Home Mangalorean News Kannada News ಸ್ಕೌಟ್ಸ್ ಗೈಡ್ಸ್: ಪುಟಾಣಿ ಮಕ್ಕಳಿಗೆ ಬನ್ನಿ ಬಿ ಸ್ಮೈಲ್ ಕಾರ್ಯಕ್ರಮ

ಸ್ಕೌಟ್ಸ್ ಗೈಡ್ಸ್: ಪುಟಾಣಿ ಮಕ್ಕಳಿಗೆ ಬನ್ನಿ ಬಿ ಸ್ಮೈಲ್ ಕಾರ್ಯಕ್ರಮ

Spread the love

ಸ್ಕೌಟ್ಸ್ ಗೈಡ್ಸ್: ಪುಟಾಣಿ ಮಕ್ಕಳಿಗೆ ಬನ್ನಿ ಬಿ ಸ್ಮೈಲ್ ಕಾರ್ಯಕ್ರಮ

ಮಂಗಳೂರು: ಇವತ್ತಿನ ಮಕ್ಕಳು ಮುಂದಿನ ಪ್ರಜೆಗಳು.ನಮ್ಮ ದೇಶ ಮುಂದೆ ಏನಾಗಬೇಕು ಎನ್ನುವುದು ಈ ಮಕ್ಕಳ ಮೇಲೆ ಅವಲಂಬಿತವಾಗಿದೆ.ಅವರಿಗೆ ಒಳ್ಳೆಯ ಶಿಸ್ತು ನಡತೆ ಚಿಕ್ಕನಿಂದಲೇ ಕಲಿಸಿ ಕೊಟ್ಟರೆ ಸಮಾಜದಲ್ಲಿ ಹಾಗೂ ರಾಷ್ಟ್ರದಲ್ಲಿ ಒಂದು ಬಲವಾಗಿ ಬೆಳೆಯುತ್ತಾರೆ. ಮಕ್ಕಳು ಚಿಕ್ಕ ಇರುವಾಗಲೇ ಏನು ಕಲಿಯುತ್ತಾರೋ ಅದರ ಪ್ರಕಾರ ಅದನ್ನು ಅನುಕರಣೆ ಮಾಡುತ್ತಾರೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಪ್ರಿಯದರ್ಶಿನಿ ರೈ ಡಿ ಸೋಜಾ ಹೇಳಿದರು.

ಅವರು ನಗರದ ಕದ್ರಿ ಉದ್ಯಾಣವನದಲ್ಲಿ ನಡೆದ ಬನ್ನಿ ಬಿ ಸ್ಮೈಲ್ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು. ಮಕ್ಕಳಿಗೆ ಒಮ್ಮೆಲೆ ಶಿಸ್ತನ್ನು ಕಲಿಸಿ ಕೊಡಲು ಸಾಧ್ಯವಿಲ್ಲ. ಇತ್ತೀಚಿನ ಮಕ್ಕಳು ಸಾಮಾಜಿಕ ಜಾಲತಾಣವನ್ನು ಅವಲಂಬಿಸಿರತ್ತಾರೆ.ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವುದು ಹೆತ್ತವರ ಕರ್ತವ್ಯ. ಮಕ್ಕಳು ಆಟ ಆಡಲು ಬಯಸಿದಲ್ಲಿ ಅದಕ್ಕೆ ಅವಕಾಶವನ್ನು ನೀಡಿ. ಅವರಿಗೆ ಅವರ ವಯಸ್ಸಿನ ಪ್ರಕಾರ ತಿಳುವಳಿಕೆ ನೀಡುವ ಪ್ರಯತ್ನ ಮಾಡಬೇಕು ಎಂದು ಡಾ.ಪ್ರಿಯದರ್ಶಿನಿ ರೈ ಡಿ ಸೋಜಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಗರ ಘಟಕದ ಅಧ್ಯಕ್ಷ ಕೆ.ವಸಂತ್ ರಾವ್ ವಹಿಸಿದ್ದರು. ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ .ಬಿ. ವೆಂಕಟೇಶ್ ಬಾಳಿಗಾ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತೆ ಐರಿನ್, ಸುಫಲ್ಯಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ನೂರಾರು 3-5 ವರ್ಷದ ಮಕ್ಕಳು ಮತ್ತು ಅವರ ಪಾಲಕರು ಉಪಸ್ಥಿತರಿದ್ದರು.


Spread the love

Exit mobile version