊಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿ ಪ್ರದೇಶದ ಜನರು ಕೇಂದ್ರಿಯ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದು ತೀರಾ ಕಡಿಮೆಯಾಗಿರುತ್ತದೆ. ಇದರಿಂದ ನಮ್ಮ ಜಿಲ್ಲೆಯ ಅಭಿವೃದ್ಧಿ ಹಾಗೂ ಉದ್ಯೋಗ ಅವಕಾಶ ಮುಂತಾದ ಹಲವಾರು ವಿಷಯಗಳಲ್ಲಿ ವಂಚಿತರಾಗುವುದು ಸುಸ್ಪಷ್ಟವಾಗಿ ಕಂಡುಬರುತ್ತದೆ.

ಈ ವಿಷಯವನ್ನು ಮನವರಿಕೆ ಮಾಡಿಕೊಂಡ ಬಂಟರ ಯಾನೆ ನಾಡವರ ಮಾತೃಸಂಘವು ನವದೆಹಲಿಯ ಪ್ರಖ್ಯಾತ IAS ತರಬೇತಿ ಸಂಸ್ಥೆ ಚಾಣಕ್ಯ ಅಕಾಡಮಿ ಇವರ ಸಹಯೋಗದೊಂದಿಗೆ (UPSC)ಕೇಂದ್ರಿಯ ಲೋಕಸೇವಾ ಆಯೋಗದ IAS, IFS, IPS,  ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಲು ಮತ್ತು ಈ ಬಗ್ಗೆ ಮಾಹಿತಿ ನೀಡಲು ಉಚಿತವಾಗಿ ಸೆಮಿನಾರನ್ನು ದಿನಾಂಕ 18.09.2017ರಂದು ಮಂಗಳೂರಿನ ಟೌನ್‍ಹಾಲ್‍ನಲ್ಲಿ ಬೆಳಿಗ್ಗೆ ಗಂಟೆ 10.00ರಿಂದ ಮಧ್ಯಾಹ್ನ 2.00ಗಂಟೆಯವರೆಗೆ ನಡೆಸಲಿದೆ. ಸಕ್ಸಸ್ ಗುರು ಖ್ಯಾತಿವೆತ್ತ ಶ್ರೀ ಎ.ಕೆ ಮಿಶ್ರರವರು ಈ ಸೆಮಿನಾರನ್ನು ನಡೆಸಿಕೊಡಲಿದ್ದಾರೆ. IAS, IFS, IPS,, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಜರಾಗಲು ಆಸಕ್ತಿ ಇರುವ ನಮ್ಮ ಎರಡು ಜಿಲ್ಲೆಗಳ 45ಕ್ಕಿಂತಲೂ ಹೆಚ್ಚು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕವರ್ಗ, ಆಡಳಿತಮಂಡಳಿಯವರು ಈ ಸೆಮಿನಾರ್‍ನಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ನಿಟ್ಟೆ ಯೂನಿರ್ವಸಿಟಿಯ ಚಾನ್ಸಲರಾದ ಡಾ. ಎನ್. ವಿನಯ ಹೆಗ್ಡೆಯವರು ಈ ಸೆಮಿನಾರನ್ನು ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಅಂಬಾಸಿಡರ್ ಬಾಲಕೃಷ್ಣ ಶೆಟ್ಟಿ,   (ನಿವೃತ್ತ), ಎಸ್.ಸಿ. ಪಾಂಡ, (ನಿವೃತ್ತ)  ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸಾರಭಾರತಿ,ಇವರು ಭಾಗವಹಿಸಲಿದ್ದಾರೆ.

