ಸೌಹಾರ್ದತೆಯನ್ನು ಕಾಪಾಡಬೇಕಾದ ರಾಜ್ಯ ಸರಕಾರ ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುತ್ತಿದೆ; ಸುನೀಲ್ ಕುಮಾರ್
ಉಡುಪಿ: ಧರ್ಮ, ರಾಷ್ಟ್ರ ವಿರೋಧಿ ಚಟುವಟಿಕೆಗಳು ನಾಡಿದಾದ್ಯಂತ ವಿಜೃಂಭಿಸುತ್ತಿದ್ದುಘಿ, ಈ ಎಲ್ಲಾ ಚಟುವಟಿಕೆಗಳಿಗೆ ಧರ್ಮ ಸಂಸತ್‍ನ ಮೂಲಕ ಕಡಿವಾಣ ಹಾಕುವ ಕಾರ್ಯವಾಗಬೇಕು ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಉಡುಪಿಯಲ್ಲಿ ನವೆಂಬರ್ 24-26ವರೆಗೆ ನಡೆಯುವ ಧರ್ಮ ಸಂಸತ್‍ನ ಪ್ರಯುಕ್ತ ಜರಗಲಿರುವ ಹಿಂದು ಸಮಾಜೋತ್ಸವದ ಆಮಂತ್ರಣ ಪತ್ರಿಕೆ, ಬ್ಯಾನರ್ ಹಾಗೂ ಕರಪತ್ರವನ್ನು ಸೋಮವಾರ ನಗರದ ಧರ್ಮ ಸಂಸತ್ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಹಿಂದೂ ಸಮಾಜೋತ್ಸವದ ಮೂಲಕ ಮತ್ತೊಮ್ಮೆ ಸಮಾಜವನ್ನು ಸಂಘಟಿಸುವ ಕೆಲಸ ದೊಡ್ಡಮಟ್ಟದಲ್ಲಿ ಎಲ್ಲ ದಿಕ್ಕಿನಿಂದಲೂ ಆಗಬೇಕಾಗಿದೆ. ಜಾತಿ, ಮತಗಳನ್ನು ಮರೆತು ಹಿಂದೂ ಸಮಾಜವನ್ನು ಒಗ್ಗೂಡಿಸಲು ನಾವೆಲ್ಲರೂ ಕಾರ್ಯೋನ್ಮಖರಾಗಬೇಕು ಎಂದರು.
ಲಿಂಗಾಯುತ ಧರ್ಮವನ್ನೇ ಪ್ರತ್ಯೇಕಿಸುತ್ತೇವೆ. ಲಿಂಗಾಯಿತರೆ ಬೇರೆ, ಧರ್ಮವೇ ಬೇರೆ ಎಂಬ ಹೊಸ ಅನ್ವೇಷಣೆಯನ್ನು ಸರಕಾರದ ಕೆಲವು ಮಂತ್ರಿಗಳು ಮಾಡಹೊರಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಬಹುತೇಕ ಮಂತ್ರಿಮಂಡಲದ ಸಚಿವರು ನಾವು ಗೋ ಮಾಂಸವನ್ನು ತಿನ್ನುತ್ತೇವೆ ಎನ್ನುವ ಪೈಪೋಟಿಗೆ ಇಳಿದಿದ್ದು, ಇವರು ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ ಎಂಬ ಪ್ರಶ್ನೆಯೂ ಮೂಡುತ್ತದೆ. ಬಹು ಸಂಖ್ಯಾತರಿಗೆ ಬೆಲೆ ಕೊಡಬೇಕು ಎನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲಘಿ. ಇವರ ಎಲ್ಲಾ ಕುತಂತ್ರಗಳಿಗೆ ಉತ್ತರ ಕೊಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸೌಹಾರ್ದತೆಯನ್ನು ಕಾಪಾಡಬೇಕಾದ ಸರಕಾರ ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುತ್ತಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸರಕಾರಿ ಪ್ರಯೋಜಿತ ಡಿವೈಎಫ್ ಐ ಸಮಾವೇಶದಲ್ಲಿ ಹಿಂದು ಸಮಾಜದ ಅಸ್ಥಿತ್ವ, ಸ್ವಾತಂತ್ರ್ಯ ಹೋರಾಟಗಾರರನ್ನು ಟೀಕಿಸುವಂತಹ ಪ್ರಚೋದನಕಾರಿ ಭಾಷಣಗಳು ಹಾಗೂ ತೆಗೆದುಕೊಂಡಿರುವ ನಿರ್ಣಾಯಗಳನ್ನು ಗಮನಿಸಿದಾಗ ಯಾವ ನಾಡಿನಲ್ಲಿ ಈ ಸಮಾವೇಶ ನಡೆಯಿತು ಎನ್ನುವ ಅನುಮಾನವೂ ಕಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಎಚ್‍ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ಸಮಾಜವನ್ನು ದಲಿತರು, ಹಿಂದುಳಿದ ವರ್ಗದವರು, ಲಿಂಗಾಯುತರು, ಬಂಟರು ಹೀಗೆ ಜಾತಿವಾರು ಆಧಾರದಲ್ಲಿ ಪ್ರತ್ಯೇಕಿಸುವ ಹುನ್ನಾರ ಮಾಡುತ್ತಿದೆ. ಸರಕಾರದ ಎಲ್ಲಾ ಷಡ್ಯಂತ್ರಗಳಿಗೆ ಧರ್ಮ ಸಂಸತ್ ಉತ್ತರ ನೀಡಲಿದ್ದುಘಿ, ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಸಂತರು, ಸ್ವಾಮೀಜಿ, ಮಠ ಮಂದಿರಗಳಿಗೆ ಇದೆ ಎಂದರು.
ದಿಯಾ ಸಿಸ್ಟಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಡಾ. ವಿ. ರವಿಚಂದ್ರ, ವಿಎಚ್‍ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್, ಬಜರಂಗದಳ ಮಂಗಳೂರು ವಿಭಾಗದ ಸಹ ಸಂಚಾಲಕ ಸುನಿಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮೀನ್ ಸ್ವಾಗತಿಸಿದರು. ಮಾಧ್ಯಮ್ ಪ್ರಮುಖ್ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು, ವಿಎಚ್‍ಪಿ ನಗರ ಅಧ್ಯಕ್ಷ ಸಂತೋಷ ಸುವರ್ಣ ವಂದಿಸಿದರು.