ಸೆ 19 : ಉಡುಪಿ ಜಿಲ್ಲೆಯಲ್ಲಿ 215 ಮಂದಿಗೆ ಕೊರೋನಾ ಪಾಸಿಟಿವ್ , 1 ಸಾವು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 215 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 15098 ಕ್ಕೆ ಏರಿಕೆಯಾಗಿದೆ .
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಸೋಂಕಿತರಲ್ಲಿ ಉಡುಪಿಯ 121, ಕುಂದಾಪುರದ 50, ಕಾರ್ಕಳದ 35 ಹಾಗೂ ಇತರೆ ಜಿಲ್ಲೆಗಳ 9 ರೋಗಿಗಳು ಇದ್ದಾರೆ. 112 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 103 ಮಂದಿಗೆ ಲಕ್ಷಣಗಳು ಇಲ್ಲ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಸಂಪರ್ಕದ 98, ಐಎಲ್ಐ ಲಕ್ಷಣಗಳಿರುವ 68, ‘ಸಾರಿ’ ಲಕ್ಷಣಗಳಿರುವ 3 ಮಂದಿಗೆ, ಹಾಗೂ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ವಿದೇಶದಿಂದ ಬಂದ 1 ಮಂದಿಗೆ ಸೋಂಕು ತಗುಲಿದ್ದು, 45 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1054 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.858 ವರದಿಗಳು ನೆಗೆಟಿವ್ ಬಂದಿದ್ದು, 215 ಪಾಸಿಟಿವ್ ಬಂದಿವೆ. 190 ವರದಿಗಳು ಬರುವುದು ಬಾಕಿ ಇದೆ.
ಶನಿವಾರ ಒಟ್ಟು 311 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 13621 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1337 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 140 ಮಂದಿ ಸಾವನಪ್ಪಿದ್ದಾರೆ.