ಸೌಭಾಗ್ಯ ಸಂಜೀವಿನಿ ಮತ್ತು ಪಶ್ಚಿಮ ವಾಹಿನಿ ಅನುಷ್ಠಾನ ಬಗ್ಗೆ ಕೋಟಾ ಸದನದಲ್ಲಿ ಪ್ರಶ್ನೆ
2013-14 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಕರಾವಳಿ ಪ್ರದೇಶಕ್ಕೆ ಸೌಭಾಗ್ಯ ಸಂಜೀವಿನಿ ಯೋಜನೆಯ ವರದಿ ತಯಾರಿಸಲಾಗಿದೆಯೇ? ವರದಿಯ ಮುಖ್ಯಾಂಶವೇನು ಮತ್ತು ಎಷ್ಟು ಅನುದಾನಕಾದಿರಿಸಲಾಗಿದೆ. ಅಲ್ಲದೇ ಪಶ್ಚಿಮ ವಾಹಿನಿ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರದ ನಿಲುವೇನು.ಈ ಎರಡು ಯೋಜನೆಯ ಪ್ರಸ್ತಾವನೆ ಯಾವ ಹಂತದಲ್ಲಿದೆ. ಮತ್ತು ಯಾವ ಕಾಲಮಿತಿಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಚುಕ್ಕೆಗುರುತಿನ ಪ್ರಶ್ನೆಯಲ್ಲಿ ಜಲ ಸಂಪನ್ಮೂಲ ಸಚಿವರಾದ ಎಂ.ಬಿ ಪಾಟೀರಿಗೆ ಪ್ರಶ್ನೆಯನ್ನು ಕೇಳಿದರು.
ಪ್ರಶ್ನೆಗೆ ಉತ್ತರಿಸಿದ ಸಚಿವರು ಸೌಭಾಗ್ಯ ಸಂಜೀವಿನಿ ಯೋಜನೆಯನ್ನು ಜಲಸಂಪನ್ಮೂಲ ಇಲಾಖೆಯಿಂದ ಕರಾವಳಿ ಅಭಿವೃದ್ದಿ ಪ್ರಾಧಿಕಾರಕ್ಕೆ 27/02/213 ಕ್ಕೆ ಆದೇಶದಲ್ಲಿ ವರ್ಗಾಹಿಸಲಾಗಿದ್ದು, ಸದರಿ ಯೋಜನೆಯ ಅನುಷ್ಠಾನದ ಸಂಬಂಧ ಕಾರ್ಯದರ್ಶಿ ಯೋಜನಾ ಇಲಾಖೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗಿದ್ದು ಯೋಜನಾ ಇಲಾಖೆಗೆ ಸಲ್ಲಿಸುವಂತೆ ಕರ್ನಾಟಕ ನೀರಾವರಿ ನಿಗಮವು ಯೋಜನಾ ಇಲಾಖೆಗೆ ಸೂಚಿಸಿರುತ್ತದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮೂಲಕ ಸೌಭಾಗ್ಯ ಸಂಜೀವಿನಿ ಯೋಜನೆಯು ಪರಿಶೀಲನೆಯಲ್ಲಿದ್ದು, ಪಶ್ಚಿಮ ವಾಹಿನಿ ಯೋಜನೆಯು ಉತ್ತರ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು 1273 ಕೋಟಿರೂ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆಯು ಪ್ರಸ್ತಾವನೆಯನ್ನು ಸಿದ್ದಪಡಿಸಲಾಗಿದೆ. ಸೌಭಾಗ್ಯ ಸಂಜೀವಿನಿ ಯೋಜನೆಯ ಕಾರ್ಯಸಾಧ್ಯತಾ ವರದಿ ಪರಿಶೀಲನೆಯಲ್ಲಿದ್ದು ಪಶ್ಚಿಮ ವಾಹಿನಿ ಯೋಜನೆಯನ್ನು ನೀರಾವರಿ ಇಲಾಖೆಯಿಂದ ಅನುದಾನದ ಲಭ್ಯತೆಗನುಗುಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು