Home Mangalorean News Kannada News ಸೌತ್ ಶಾಲೆಯ ಪುಟ್ಟ ಹೃದಯಗಳಿಗೆ ಧಾರ್ಮಿಕ ಕೇಂದ್ರಗಳ ವಿರಾಟ್ ದರ್ಶನ

ಸೌತ್ ಶಾಲೆಯ ಪುಟ್ಟ ಹೃದಯಗಳಿಗೆ ಧಾರ್ಮಿಕ ಕೇಂದ್ರಗಳ ವಿರಾಟ್ ದರ್ಶನ

Spread the love

ಸೌತ್ ಶಾಲೆಯ ಪುಟ್ಟ ಹೃದಯಗಳಿಗೆ ಧಾರ್ಮಿಕ ಕೇಂದ್ರಗಳ ವಿರಾಟ್ ದರ್ಶನ

ಉಡುಪಿ: ಆರಾಧನಾಲಯಗಳು ಸಂಶಯದ ಬೀಜ ಬಿತ್ತುತ್ತಿದೆ. ಮಸೀದಿ ಮಂದಿರದೊಳಗೆ ಏನೋ ಇದೆ ಎಂಬ ಕಲ್ಪನೆ ಪರಸ್ಪರ ಸಹೋದರ ಧರ್ಮದವರಲ್ಲಿ ಸಂಶಯ ಮೂಡಿಸುತ್ತಿದೆ. ಅಲ್ಲಿ ದೇವರ ಸ್ಮರಣೆ ಮಾತ್ರವೇ? ಬೇರೇನಾದರೂ ಇದೆಯೇ ಮೊದಲಾದ ಅಡ್ಡಗೋಡೆಯ ದೀಪಕ್ಕೆ ಉತ್ತರ ನೀಡುವಲ್ಲಿ, ಸಂಶಯ ನಿವಾರಿಸುವಲ್ಲಿ ಮಹತ್ತರ ಹೆಜ್ಜೆಯನ್ನು ಉಡುಪಿ ಸೌತ್ ಸ್ಕೂಲ್ ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇಟ್ಟಿದ್ದಾರೆ.

ಉಡುಪಿಯ ಜಾಮಿಯಾ ಮಸ್ಜಿದ್’ನ ತುಂಬಾ ನೀಲಿ ಸಮವಸ್ತ್ರದ ಮಕ್ಕಳ ಕಲರವ. ಅಲ್ಲಿ ಕೇವಲ ಮುಸ್ಲಿಂ ಮಕ್ಕಳು ಮಾತ್ರವಲ್ಲ, ಎಲ್ಲಾ ಧರ್ಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿದ್ದರು. ಜತೆಗೆ ಅಧ್ಯಾಪಕರು, ಶಿಕ್ಷಕಿಯರೂ ಕಾಲು ತೊಳೆದುಕೊಂಡು ಮಸೀದಿಯೊಳಗೆ ಪ್ರವೇಶಿಸಿದ್ದರು. ಅಝೀಝ್ ಉದ್ಯಾವರ ಇವರನ್ನೆಲ್ಲಾ ಮಸೀದಿಗೆ ಕರೆತಂದು ಪರಸ್ಪರ ಅಪನಂಬಿಕೆಗೆ ಇತಿಶ್ರೀ ಹಾಡಿದರು. ಮಸೀದಿಯೊಳಗೆ ಶುಕ್ರವಾರ ಜುಮಾ ಖುತ್ಬಾ ನಡೆಸುವ ಮಿಂಬರ್, ಇಮಾಮರು/ಗುರುಗಳು ನಮಾಝ್ ಗೆ ನೇತೃತ್ವ ನೀಡುವ ಸ್ಥಳ ಮೊದಲಾದವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಹಾಸಿದ ನಮಾಝಿನ ಹಸಿರು ಕಾರ್ಪೆಟ್ ಮೇಲೆ ಕುಳಿತು ಮಸೀದಿ ಮದ್ರಸಗಳ ಸಂಪೂರ್ಣ ಮಾಹಿತಿಯನ್ನು ಪಡೆದರು. ಮಸೀದಿ ಬಗ್ಗೆ ಮನಸ್ಸಿನಲ್ಲಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಪಡೆದರು. ಗೊಂದಲವನ್ನು ನಿವಾರಿಸಿಕೊಂಡರು.

ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳ ಬಗ್ಗೆ ಅಪಪ್ರಚಾರ ನಡೆಸಿ ಕೋಮು ವೈಷಮ್ಯ ಬಿತ್ತುವ ಕೆಲಸ ನಡೆಯುತ್ತಿದೆ. ಮಸೀದಿ, ಮದ್ರಸ, ದೇವಸ್ಥಾನ, ಚರ್ಚುಗಳು ವಿವಾದಿತ ತಾಣವಾಗುತ್ತಿರುವ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಮನಸಲ್ಲಿ ಸಣ್ಣದರಲ್ಲೇ ಸಂಶಯ ನಿವಾರಿಸುವ ಕೆಲಸ ಮಾಡಿದ ಉಡುಪಿ ಸೌತ್ ಸ್ಕೂಲ್’ನ ಕಾರ್ಯ ಶ್ಲಾಘನೀಯ. ಕೇವಲ ಮಸೀದಿ ಮದ್ರಸ ಮಾತ್ರವಲ್ಲ, ದೇವಸ್ಥಾನ, ಚರ್ಚುಗಳ ಪರಿಚಯವೂ ಕೂಡ ಇದೇ ರೀತಿ ಆಗಿ ಇದರಿಂದ ಧರ್ಮ-ಧರ್ಮಗಳ ಕಂದಕಕ್ಕೆ ಮುಕ್ತಿ ಸಿಗಲಿ ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಆಗಲಿ. ಇದು ಎಲ್ಲೆಡೆ ನಡೆಯಲಿ. .


Spread the love

Exit mobile version