ಸ್ತ್ರೀಯರಿಗೆ ಸಮಾನ ಅವಕಾಶ ಒದಗಿಸಿಕೊಡುವುದು ನಮ್ಮ ಜವಾಬ್ಧಾರಿ-ನಳಿನ್ ಕುಮಾರ್ ಕಟೀಲ್

Spread the love

ಸ್ತ್ರೀಯರಿಗೆ ಸಮಾನ ಅವಕಾಶ ಒದಗಿಸಿಕೊಡುವುದು ನಮ್ಮ ಜವಾಬ್ಧಾರಿ-ನಳಿನ್ ಕುಮಾರ್ ಕಟೀಲ್

ಸ್ತ್ರೀಗೆ ಪೂಜನೀಯ ಸ್ಥಾನವನ್ನು ನೀಡಿರುವ ನಮ್ಮ ಸಂಸ್ಕøತಿಯಲ್ಲಿ ಆಕೆಗೆ ಸಮಾನ ಅವಕಾಶÀವನ್ನೂ  ಒದಗಿಸಿಕೊಡುವುದು ನಮ್ಮೆಲ್ಲರ ಜವಾಬ್ಧಾರಿ. ಸ್ತ್ರೀ ಇಂದು ಸೈನ್ಯ, ಬಾಹ್ಯಾಕಾಶ ಸೇರಿದ ಹಾಗೆ ಹಲವಾರು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಆದರೂ ಸ್ತ್ರೀ ಪುರುಷ ಅನುಪಾತ ಇಂದು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕಕಾರಿ.ಹೆಣ್ಣಿರಲಿ ಗಂಡಿರಲಿ ಎಲ್ಲಾ ಮಕ್ಕಳೂ ಸಮಾನ ಎನ್ನುವ  ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳದೇ ಇದ್ದರೆ ಮುಂದೆ ನಾವೇ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ದಕ್ಷಿಣಕನ್ನಡದ ಲೋಕಸಭಾ ಸದಸ್ಯ  ನವೀನ್ ಕುಮಾರ್ ಕಟೀಲ್ ಹೇಳಿದರು.

ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಗ್ರಾಮಪಂಚಾಯತ್ ನೆಲ್ಯಾಡಿ, ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹೆಣ್ಣು ಮಗು ರಕ್ಷಿಸಿ ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ ವಿಶೇಷ ಜಾಗ್ರತಿ ಕಾರ್ಯಕ್ರಮವನ್ನು ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ಆವರಣದಲ್ಲಿಉದ್ಘಾಟಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗವನ್ನು  ಪಡೆದುಕೊಳ್ಳುವಂತೆ ತಿಳಿಸಿz ಅವರು ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ನುಡಿದರು

ಜಿಲ್ಲಾಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ ಕೇಂದ್ರ  ರಾಜ್ಯ ಸರ್ಕಾರಗಳೆರಡೂ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವು ಕಟ್ಟಕಡೆಯ ಮನುಷ್ಯನಿಗೂ ಮುಟ್ಟಬೇಕಾದರೆ ಅಧಿಕಾರಿಗಳು ಇಚ್ಚಾಶಕ್ಕ್ತಿಯನ್ನು ಪ್ರದರ್ಶಿಸಬೇಕು ಎಂದರು.

ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ಅಂಚನ್ ಮಾತನಾಡಿ ಸ್ತ್ರೀಯರು ಸಬಲರಾದಾಗ ಮಾತ್ರ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯ ಎಂದರು. ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಆಶಾ ಲಕ್ಷಣ್  ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾಯವಾದಿ ಇಸ್ಮಾಯಿಲ್ ಮಾತನಾಡಿ ಭ್ರೂಣಲಿಂಗ ಪತ್ತೆ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಭ್ರೂಣಲಿಂಗ ಪತ್ತೆ ಮಾಡುವವರು, ಮಾಡಿಸಿದವರು  ಶಿಕ್ಷಾರ್ಹರು  ಎಂದರು.  ಒಂದಷ್ಟು ಜನರಿಗೆ ಈ ಕಾನೂನಿ ಅಡಿಯಲ್ಲಿ ಶಿಕ್ಷೆ ಆದಾಗ  ಮಾತ್ರ ಈ ಪಿಡುಗನ್ನು ತಡೆಗಟ್ಟಬಹುದು  ಎಂದು ವಿವರಿಸಿದರು.

ಕ್ಷೇತ್ರ ಪ್ರಚಾರಾಧಿಕಾರಿ ಜಿ ತುಕಾರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಕೆ. ಇಬ್ರಾಹಿಂ, ಶಾಲಾ ಮುಖ್ಯ ಶಿಕ್ಷಕ  ಆನಂದ ಅಜಿಲ ಉಪಸ್ಥಿತರಿದ್ದರು. ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಸ್ವಾಗತಿಸಿ ಅಂಗನವಾಡಿ ಮೇಲ್ವಿಚಾರಕಿ ಉಮಾವತಿ ವಂದಿಸಿದ ಕಾರ್ಯಕ್ರಮವನ್ನು ಕ್ಷೇತ್ರ ಪ್ರÀಚಾರ ಸಹಾಯಕ ರೋಹಿತ್ ಜಿ. ಎಸ್ ನಿರೂಪಿಸಿದರು.

ಜಿ ತುಕಾರಾಮ ಗೌಡ,  ಕ್ಷೇತ್ರ ಪ್ರಚಾರಾಧಿಕಾರಿ


Spread the love