Home Mangalorean News Kannada News ಸ್ವಚ್ಚ ಮಂಗಳೂರು ಎಂದು  ಕರೆಸಿಕೊಳ್ಳುವಲ್ಲಿ ಪಾಲಿಕೆಯ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು – ಕೆ.ಮಹಮದ್

ಸ್ವಚ್ಚ ಮಂಗಳೂರು ಎಂದು  ಕರೆಸಿಕೊಳ್ಳುವಲ್ಲಿ ಪಾಲಿಕೆಯ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು – ಕೆ.ಮಹಮದ್

Spread the love

ಸ್ವಚ್ಚ ಮಂಗಳೂರು ಎಂದು  ಕರೆಸಿಕೊಳ್ಳುವಲ್ಲಿ ಪಾಲಿಕೆಯ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು – ಕೆ.ಮಹಮದ್

ಮಂಗಳೂರು : 2014ರಲ್ಲಿ ಹೊಸ ಹೆಸರಿನಿಂದ ಪ್ರಾರಂಭವಾದ ಸ್ಚಚ್ಛ ಭಾರತ ಅಭಿಯಾನ ಇಂದು ದೇಶದ್ಯಾಂತ ಗುರುತಿಸಲ್ಪಟ್ಟಿದ್ದು , ದೇಶದ ಪ್ರತಿಯೊಂದು ವಾರ್ಡ್,ಗ್ರಾಮ , ನಗರ. ಸ್ವಚ್ಚವಾದಾಗ ಮಾತ್ರ ಅಭಿಯಾನ ಯಶ್ವಸ್ವಿಯಾಗಲು ಮಾತ್ರ ಸಾಧ್ಯ ಮತ್ತು 2019ರೊಳಗೆ ಗಾಂಧೀಜಿ ಯವರ ಸುಂದರ ಭಾರತ ನಿರ್ಮಾಣವಾಗಲು ನಮ್ಮೆಲ್ಲರ ಕರ್ತವ್ಯ ಮುಖ್ಯವಾದುದು ಅದರಲ್ಲೂ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದುದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳೂರು ನಗರದ ಉಪ ಮೇಯರ್ ಕೆ.ಮಹಮದ್ ಕಾರ್ಯಕ್ರಮದಲ್ಲಿ ತಿಳಿಸಿದರು. ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂಬ ದ್ಯೇಯ ವಾಕ್ಯದಂತೆ ನಾವೆಲ್ಲರೂ ಸ್ವಚ್ಛತೆಯಲ್ಲಿ ಭಾಗಿಯಾಗೋಣ ಮತ್ತು ಮಂಗಳೂರು ನಗರವನ್ನು ಸ್ವಚ್ಛತೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣವೆಂದು ತಿಳಿಸಿದರು.ಮಂಗಳೂರು ನಗರವು ಇಂದು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು. ನಾವು ಕಸವನ್ನು ಅವರಿಗೆ ನೀಡುವಾಗ ಹಸಿ ಕಸ ಮತ್ತು ಒಣ ಕಸವೆಂದು ಬೇರ್ಪಡಿಸಿ ನೀಡಿ ಅವರ ಕಾರ್ಯವನ್ನಾದರೂ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡೋಣವೆಂದು ತಿಳಿಸಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ , ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು, ಶಿವಮೊಗ್ಗ ಇಲಾಖೆಯು ಮಂಗಳೂರು ಮಹಾನಗರ ಪಾಲಿಕೆ ಮತ್ತು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇವರ ಸಹಯೋಗದಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ(ನಗರ) ಕಾರ್ಯಕ್ರಮವನ್ನು ಡಿಸೆಂಬರ್ 6 ರಂದು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯಲ್ಲಿ, ಜಿ. ತುಕರಾಂಗೌಡ, ಕ್ಷೇತ್ರ ಪ್ರಚಾರ ಅಧಿಕಾರಿಗಳು, ಮಂಗಳೂರು ಇವರು ಸ್ವಚ್ಛತೆಯ ಕಾರ್ಯಕ್ರಮ ಮನಗಳಲ್ಲಿ, ಮನೆಗಳಲ್ಲಿ, ಮನೆಗಳಿಂದ ಹೊರಹಾಕುವ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಕಳುಹಿಸಿದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ಸ್ವಚ್ಛ ಭಾರತ ಅಭಿಯಾನದ ಉದ್ದೇಶ, ಘನ ತ್ಯಾಜ್ಯ ನಿರ್ವಹಣೆ, ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಮಧು.ಎಸ್.ಮನೋಹರ್, ಪರಿಸರ ಅಭಿಯಂತರರು, ಮಂಗಳೂರು ಮಹಾನಗರ ಪಾಲಿಕೆ ಇವರು ತಮ್ಮ ಭಾಷಣದಲ್ಲಿ ತಿಳಿಸಿದರು.

ವಿನೋದ್ ಕಾರ್ಯಕ್ರಮವನ್ನು ನಿರೂಪಿಸಿದರೆ , ಮಿಥಿಲಿ ಪ್ರಾರ್ಥಿಸಿದರು. ರೋಹಿತ್.ಜಿ.ಎಸ್. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಇವರು ಸ್ವಾಗತಿಸಿದರು. ಶರತ್ ಇವರು ಕಾರ್ಯಕ್ರಮದ ವಂನಾರ್ಪಣೆ ಮಾಡಿದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಚ್ಛ ಭಾರತದ ಕುರಿತು ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಚಿತ್ರ ಪದರ್ಶನ ನಡೆಸಲಾಯಿತು. ಸ್ವಚ್ಛ ಭಾರತದ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಹಲವಾರು ಸ್ಛರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.


Spread the love

Exit mobile version