ಸ್ಮಾರ್ಟ್ ಸಿಟಿಯ ಮೂಲ ಉದ್ದೇಶವನ್ನು ಗಾಳಿಗೆ ತೂರಿದ ಶಾಸಕರು ಹಾಗೂ ಅಧಿಕಾರಿಗಳು – ಜೆ.ಆರ್. ಲೋಬೋ
ಮಂಗಳೂರು ನಗರ ದೇಶದ ಸ್ಮಾರ್ಟ್ ಸಿಟಿಗೆ ಸೇರಲು ಮಂಗಳೂರಿನ ಹಳೆ ಬಂದರು ಮತ್ತು ಇಲ್ಲಿನ ಮಿನುಗಾರಿಕೆ ಮುಖ್ಯ ಕಾರಣ. ಈ ವಿಶೇಷತೆಯಿಂದ ಮಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಲಾಗಿದೆ. ಈ ಸ್ಮಾರ್ಟ್ಸೀಟಿ ಯೋಜನೆಯ ಮೂಲಕ ಮೂಲಭೂತ ಸೌಕರ್ಯವನ್ನು ಒದಗಿಸಿ ಆರ್ಥಿಕ ಯೋಜನೆಯನ್ನು ತರಬಹುದಿತ್ತು. ಮಂಗಳೂರಿನ ಪ್ರವಾಸೋದ್ಯಮ ಅಭಿವೃದ್ದಿ, ಮಾಹಿತಿ ತಂತ್ರಜ್ಞಾನ ಉದ್ದಿಮೆ, ಬಂದರು ಹಾಗೂ ವಿೂನುಗಾರಿಕೆ, ಶೈಕ್ಷಣಿಕ ಕೇಂದ್ರ್ರಗಳನ್ನು ಬೆಳೆಸಲಿಕ್ಕೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಬಳಬಹುದಿತ್ತು. ಆದರೆ ಇಂದು ಸ್ಮಾರ್ಟ್ ಸಿಟಿ ಯೋಜನೆಗೆ ಬಂದಂತಹ ಹಣವನ್ನು ಪೆÇೀಲು ಮಾಡುತ್ತಿದ್ದಾರೆ. ಮಹಾನಗರಪಾಲಿಕೆಯು ಮಾಡುವಂಥಹ ರಸ್ತೆ ಅಭಿವೃದ್ದಿ, ಒಳಚರಂಡಿಯ ಕೆಲಸಕ್ಕೆ ಬಳಸುತ್ತಿದ್ದಾರೆ. ಎಂದು ತನ್ನ ಅಸಮಾಧಾನವನ್ನು ಮಾಜೀ ಶಾಸಕ ಜೆ. ಆರ್ ಲೋಬೊರವರು ಸುದ್ದಿಗಾರರೊಂದಿಗೆ ತೋಡಿಕೊಂಡಿದ್ದಾರೆ.
ಅವರು ಮಾತನಾಡುತ್ತಾ, ಸ್ಮಾರ್ಟ್ ಸಿಟಿಯ ಮೂಲ ಉದ್ದೇಶವನ್ನು ಇಂದು ಸ್ಥಳೀಯ ಶಾಸಕರು, ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ನಾನು ಶಾಸಕನಾಗಿದ್ದಾಗ ಸುಮಾರು ರೂ. 650ಕೊಟಿಯನ್ನು ಕುಡಿಯುವ ನೀರು, ಒಳಚರಂಡಿ ವ್ಯವಸ್ಥಿಗೆ ಕುಡ್ಸೆಂಪ್ ಇಲಾಖೆಗೆ ಸರಕಾರದಿಂದ ಮಂಜೂರು ಮಾಡಿಸಿದ್ದೇನೆ. ಅದು ಈಗ ಕಾರ್ಯಗತವಾಗುತ್ತಿದೆ. ಅದನ್ನು ಸರಿಯಾಗಿ ಮಾಡುವುದನ್ನು ಬಿಟ್ಟು ಇವರು ಸ್ಮಾರ್ಟ್ ಸಿಟಿಯೋಜನೆಯ ದುಡ್ಡನ್ನು ರಸ್ತೆಗೆ ಹಾಗೂ ಒಳಚರಂಡಿ ಕಾರ್ಯಕ್ಕೆ ಬಳಸುತ್ತಿರುವುದು ಮುರ್ಖತನ. ನಾನು ಶಾಸಕನಾಗಿದ್ದಾಗ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಬದಿಯಿಂದ ಕಣ್ಣೂರು ರಾಷ್ಟ್ರೀಯ ಹೆದ್ದಾರಿವರೆಗೆ ಬೈಪಾಸ್ ರಸ್ತೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಮಾಡಿಸಿ ಸರಕಾರದಿಂದ ಮಂಜೂರು ಮಾಡಿಸಿದ್ದೆ. ಅದರ ಸರ್ವೆ ಕಾರ್ಯವು ಪ್ರಾರಂಭವಾಗಿತ್ತು. ಅದನ್ನು ಇಂದು ಸ್ಮಾರ್ಟ್ ಸಿಟಿಗೆ ಶಾಸಕರು ಸೇರಿಸಬಹುದಿತ್ತು. ಈ ಬೈಪಾಸ್ ರಸೆ ಆಗುತ್ತಿದ್ದರೆ ಆ ಪ್ರದೇಶ ಅಭಿವೃದ್ದಿಯಾಗಿ ಅಲ್ಲಿ ವ್ಯವಸ್ಥೆ ಮಾಡಿಸುವುದರ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡಬಹುದಿತ್ತು. ಅದಲ್ಲದೇ ಸಾಗರ ಮಾಲಾ ಯೋಜನೆಗೆ ಬರುವಂತಹ ನೇತ್ರಾವತಿ ನದಿಯ ದಡದಿಂದ, ಹಳೆಬಂದರು, ಸುಲ್ತಾನ್ ಬತ್ತೇರಿ, ಬೆಂಗರೆಯ ಮುಖಾಂತರ ನವಮಂಗಳೂರು ಬಂದರಿಗೆ ಸಂಪರ್ಕ ಹೊಂದುವ ರಸ್ತೆಯನ್ನು ಸ್ಮಾರ್ಟ್ ಸಿಟಿಗೆ ಸೇರಿಸಲು ಸ್ಥಳೀಯ ಶಾಸಕರು ಪ್ರಯತ್ನಿಸಬಹುದಿತ್ತು. ಈ ಎಲ್ಲಾ ಯೋಜನೆಗಳಿಗೆ ಸ್ಮಾರ್ಟಿ ಸಿಟಿಯ ಅನುಧಾನದಲ್ಲಿ ಕೊರತೆ ಬಂದರೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಹಣ ಕ್ರೂಡಿಕರಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಬಹುದಿತ್ತು. ಅದನ್ನೆಲ್ಲವನ್ನು ಬಿಟ್ಟು ಕೇವಲ ರಸ್ತೆ ಅಗೆತ, ಒಳಚರಂಡಿ, ನಗರದಲ್ಲಿ ಬಸ್ಸ್ಟಾಂಡ್ಗಳನ್ನು ಕಟ್ಟಿ ಹಣವನ್ನು ಪೆÇೀಲು ಮಾಡುವುದರ ಕೆಲಸದಲ್ಲಿ ಶಾಸಕರು, ಅಧಿಕಾರಿಗಳು ನಿರತರಾಗಿದ್ದಾರೆ.
ಸ್ಮಾರ್ಟ್ ಸಿಟಿಯೋಜನೆಯಲ್ಲಿ ಸೆಂಟ್ರಲ್ ಮಾರ್ಕೆಟನ್ನು ಒಳ್ಳೇಯ ರೀತಿಯಲ್ಲಿ ವ್ಯಾಪಾರಸ್ತರಿಗೆ, ಜನರಿಗೆ ಅನುಕೂಲವಾಗುವಂತೆ ಕಟ್ಟಿಸಿಕೊಡಬಹುದಿತ್ತು ಅದನ್ನು ಬದಿಗೊತ್ತಿ ಏಕಾಏಕೇ, ವ್ಯಾಪಾರಸ್ತರನ್ನು ಅಲ್ಲಿಂದ ಎಬ್ಬಿಸಿ ಸ್ಥಳಾಂತರಗೊಳಿಸಲಾಯಿತು. ಕದ್ರಿ ಮಾರುಕಟ್ಟೆ, ಉರ್ವ ಮಾರುಕಟ್ಟೆಯಲ್ಲಿ ಮಾಡಿದ ಹಾಗೆಯೇ, ವ್ಯಾಪಾರಸ್ಥರಿಗೆ ಅದರ ಪಕ್ಕದಲ್ಲಿಯೇ ಬದಲಿ ವ್ಯವಸ್ಥೆ ಮಾಡಿಸಬೇಕು ವ್ಯಪಾರಸ್ಥರಿಗೆ ಮತ್ತು ಜನರಿಗೆ ತೊಂದರೆಕೊಟ್ಟು, ನಗರದ ಅಭಿವೃದ್ದಿ ಆಗುವುದಿಲ್ಲ ಎಂಬುದನ್ನು ಶಾಸಕರು ನೆನಪಿನಲ್ಲಿಡಬೇಕು. ಇಂದು ದಿಕ್ಕುದೆಸೆಯಿಲ್ಲದೇ ಸ್ಮಾರ್ಟ್ ಸಿಟಿ ಕೆಲಸಕಾರ್ಯಗಳು ಆಗುತ್ತವೆ. ಶಾಸಕರು ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು, ಸ್ಮಾರ್ಟ್ ಸಿಟಿ ಹೆಸರಿನಲ್ಲಿ ತುಘಲಕ್ ದರ್ಬಾರ್ ನಡೆಸಬಾರದು. ಅಧಿಕಾರಿಗಳು ಮಾಡುವಂತಹ ಕೆಲಸಗಳಿಗೆ ಶಾಸಕರು, ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ಈ ಯೋಜನೆಯನ್ನು ಸರಿಯಾಗಿ ಬಳಸದಿದ್ದರೆ ಮಂಗಳೂರು ಅಭಿವೃದ್ದಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.