ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಲು ಅವಕಾಶ ನೀಡದೇ ಹೋದಲ್ಲಿ ಹೋರಾಟ ತೀವ್ರ; ಸಿ.ಎಫ್.ಐ. ಎಚ್ಚರಿಕೆ

Spread the love

ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಲು ಅವಕಾಶ ನೀಡದೇ ಹೋದಲ್ಲಿ ಹೋರಾಟ ತೀವ್ರ; ಸಿ.ಎಫ್.ಐ. ಎಚ್ಚರಿಕೆ

ಮಂಗಳೂರು: ಸೈಂಟ್ ಆಗ್ನೇಸ್ ಕಾಲೇಜು ಕ್ಯಾಂಪಸ್ನಲ್ಲಿ ಸ್ಕಾರ್ಫ್ ಧರಿಸಲು ಅವಕಾಶ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾಲೇಜು ಆಡಳಿತ ಮಂಡಳಿ ತೀವ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾದಿತು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕದಂಬು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂತ ಆಗ್ನೇಸ್ ಕಾಲೇಜು ಸುಮಾರು 90 ವರುಷಗಳ ಇತಿಹಾಸವನ್ನು ಹೊಂದಿ್ದ್ದು ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿಕೊಂಡು ಬಂದಿದೆ. ಇತ್ತೀಚೆಗೆ ಕಾಲೇಜಿನ ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನ ತರಗಿಯಲ್ಲಿ ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಿದ್ದು, ಇದು ಅಸಂವಿಧಾನಿಕವಾಗಿದೆ. ವಿದ್ಯಾರ್ಥಿನಿಯರು ತರಗತಿ ಕೋಣೆಯಲ್ಲಿ ತಲೆಗೆ ಸ್ಮಾರ್ಫ್ ಧರಿಸಿದರೆ ಅಂತಹವರನ್ನು ತರಗತಿಯಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಾಲೇಜಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಡಳಿತ ಮಂಡಳಿ ಇಂತಹ ನಿರ್ಧಾರ ಕೈಗೊಂಡಿದ್ದು ಇದರಿಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಮಸ್ಯೆ ಉಂಟಾಗಿದೆ. ಒಂದು ವೇಳೆ ಕಾಲೇಜು ಆಡಳಿತ ಮಂಡಳಿತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಹೋದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.

ಆಡಳಿತ ಮಂಡಳಿಯ ನಿರ್ಧಾರದ ಪ್ರಕಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ಕಾಲೇಜಿನ ಕೈಪಿಡಿಯಲ್ಲಿ ನಮೂದಿಸಲಾಗಿದೆ ಆದರೆ ಕಾಲೇಜಿಗೆ ಸೇರ್ಪಡೆಗೊಳಿಸುವ ವೇಳೆ ಯಾವುದೇ ರೀತಿಯ ಕಾಲೇಜು ಕೈಪಿಡಿಯನ್ನು ಆಡಳಿತ ಮಂಡಳಿ ನೀಡಿಲ್ಲ. ಕಾಲೇಜಿಗೆ ಸೇರ್ಪಡೆಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಕಾಲೇಜು ಕೈಪಿಡಿಯನ್ನು ನೀಡಲಾಗಿದ್ದು ಅದರಲ್ಲಿ ಕಾಲೇಜಿನ ನಿಯಮಗಳನ್ನು ನಮೂದಿಸಲಾಗಿದೆ. ನಿಯಮಾವಳಿ ಪ್ರಕಾರ ವಿದ್ಯಾರ್ಥಿನಿಯರು ಕಾಲೇಜು ಸೂಚಿಸಿದ ಸಮವಸ್ಥ್ರವನ್ನು ಧರಿಸುತ್ತಿದ್ದು, ಬೇರೆ ಯಾವುದೇ ರೀತಿಯ ಬಟ್ಟೆಯನ್ನು ಧರಿಸಲು ಕಾಲೇಜಿನ ಆವರಣದ ಒಳಗೆ ಅವಕಾಶವಿಲ್ಲ. ಕಾಲೇಜು ಕ್ಯಾಂಪಸ್ ಒಳಗೆ ಸಂಪೂರ್ಣ ಸಿಸಿಟಿವಿಯನ್ನು ಅಳವಡಿಸಿದ್ದು, ಇದರಿಂದ ಕಾಲೇಜಿನ ಒಳಗೆ ಬರುವ ಮತ್ತು ಹೊರಗೆ ಹೋಗುವ ವ್ಯಕ್ತಿಗಳ ಬಗ್ಗೆ ಎಲ್ಲಾ ರೀತಿಯ ಮಾಹಿತ ಲಭ್ಯವಾಗುತ್ತದೆ. ಆದ್ದರಿಂದ ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆವರಣದೊಳಗೆ ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿಯಾಮವಳಿಯನ್ನು ಪಾಲಿಸುವುದು ತಪ್ಪೆ ಎಂಬ ಪ್ರಶ್ನೆಗೆ ಉತ್ತರಿಸಿದ ರಿಯಾಝ್ ಅವರು ಇದು ನಿಯಮಾವಳಿಯ ಪ್ರಶ್ನೆಯಲ್ಲ ಆದರೆ ಇಸ್ಲಾಂ ಧರ್ಮದ ಪ್ರಕಾರ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ ಆಗಿದ್ದು ಕಾಲೇಜು ಆಡಳಿತ ಮಂಡಳಿ ಮುಸ್ಲಿಂ ಧರ್ಮದ ಸಂಸ್ಕೃತಿಯನ್ನು ವಿರೋಧಿಸುವುದು ಎಷ್ಟು ಸರಿ? ಕಾಲೇಜು ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ರೀತಿ ನೋಡುವುದರೊಂದಿಗೆ ಅವರ ಸಂಸ್ಕೃತಿಯನ್ನು ಕೂಡ ಗೌರವಿಸುವುದು ಕೂಡ ಅಷ್ಠೇ ಅಗತ್ಯ ಎಂದರು.


Spread the love