ಪ್ರಾಕೃತಿಕವಾದ ಎಲ್ಲಾ ಸಂಪತ್ತುಗಳಿರುವ, ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳಿರುವ, ನಮ್ಮ ಜಿಲ್ಲೆಗಳಲ್ಲಿ ಸಹಸ್ರಾರು ವಿದ್ಯಾವಂತರಿದ್ದರೂ ಅವಶ್ಯವಿರುವ ಉದ್ಯೋಗಗಳು ಸೃಷ್ಟಿಯಾಗಲಿಲ್ಲ. ಹಲವಾರು ದೊಡ್ಡ ಕೈಗಾರಿಕೆಗಳು ಬಂದರೂ ನಮ್ಮವರಿಗೆ ಉದ್ಯೋಗ ಸಿಗುತ್ತಿಲ್ಲ, ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ಹಲವಾರು ನದಿಗಳನ್ನೊಳಗೊಂಡ ಜಿಲ್ಲೆಯಾದರೂ ಸರಿಯಾದ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿರುವುದಿಲ್ಲ. ಶತಮಾನದಿಂದಲೂ ನಮಗೆ ರೈಲು ಸಂಪರ್ಕವಿದ್ದರೂ ಅನಂತರದ ವರ್ಷಗಳಲ್ಲಿ ಯಾವುದೇ ಹೆಚ್ಚಿನ ಸೌಲಭ್ಯಗಳು ಸಿಕ್ಕಿರುವುದಿಲ್ಲ. ಹಲವು ಶತಕಗಳಿಂದ ಪ್ರಯತ್ನಿಸಿದರೂ ಪಾಲ್ಘಾಟ್ ವಿಭಾಗದಿಂದ ಮಂಗಳೂರನ್ನು ವಿಂಗಡಿಸಿ ಮಂಗಳೂರು ವಿಭಾಗವನ್ನಾಗಿ ಮಾಡಬೇಕೆನ್ನುವ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪ್ರವಾಸೋದ್ಯೋಮಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳಿದ್ದರೂ ಈ ಉದ್ಯಮದ ಬೆಳವಣಿಗೆಗೆ ಯಾವುದೇ ಯೋಜನೆಗಳು ಮಾಡಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮವರ ರಾಜಕೀಯ ಇಚ್ಚಾಶಕ್ತಿಯ ಕೊರತೆ, ಆಡಳಿತದಲ್ಲಿ ಪ್ರಮುಖ ನಿರ್ಧಾರಗಳನ್ನು IAS, IFS, IPS,ಸ್ಥಾನಗಳಲ್ಲಿ ನಮ್ಮ ಜಿಲ್ಲೆಯವರು ಇಲ್ಲದೆ ಇರುವ ಕಾರಣ ನಾವು ಮೂಲಭೂತ ಸೌಕರ್ಯಗಳಾದ ವಸತಿ, ಒಳಚರಂಡಿ, ಕುಡಿಯುವ ನೀರು, ಉದ್ಯೋಗ ಹಾಗೂ ಇತರ ಹಲವಾರು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗಿದ್ದೇವೆ. ಈ ಕೊರತೆಗಳನ್ನು ನೀಗಿಸಬೇಕು, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು IAS, IFS, IPS,ಸೇವೆಗಳಲ್ಲಿ ಸೇರಿಕೊಂಡರೆ ನಮ್ಮ ಸಂಸ್ಕೃತಿ, ಆಚಾರ, ವಿಚಾರವನ್ನು ತಿಳಿದಿರುವವರು ನಮ್ಮ ಜಿಲ್ಲೆಯ ಸಮಸ್ಯೆಗಳು, ಜನರ ಆಶೋತ್ತರಗಳನ್ನು ಮನವರಿಕೆ ಮಾಡಿಕೊಂಡು ಕರಾವಳಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕೆಲಸಕಾರ್ಯಗಳನ್ನು ಮಾಡುತ್ತಾರೆ ಮತ್ತು ಈ ಉದ್ಯೋಗಲ್ಲಿರುವವರು ಸಮಾಜ ಸೇವೆ ಮಾಡುವ ಅವಕಾಶವನ್ನು ಪಡೆಯುತ್ತಾರೆ, ಅಧಿಕಾರ, ಗೌರವ, ಉದ್ಯೋಗ ಸುರಕ್ಷತೆಗಳನ್ನು ಅರಿತುಕೊಂಡು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುತ್ತಾರೆ ಎಂಬ ಆಶಯದೊಂದಿಗೆ ಈ ತರಬೇತಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಸೆಮಿನಾರ್‍ನ ಬಗ್ಗೆ ಮತ್ತು ತರಬೇತಿಯ ಬಗ್ಗೆ ಚಾಣಕ್ಯ ಅಕಾಡಮಿಯ ಕಾರ್ಯತಂತ್ರದ ಪ್ರಮುಖರಾದ ಯಚನೀತ್ ಪುಷ್ಕರ್ಣರವರು ತಮಗೆ ಅಗತ್ಯ ಮಾಹಿತಿಯನ್ನು ನೀಡುತ್ತಾರೆ.

 


Spread the love

Exit mobile version