Home Mangalorean News Kannada News ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಒಬಿಸಿ ಮೋರ್ಚಾ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ

ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಒಬಿಸಿ ಮೋರ್ಚಾ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ

Spread the love

ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಒಬಿಸಿ ಮೋರ್ಚಾ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ

ಉಡುಪಿ: ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಟಪಾಡಿ ಶಂಕರಪುರದ ವಿಶ್ವಾಸದ ಮನೆಯಲ್ಲಿ ಅಶಕ್ತ, ಅನಾಥ ಮಕ್ಕಳೊಂದಿಗೆ ಹಾಗೂ ವಯೋವೃದ್ಧರೊಂದಿಗೆ ಕಾಪು ಕಾಂಗ್ರೆಸ್ ಹಿಂದುಳಿದ ವರ್ಗ ದೀಪಾವಳಿ ಸಂಭ್ರಮವನ್ನು ಆಚರಿಸಿತು.

ಈ ವೇಳೆ ಮಾತನಾಡಿದ ಶಾಸಕ ವಿನಯ್ ಕುಮಾರ್ ಸೊರಕೆ ದೀಪಾವಳಿ ಹಬ್ಬವನ್ನು ಶಂಕರಪುರದ ಅನಾಥರ ವಿಶ್ವಾಸದ ಮನೆಯಲ್ಲಿ ಕಾಂಗ್ರೆಸ್ ಆಚರಣೆಗೆ ನಿರ್ಧರಿಸಿರುವುದು ಅತ್ಯಂತ ಸಂತಸ ತಂದಿದೆ. ಈ ಆಶ್ರಮದಲ್ಲಿ ನಮ್ಮ ರಾಜ್ಯಕ್ಕೆ ಸಂಬಂಧಪಟ್ಟವರಲ್ಲದೆ ದೇಶದ ಮೂಲೆ ಮೂಲೆಗಳಿಂದಲೂ ಅಶಕ್ತರು ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತದೆ. ನೂರಾರು ಮಂದಿ ಮೂಲೆ ಮೂಲೆಗಳಿಂದ ಬಂದವರು ಇಲ್ಲಿ ಗುಣಮುಖರಾಗಿ ವಾಪಾಸಾಗುತ್ತಿದ್ದಾರೆ. ಇಲ್ಲಿಯ ಮಾನವೀಯ ಗುಣಗಳನ್ನು ನಾನು ನಮ್ಮ ಜೀವನದಲ್ಲಿ ಅಳವಡಿಸುವುದರ ಮೂಲಕ ನಮ್ಮಲ್ಲಿ ಸಾರ್ಥಕತೆ ಕಾಣೋಣ ಎಂದರು.

ಈ ವೇಳೆ ಆಶ್ರಮದ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಸಿಹಿತಿಂಡಿ ಹಾಗೂ ಬಟ್ಟೆ ಬರೆಗಳನ್ನು ವಿತರಿಸಲಾಯಿತು.

ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ ಡಾ. ದೇವಿಪ್ರಸಾದ್ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ದೀಪಕ್ ಎರ್ಮಾಳ್, ಆಶಾ ಕಟಪಾಡಿ, ಗೀತಾ ವಾಗ್ಳೆ, ರಾಜೇಶ್ ಶೆಟ್ಟಿ, ದಿನೇಶ್ ಕೋಟ್ಯಾನ್, ಸೌಮ್ಯ ಸಂಜೀವ, ಉಸ್ಮಾನ್, ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version