ಸ್ವಚ್ಚ ನಗರವಾಗಬೇಕಾದ ಮಂಗಳೂರು ಕೊಳಚೆ ಪ್ರದೇಶದತ್ತ ಸಾಗಿದೆ; ರೂಪ ಡಿ ಬಂಗೇರ

Spread the love

ಸ್ವಚ್ಚ ನಗರವಾಗಬೇಕಾದ ಮಂಗಳೂರು ಕೊಳಚೆ ಪ್ರದೇಶದತ್ತ ಸಾಗಿದೆ; ರೂಪ ಡಿ ಬಂಗೇರ

ಮಂಗಳೂರು: ಸ್ವಚ್ಚ ನಗರವಾಗಿ ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕೆಂದು ಮಹಾನಗರ ಪಾಲಿಕೆಯು ಕಾರ್ಯಯೋಜನೆಯನ್ನು ರೂಪಿಸಿದ್ದು, ಪ್ರತಿಪಕ್ಷಗಳು ಸಲಹೆ ಸೂಚನಗೆಗಳನ್ನು ನೀಡುತ್ತಿದ್ದರೂ ಪಾಲಿಕೆಯ ಆಡಳಿತ ಕೇವಲ ಸಭೆ, ಘೋಷಣೆಗಳ ಮೂಲಕ ಪ್ರಚಾರಗಿಟ್ಟಿಸಿಕೊಳ್ಳುತ್ತದೆ ಹೊರತು ವಾಸ್ತವಿಕವಾಗಿ ಈ ಬಗ್ಗೆ ಯಾವುದೇ ಕಾಮಗಾರಿಗಳನ್ನು ಕಾರ್ಯರೂಪಗೊಳಿಸುತ್ತಿಲ್ಲ ಎಂದು ಮನಾಪ ಪ್ರತಿಪಕ್ಷ ನಾಯಕಿ ರೂಪ ಡಿ ಬಂಗೇರ ಆರೋಪಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರಿನ ನರಕ ದರ್ಶನಕ್ಕೆ ಇಡೀ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುತ್ತಾಡಬೇಕಿಲ್ಲ, ಕೇವಲ ನಗರದ ಸುತ್ತಮುತ್ತ ತಿರುಗಿದರೆ ಇದು ಸ್ವಚ್ಚ ನಗರ ಹಾಗೂ ಸ್ಮಾರ್ಟ್ ಸಿಟಿಗೆ ಸ್ಪರ್ಧೆಯಲ್ಲಿರುವ ನಗರವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

mcc-mangaloreproblem mcc-mangaloreproblem00 mcc-mangaloreproblem01 mcc-mangaloreproblem02

ಆಡಳಿತಕ್ಕೆ ಬಂದು 3 ವರ್ಷಗಳಾದರೂ ಪ್ರಮುಖ ರಸ್ತೆಗಳಲ್ಲಿ ಮುಖ್ಯವಾಗಿ ಜಿಎಚ್ ಎಸ್ ರಸ್ತೆ, ಹಂಪನಕಟ್ಟೆ, ಮಾರ್ಕೆಟ್ ರಸ್ತೆ, ಅಭಿವೃದ್ಧಿಯಾಗಿಲ್ಲ. ನಗರದ ಸೆಂಟ್ರಲ್ ಮಾರುಕಟ್ಟೆಯೂ ಸೇರಿದಂತೆ ಇತರ ಮಾರುಕಟ್ಟೆಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿ ನಿರ್ವಹಣೆಯಿಲ್ಲದೆ ಮಾರುಕಟ್ಟೆಗಳು ದುರ್ವಾಸನೆಯಿಂದ ಕೂಡಿದ್ದು, ರೋಗ ರುಜಿನಗಳನ್ನು ಉತ್ಪಾದಿಸುವ ತಾಣಗಳಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ನೂರಾರು ಜನರು, ವಾಹನಗಳು ಸಂಚರಿಸುವ ಮಂಗಳೂರಿನ ವಾಣಿಜ್ಯ ಕೇಂದ್ರ ಹಳೆಬಂದರು ಹಾಗೂ ಲೇಡಿಗೋಶನ್ ಹಿಂಬದಿ ರಸ್ತೆಗಳ ಸ್ಥಿತಿಯು ದೇಶದ ಯಾವುದೇ ಒಂದು ಕೊಳಚೆ ಪ್ರದೇಶದೊಂದಿಗೆ ಸ್ಪರ್ಧೆಗೆ ನಿಂತಿರುವಂತಿದೆ. ಸಾರ್ವಜನಿಕ ಶೌಚಾಲಯಗಳ ಗತಿಯಂತೂ ಮನುಷ್ಯರು ಹತ್ತಿರ ಸುಳಿಯಲು ಹೇಸಿಗೆ ಪಡುವಂತಿದೆ. ಹೊಸ ಶೌಚಾಲಯಗಳ ಬಗ್ಗೆ ಬಣ್ಣ ಬಣ್ಣದ ಕನಸು ಕಾಣುವ ಪಾಲಿಕೆಯು ಇರುವ ಶೌಚಾಲಯಗಳ ಸೂಕ್ತ ನಿರ್ವಹಣೆ ಮತ್ತು ಅವುಗಳ ದುರಾವಸ್ಥೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳಪೆ ಕಾಮಗಾರಿಯಿಂದಾಗಿ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಇರುವ ಶೌಚಾಲಯಗಳು ಗಬ್ಬು ಹಿಡಿದು ಹೋಗಿದೆ. ಹೊಸ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವುದು ಸಾರ್ವಜನಿಕ ಹಣವನ್ನು ಪೋಲು ಮಾಡುವ ಮೊದಲು ಶೌಚಾಲಯಗಳ ನಿರ್ವಹಣೆ, ಸ್ವಚ್ಚತೆ, ಅವುಗಳ ಗುಣಮಟ್ಟದ ಬಗ್ಗೆ ಮಾನದಂಡಗಳನ್ನು ರೂಪಿಸಿ ಅವನ್ನು ಯಥಾವತ್ತಾಗಿ ಪಾಲಿಸಬೇಕಾದ ಅನಿವಾರ್ಯತೆಯಿದೆ. ಆಗ ಮಾತ್ರ ಶೌಚಾಲಯಗಳು ಸಾರ್ವಜನಿಕ ಉಪಯೋಗವಾಗಬಹುದೇ ವಿನ ಈ ಯೋಜನೆ ಹತ್ತರಲ್ಲಿ ಹನ್ನೊಂದಾಗಬಹುದು.
ನಗರದಲ್ಲಿ ಮನೆ ಮನೆ ಕಸವಿಲೇವಾರಿಯೂ ಸೇರಿದಂತೆ ಸಾರ್ವಜನಿಕ ಕಸವಿಲೇವಾರಿಯೂ ಅಸಮರ್ಪಕವಾಗಿದ್ದು, ನಗರದ ಸುತ್ತಮುತ್ತ ಕಸದ, ಕಟ್ಟಡ ತ್ಯಾಜ್ಯದ ರಾಶಿಗಳು ಕಾಣುತ್ತಿದ್ದು ನಗರವು ಕೊಳಚೆ ನಗರದತ್ತ ಮುಖಮಾಡಿದೆ. ಕಸವಿಲೇವಾರಿಯ ಗುತ್ತಿಗೆಯಲ್ಲಿ ಹಲವು ಷರತ್ತುಗಳಿದ್ದಲ್ಲೂ ಅವುಗಳೆಲ್ಲವನ್ನು ಗಾಳಿಗೆ ತೂರಿ ಗುತ್ತಿಗೆ ಕಂಪೆನಿಯು ಕಾರ್ಯಚರಿಸುತ್ತಿದ್ದರೂ ಪಾಲಿಕೆ ಆಡಳಿತವು ಈ ಬಗ್ಗೆ ಚಕಾರವೆತ್ತದೆ, ಕಂಪೆನಿಗೆ ಬೆಂಗಾವಲಾಗಿ ನಿಂತಿರುವುದು ಆಶ್ಚರ್ಯಕರವಾಗಿದೆ. ವಾಣಿಜ್ಯ ಸಂಕೀರ್ಣಗಳಿಂದ , ಹೋಟೆಲು, ಬಾರ್ ರೆಸ್ಟೋರೆಂಟ್ ಗಳಿಂದ ಕಸ ಸಂಗ್ರಹಿಸಲು ತೋರಿಸುವ ಆಸಕ್ತಿಯನ್ನು ಗುತ್ತಿಗೆದಾರರ ನೌಕರರು ಸಾರ್ವಜನಿಕ ಸ್ಥಳದ ಕಸ ವಿಲೇವಾರಿಯಲ್ಲಿ ತೋರಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದೇ ಸ್ಥಿತ ಮುಂದುವರೆದಲ್ಲಿ ಮಂಗಳೂರು ಸ್ವಚ್ಚ ನಗರದ ಪಟ್ಟಿಯಲ್ಲಿ ಸ್ಥಾನ ವಂಚಿತವಾಗಲಿದೆ. ಇದಕ್ಕೆ ಪಾಲಿಕೆಯು ಕಾಂಗ್ರೆಸ್ ಆಡಳಿತ ವೈಫಲ್ಯವೇ ನೇರ ಕಾರಣವಾಗಿದ್ದು, ಅಧಿಕಾರಿಗಳ ಮೇಲೆ ಕಸವಿಲೇವಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಮೇಲೆ ನಿಯಂತ್ರಣವಿಲ್ಲದ ಆಡಳಿತವು್ ಗೊತ್ತು ಗುರಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಆಡಳಿತವು ಇನ್ನೂ ಮೌನವಹಿಸಿದರೆ ಪ್ರತಿಪಕ್ಷವಾಗಿ ಬಿಜೆಪಿ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗಬಹುದು ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ| ಬ್ರಿಜೇಶ್ ಚೌಟ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಮ.ನ ಪಾ ಸದಸ್ಯ ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


Spread the love
4 Comments
Inline Feedbacks
View all comments
Original R.Pai
8 years ago

These powerful photos should make your stomach churn. I understand that the opposition leader is simply playing politics. However, she is pointing at a real embarrassing problem that is out there for everyone to see in public. To their credit, some organizations like Raamakrishna mission and media outlets like this portal have been doing their best to push city in right direction. However, the lack of participation from one political party leaders is truly beyond pathetic. Every time you hear someone talking about ‘smart city’, show him/her these pictures!!

Praveen
8 years ago
Reply to  Original R.Pai

These powerful photos should make your stomach churn. – Yumreeki Joker’ji Hello Joker’ji, see, you are in Yumreeka – da land of Money (borrowed since God alone knows when) and Milk (never mind the fact that it evaporated a long time ago). The streets are lined with gold. Chanel 5 and Givenchy is in the air. The words ‘homeless’ and ‘jobless’ are never in your dictionaries. And forget about words/phrases such as ‘drug-crime & gun-violence’. Now, don’t be good enough to ask me – WHO is ‘crime’, and ‘what is a GUN’, k, Rampa? So, WHY even bother yourself with… Read more »

Praveen
8 years ago
Reply to  Original R.Pai

These powerful photos should make your stomach churn. – Namma Mangloori rampe

And, Yumreeki Thyampa…. you’re STILL worried about the lack of hygiene in Mlore though you visit it once a decade to offer plantains to Kateen ‘Aane’s’ and sing Bhajanas at Murudeshwar? Here, take a look:

http://www.dailymail.co.uk/news/article-3794074/Sinkhole-Florida-fertilizer-plant/leaks-200-millions-radioactive-water.html

Smiles…. Wa onji Kudlada Rampe maraya imbe?

Original R.Pai
8 years ago

What’s more disgusting? These pictures or illiterates like Joker Pinto? I guess both!!! Apparently Praveena Pinto finds nothing outrageous in these pics. In a way, it makes sense – why would you get shocked if this is what you grew up with!! So, when someone makes apolitical observation pointing at deplorable state of our city, he brings up some obscure references of luna, tvs and daali tove!! Also, look at his laughable attempt to bring up an industrial accident from Florida in response to this report from mangaluru. Thank (imaginary) god, he didn’t quote Cambridge or Berkeley professors!! LOL Is… Read more »