ಸೌಹಾರ್ದ ಬಕ್ರೀದ್! ಸಹೋದ್ಯೋಗಿಗಳಿಗೆ ಬಿರಿಯಾನಿ ಹಂಚಿ ಹಬ್ಬವನ್ನು ಸಂಭ್ರಮಿಸಿದ ಬಸ್ ಸಿಬಂದಿಗಳು

Spread the love

ಸೌಹಾರ್ದ ಬಕ್ರೀದ್! ಸಹೋದ್ಯೋಗಿಗಳಿಗೆ ಬಿರಿಯಾನಿ ಹಂಚಿ ಹಬ್ಬವನ್ನು ಸಂಭ್ರಮಿಸಿದ ಬಸ್ ಸಿಬಂದಿಗಳು

ಉಡುಪಿ: ಸದಾ ಒಂದಿಲ್ಲೊಂದು ವಿವಾದ, ಗಲಾಟೆ ಮತ್ತು ಅಪಘಾತಗಳ ಕಾರಣದಿಂದಾಗಿ ಸುದ್ದಿಯಲ್ಲಿರುತ್ತಿದ್ದ ಉಡುಪಿ – ಕರಾವಳಿಯ ಖಾಸಗಿ ಬಸ್ ನ ಚಾಲಕ, ನಿರ್ವಾಹಕರು ಗಳು ಈ ಬಾರಿ ವಿಶೇಷ ಕಾರಣಕ್ಕಾಗಿ ಮತ್ತೆ ಸುದಿಯಲ್ಲಿದ್ದಾರೆ.

ಜೂನ್ 17 ರಂದು ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಪ್ರೀತಿ, ತ್ಯಾಗ, ಬಲಿದಾನದ ಸಂಕೇತವಾಗಿ ಬಕ್ರಿಧ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ನಡುವೆ ಉಚ್ಚಿಲದ ಖಾಸಗಿ ಬಸ್ ನ ಮುಸ್ಲಿಂ ಚಾಲಕ, ನಿರ್ವಾಹಕರುಗಳು ತಮ್ಮ ಸಹೋದ್ಯೋಗಿ ಬಸ್ ಚಾಲಕ, ನಿರ್ವಾಹಕರುಗಳಿಗೆ ಬಿರಿಯಾನಿ ಹಂಚಿ ಸಂಭ್ರಮಪಟ್ಟುರು.

ಉಡುಪಿ – ಮಂಗಳೂರು ನಡುವೆ ಸಂಚಾರ ನಡೆಸುವ ಖಾಸಗಿ ಎಕ್ಸ್ ಪ್ರೆಸ್, ಸರ್ವಿಸ್ ಮತ್ತು ಇತರ ಬಸ್ಸುಗಳ ಸುಮಾರು 450 ಮಂದಿಗೆ ಬಕ್ರಿದ್ ಸಂಭ್ರಮದ ಅಂಗವಾಗಿ ಈ ತಂಡ ಬಿರಿಯಾನಿಯನ್ನು ವಿತರಿಸಿತು. ಇದೇ ಮಾರ್ಗದಲ್ಲಿ ಸಂಚಾರ ನಡೆಸುವ ಖಾಸಗಿ ಬಸ್ ನ ಸಿಬ್ಬಂದಿಗಳಾದ ಜಾವೇದ್, ಶನವಾಜ್, ನಾಸಿರ್, ನಿಜಾಮ್, ಮೌಜಿ, ಮುನ್ನ ರವರ ತಂಡದ ಈ ಕಾರ್ಯಕ್ಕೆ ವಿವಿಧ ಬಸ್ಸಿನ ಮಾಲಕರು ಮತ್ತು ಇತರ ಸಿಬ್ಬಂದಿಗಳು ಕೂಡಾ ಸಾಥ್ ನೀಡಿದ್ದರು,

“ನಾವೆಲ್ಲಾ ಒಂದೆ ವೃತ್ತಿಯನ್ನು ಮಾಡಿಕೊಂಡಿದ್ದು, ಬಕ್ರೀದ್ ಹಬ್ಬದ ಸಂಭ್ರಮವನ್ನು ಇನ್ನಷ್ಟು ಸಂತುಷ್ಟ ಗೊಳಿಸಲು ನಾವು ಬಿರಿಯಾನಿ ನೀಡಿದ್ದೇವೆ” ಎನ್ನುತ್ತಾರೆ ತಂಡದ ಸದಸ್ಯ ಜಾವೇದ್.

ಸದಾ ವಿವಿಧ ಕೋಮು ಸೂಕ್ಷ್ಮ ವಿಷಯಗಳಿಗೆ ಸುದ್ದಿಯಲ್ಲಿರುತ್ತಿದ್ದ ಕರಾವಳಿಯಲ್ಲಿ ಇಂತಹ ಯುವಕರ ಸೌಹಾರ್ದದ ನಡೆಗಳು, ಸೌಹಾರ್ಯದತೆಯ ಹೊಸ ಹುರುಪನ್ನು ಮೂಡಿಸಿವೆ.


Spread the love
Subscribe
Notify of

0 Comments
Inline Feedbacks
View all comments