ಸೆ. 28ರಂದು ಕರ್ನಾಟಕ ಬಂದ್; ಉಡುಪಿ ಜಿಲ್ಲೆಯ 14 ಸಂಘಟನೆಗಳಿಂದ ಬೆಂಬಲ
ಉಡುಪಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಉಡುಪಿ ಜಿಲ್ಲೆಯ 14 ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಸಿಪಿಐ ಎಮ್ ನ ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿಭಟನೆಗೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್, ಕೆಆರ್ ಎಸ್ ಪಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ದಲಿತ ಸಂಘಟನೆ ಗಳು ಸೇರಿದಂತೆ 14 ಸಂಘಟನೆಗಳು ಸಾಥ್ ನೀಡಲಿವೆ ಎಂದರು.
ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವುದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾಯ್ದೆಗಳು ರೈತ ವಿರೋಧಿಯಾಗಿದ್ದು ಅದನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಜಿಲ್ಲೆಯಲ್ಲಿ ವರ್ತಕರು, ಟ್ಯಾಕ್ಸಿ ಚಾಲಕರು ಮಾಲಕರು, ಆಟೋ ರಿಕ್ಷಾ ಮಾಲಕರು ಚಾಲಕರು, ಬಸ್ ಮಾಲಕರು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಬಂದ್’ಗೆ ಸ್ವಯಂ ಪ್ರೇರಿತ ಬೆಂಬಲ ನೀಡುವಂತೆ ಅವರು ವಿನಂತಿಸಿದರು. ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 14ಸಂಘಟನೆಗಳಿಂದ ಪ್ರತಿಭಟನಾ ಜಾಥಾ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಬಿ ಕುಶಲ ಶೆಟ್ಟಿ, ಸಹಬಾಳ್ವೆಯ ಯಾಸೀನ್ , ಸಿ.ಪಿ.ಐ.ಎಮ್’ನ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಅಝೀಜ್ ಉದ್ಯಾವರ, ಜೆಡಿಎಸ್ ಪಕ್ಷದ ಯೋಗೀಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು
ಬಡವರು ಬೆಂಗಳೂರಿಗೆ ಬರುತ್ತಾರೆ ನಿವು ಈ ತರ ಕರ್ನಾಟಕ ಬಂದ್ ಮಾಡಿದ್ದರೆ ಬಡವರು ಹೇಗೆ ಬರೋದು ಬಸ್ ಇಲ್ಲ ಅಂದ್ರೆ