ಸೋಲು ಒಪ್ಪಿಕೊಳ್ಳುತ್ತೇವೆ, ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ: ಮಾಜಿ ಡಿಸಿಎಂ ಆರ್. ಅಶೋಕ್
ಬೆಂಗಳೂರು: ಉಪ ಚುನಾವಣಾ ಸೋಲನ್ನು ಬಿಜೆಪಿ ಒಪ್ಪಿಕೊಳ್ಳುತ್ತಿದ್ದು ಮುಂಬರಲಿರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ರೀತಿ ಅಗತ್ಯ ಎಚ್ಚರಿಕೆ ವಹಿಸಲಿದ್ದೇವೆ,ಯಡಿಯೂರಪ್ಪ ಅವರೇ ನಮ್ಮ ನಾಯಕರು ಅದರಲ್ಲಿ ಯಾವುದೇ ಗೊಂದಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ,ಬಳ್ಳಾರಿ ನಮ್ಮ ಕ್ಷೇತ್ರಗಳೇ ಆಗಿದ್ದವು ಅದರಲ್ಲಿ ಶಿವಮೊಗ್ಗದಲ್ಲಿ ಗೆದ್ದಿದ್ದೇವೆ ಆದರೆ ನಾವು ಬಳ್ಳಾರಿಯನ್ನ ಸೋಲಬಾರದಿತ್ತು, ಸೋತಿದ್ದೇವೆ,ಹಣ ಬಲ ಹಾಗೂ ಇಡೀ ಸರ್ಕಾರವೇ ಬಳ್ಳಾರಿಯಲ್ಲಿ ಇತ್ತು ಚುನಾವಣೆಯಲ್ಲಿ ಅತಿರೇಕದ ಮಾತು ಆಡಬಾರದು, ಇದನ್ನೂ ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಹಳೆ ಮೈಸೂರು ಭಾಗದಲ್ಲಿ ನಾವು ಹೆಚ್ಚಿನ ಮತಗಳನ್ನ ಪಡೆದಿದ್ದೇವೆ ಸ್ವಾತಂತ್ರ್ಯಾ ನಂತರ ಮೊದಲ ಬಾರಿ ಮಂಡ್ಯದಲ್ಲಿ ಹೆಚ್ಚಿನ ಬೆಂಬಲವನ್ನ ಜನರು ನಮಗೆ ಕೊಟ್ಟಿದ್ದಾರೆ ಅದಕ್ಕಾಗಿಮಂಡ್ಯದ ಜನರನ್ನ ನಾನು ಅಭಿನಂದಿಸ್ತೇನೆ,ಈಗ ಅರ್ಧ ಮಂಡ್ಯವನ್ನು ಗೆದ್ದಿದ್ದೇವೆ,ಮುಂದೆ ಗೆಲ್ಲುತ್ತೇವೆ,ಮಂಡ್ಯ ಗೆದ್ದರೆ ನಾವು ಇಂಡಿಯಾ ಗೆದ್ದಂತೆ ಎಂದರು.
ಚುನಾವಣೆ ಬರೊದು ನಮಗೆ ಗೊತ್ತಿರಲಿಲ್ಲ, ಗೊಂದಲದಲ್ಲಿಯೆ ಚುನಾವಣೆ ಬಂತು,ಚುನಾವಣೆಯೂ ಆಯಿತು ಈ ಫಲಿತಾಂಶ ಮೈತ್ರಿ ಸರ್ಕಾರಕ್ಕೆ ಸಿಕ್ಕ ಬೆಂಬಲ ಅಲ್ಲ ಎಂದು ಹಿಂದೆ ನಡೆದ ಉಪಚುನಾವಣೆಯಲ್ಲೂ ನಾವು ಸೋತಿದ್ದೇವು, ನಂತರ ಜನರಲ್ ಎಲೆಕ್ಷನ್ ನಲ್ಲಿ ನಾವು ಹೆಚ್ಚಿನ ಸೀಟ್ ಪಡೆದೆವು ಮತದಾರರ ತೀರ್ಪನ್ನ ನಾವು ಗೌರವಿಸ್ತೇವೆ, ನಮ್ಮ ತಪ್ಪನ್ನ ಸರಿ ಮಾಡಿಕೊಳ್ಳುತ್ತೇವೆ ನಾವು ಸೋತಿರುವ ಕಡೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಕೆಲಸ ಮಾಡ್ತೇವೆ
ಮುಂದಿನ ಲೋಕಸಭಾ ಚುನಾವಣೆಗೆ ಇದು ಸೆಮಿಫೈನಲ್ ಅಲ್ಲ ಈ ಪಲಿತಾಂಶ ಮುಂದಿನ ಲೋಕಸಭಾ ಚುನಾವಣೆ ಮೇಲೆ ಇ ರೀತಿ ಆಗಲ್ಲ ಮತದಾರರು ಇವತ್ತಿಗೆ ಈ ಸರ್ಕಾರವನ್ನ ಜಡ್ಜ್ ಮಾಡೋದಕ್ಕೆ ಕಾಲಾವಕಾಶ ತೆಗೆದುಕೊಂಡಿದ್ದಾರೆ ಉಪ ಚುನಾವಣೆ ಫಲಿತಾಂಶ ಮುಂದಿನ ಸಾವ್ರತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲವೇ ಅಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ,ಅವರೇ ನಮ್ಮ ನಾಯಕರು.ಪಕ್ಷದಲ್ಲಿ ಒಗ್ಗಟ್ಟು ಇದೆ,ನಮಗೆ ಬೇರೆ ಯಾರೂ ಒಗ್ಗಟ್ಟಿನ ಪಾಠ ಮಾಡಬೇಕಿಲ್ಲ, ನಾವೆಲ್ಲಾ ನಾಯಕರು ಒಗ್ಗಟ್ಟಾಗಿಯೇ ಇದ್ದೇವೆ, ಅಮಿತ್ ಶಾ ಅವರಂತಹ ನಾಯಕತ್ವದಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಲಿದ್ದೇವೆ,ನಮ್ಮದು ಕೇಡರ್ ಬೇಸ್ಡ್ ಪಕ್ಷ ಇನ್ನಷ್ಟು ಬಲಪಡಿಸಬೇಕಿದೆ ಎಂದು ನಮ್ಮ ಪಕ್ಷದ ಸುರೇಶ್ ಕುಮಾರ್ ಹೇಳಿದ್ದಾರೆ ಅದನ್ನು ಸ್ವಾಗತಿಸಲಿದ್ದೇವೆ ಎಂದರು.