Home Mangalorean News Kannada News ಸೌದಿ ಅರೇಬಿಯಾದ 90ನೇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಭಿತ್ತಿಪತ್ರ ಬಿಡುಗಡೆ

ಸೌದಿ ಅರೇಬಿಯಾದ 90ನೇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಭಿತ್ತಿಪತ್ರ ಬಿಡುಗಡೆ

Spread the love

ಸೌದಿ ಅರೇಬಿಯಾದ 90ನೇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಭಿತ್ತಿಪತ್ರ ಬಿಡುಗಡೆ

ರಿಯಾದ್: ಸೌದಿ ಅರೇಬಿಯಾದ 90ನೇ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ವತಿಯಿಂದ ಸೆಪ್ಟೆಂಬರ್ 23, 2020 ರಂದು ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ . ಇದರ ಪ್ರಯುಕ್ತ ಪತ್ರಿಕಾಗೋಷ್ಠಿ ಮತ್ತು ಭಿತ್ತಿಪತ್ರ ಬಿಡುಗಡೆ ಸಮಾರಂಭವು ಸೆಪ್ಟೆಂಬರ್ 4, 2020 ರಂದು ನಡೆಯಿತು.

ರಕ್ತದಾನ ಶಿಬಿರದ ಭಿತ್ತಿಪತ್ರವನ್ನು ಔಪಚಾರಿಕವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ರೀಜನಲ್ ಪ್ರಧಾನ ಕಾರ್ಯದರ್ಶಿ ರಂಝುದ್ದೀನ್ ರವರು ಶಿಬಿರದ ಉಸ್ತುವಾರಿಯಾದ ಐಎಫ್‌ಎಫ್ ರಿಯಾದ್ ಕರ್ನಾಟಕ ಚಾಪ್ಟರ್ ಸದಸ್ಯರಾದ ಅಬೂಬಕ್ಕರ್ ಸಿದ್ದಿಕ್ ರವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಂಝುದ್ದೀನ್, ಇಂಡಿಯಾ ಫ್ರೆಟರ್ನಿಟಿ ಫೋರಂ ಕಳೆದ ಹಲವಾರು ವರ್ಷಗಳಿಂದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಕ್ತದಾನ ಮತ್ತಿತರ ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು. ಇತ್ತೀಚೆಗೆ ಇಂಡಿಯಾ ಫ್ರೆಟರ್ನಿಟಿ ಫೋರಂ ಸೌದಿ ಅರೇಬಿಯಾದಾದ್ಯಂತ ಒಂದು ತಿಂಗಳ ಕಾಲ ಪ್ಲಾಸ್ಮಾದಾನ ಶಿಬಿರವನ್ನು ಸಂಘಟಿಸಿ ಯಶಸ್ಸನ್ನೂ ಕಂಡಿತು. ಈ ಕಾರ್ಯವನ್ನು ಮುಂದುವರೆಸುಂತೆ ಕಾರ್ಯಕರ್ತರಲ್ಲಿ ವಿನಂತಿಸುತ್ತಾ, ಕೊರೋನಾ ಸಂಧಿಗ್ದ ಪರಿಸ್ತಿತಿಯಲ್ಲಿ ಸಂಘಟನೆ ತೊಡಗಿಸಿಕೊಂಡ ಸಾಮಾಜಿಕ ಸೇವೆಯನ್ನು ನೆನಪಿಸಿಕೊಂಡರು. ಮುಂಬರುವ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಇದೇ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡರು.

ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನವೀದ್ ಮಾತನಾಡುತ್ತಾ,
ಸ್ವಯಂಪ್ರೇರಿತ ರಕ್ತದಾನ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಮತ್ತು ಇದರಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. ಅದೇ ರೀತಿ
ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ಕೊಡುಗೆಯನ್ನು ನೀಡಿದ ಎಲ್ಲಾ ಸದಸ್ಯರಿಗೂ ಧನ್ಯವಾದ ಸಮರ್ಪಿಸಿದರು.
ರಕ್ತದಾನದ ಶಿಬಿರವು ಸೆಪ್ಟೆಂಬರ್ 23 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಐಎಫ್‌ಎಫ್ ಕರ್ನಾಟಕ ಚಾಪ್ಟರ್ ಸದಸ್ಯರಾದ ತಾಜುದ್ದೀನ್ ಮತ್ತು ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.


Spread the love

Exit mobile version