ಸ್ವಚ್ಚ ಮಂಗಳೂರು 19 ಹಾಗೂ 20 ನೇ ವಾರದ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 200 ಸ್ವಚ್ಛತಾ ಕಾರ್ಯಕ್ರಮಗಳನ್ನು ಪೂರೈಸಿದ ಹಿನ್ನಲೆಯಲ್ಲಿ 19 ನೇ ವಾರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಲ್ ಕಾರ್ಗೋ ಪ್ರಾಯೋಜಿಸಿದ ಸ್ವಚ್ಛ ಭಾರತ ರ್ಯಾಲಿ, ಸ್ವಯಂ ಸೇವಕರ ಸಭೆ, ಆಟೋ ನಿಲ್ದಾಣದ ಉದ್ಘಾಟನೆ, ಸಾವಿರ ಅಡಿ ಗೋಡೆಯ ಸೌಂದರೀಕರಣದ ಉದ್ಘಾಟನೆಯಾಯಿತು. ಜೊತೆಗೆ ಕಳೆದವಾರ ಸುಮಾರು ಹತ್ತು ಜಾಗೆಗಳಲ್ಲಿ (207 ರಿಂದ 215) ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು 14 ಪ್ರದೇಶಗಳಲ್ಲಿ 20 ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಜರುಗಿತು.
216) ಕೆಪಿಟಿ : ಕರ್ನಾಟಕ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಕೆಪಿಟಿ ಪರಿಸರದಲ್ಲಿ ಅಭಿಯಾನ ನಡೆಯಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಆಲ್ ಕಾರ್ಗೋ ಎಚ್ ಆರ್ ಮುಖ್ಯಸ್ಥರಾದ ಶ್ರೀ ನಕ್ರೆ ಸುರೇಂದ್ರ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹೆದ್ದಾರಿ ಪಕ್ಕದ ಕೆಪಿಟಿ ಕಾಲೇಜಿನ ಆವರಣ ಗೋಡೆ ಹಾಗೂ ಏರಪೆÇೀರ್ಟ್ ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಸುಮಾರು 50 ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
217) ಕಾಟಿಪಳ್ಳ: ಜೆಸಿಐ ಗಣೇಶಪುರದ ಸದಸ್ಯರಿಂದ ಇಂದು ಕಾಟಿಪಳ್ಳದಲ್ಲಿ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲಾಯಿತು. ಸ್ವಾಮಿ ಏಕಗಮ್ಯಾನಂದಜಿ ಹಾಗೂ ಡಾ. ಸಂಪತ್ ಕುಮಾರ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಗಣೇಶಪುರದ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕೇಸರಿ ಫ್ರೇಂಡ್ಸ್ ಹಾಗೂ ನವೋದಯ ಯುವಕ ಮಂಡಳದ ಸದಸ್ಯರು ಅಭಿಯನಕ್ಕೆ ಸಹಯೋಗ ನೀಡಿದರು.
218) ದೇರೆಬೈಲ್ : ಲ್ಯಾಂಡಲಿಂಕ್ಸ್ ಮಾತೃಧಾಮದ ಸದಸ್ಯರಿಂದ ದೇರೆಬೈಲಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀಮತಿ ಲಕ್ಷ್ಮಿ ಹಾಗೂ ಶ್ರೀ ಕೃಷ್ಣ ಮೂರ್ತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ದೇರೆಬೈಲ್ ಚರ್ಚಿನ ಆಸುಪಾಸಿನಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಪ್ರಶಾಂತ ನಗರದ ಬಡಾವಣೆಯ ನಿವಾಸಿಗಳು ಕಾರ್ಯಕರ್ಮಕ್ಕೆ ಸಹಕರಿಸಿದರು.
219) ಕಂಕನಾಡಿ : ಲಯನ್ಸ್ ತಂಡದಿಂದ ಹೈಲ್ಯಾಂಡ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ಡಾ. ನವೀನ ಶೆಟ್ಟಿ ಹಾಗೂ ಹರ್ಷಕುಮಾರ್ ಕೇದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೂನಿಟಿ ಆಸ್ಪತ್ರೆಯಿಂದ ಕಂಕನಾಡಿಯವರೆಗಿನ ತೋಡು ಹಾಗೂ ರಸ್ತೆಯನ್ನು ಶುಚಿಗೊಳಿಸಲಾಯಿತು. ಹಲವು ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡರು.
220) ಕಾವೂರು : ಸ್ವಚ್ಛ ಕಾವೂರು ತಂಡದಿಂದ ಕಾವೂರು ಜಂಕ್ಷನ್‍ನಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಉಪಆರಕ್ಷಕ ಶ್ರೀ ಉಮೇಶ್ ಹಾಗೂ ಶ್ರೀ ಸುಜಿತ್ ಕುಮಾರ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಯಿತು. ರಸ್ತೆ ವಿಭಾಜಕಗಳನ್ನು ಸ್ವಚ್ಛ ಮಾಡಿ ಅದರ ಬದಿಗಳಲ್ಲಿ ತುಂಬಿದ್ದ ಮಣ್ಣು ಹಾಗೂ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಎರಡು ಗೋಡೆಗಳಿಗೆ ಅಂದವಾಗಿ ಬಣ್ಣ ಹಚ್ಚಿ ಸುಂದರಗೊಳಿಸಲಾಯಿತು. ಸುಮಾರು 60 ಜನ ಕಾರ್ಯಕರ್ತರು ಭಾಗವಹಿಸಿದರು.
221) ನಂತೂರು : ದಕ್ಷಿಣ ಕನ್ನಡ ಹವ್ಯಕ ಸಭಾದ ಸದಸ್ಯರಿಂದ ಭಾರತೀ ನಂತೂರು ಹೆದ್ದಾರಿ ಅಕ್ಕಪಕ್ಕದಲ್ಲಿ ಸಚ್ಛತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವೇಣುಗೋಪಾಲ್ ಮಾಂಬಾಡಿ ಹಾಗೂ ಶ್ರೀ ಉದಯ್ ಕಾರ್ಣಿಕ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಸುಮಾರು 45 ಜನ ಅಭಿಯಾನದಲ್ಲಿ ಪಾಲ್ಗೊಂಡರು. ಅಭಿಯಾನ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು.
222) ಮೇರಿಹಿಲ್ : ಫ್ರೇಂಡ್ಸ್ ಪಾರ್ ಎವರ್ ತಂಡದ ಸದಸ್ಯರಿಂದ ಮೇರಿಹಿಲ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 7:30 ಕ್ಕೆ ಹೆಚ್ಚುವರಿ ಎಸ್ ಪಿ ಶ್ರೀ ವೇದಮೂರ್ತಿ ಹಾಗೂ ಕರ್ನಾಟಕ ಬ್ಯಾಂಕ್ ಡಿಜಿಎಮ್ ಶ್ರೀ ನಿರ್ಮಲ್ ಕುಮಾರ್ ಜೊತೆಗಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೇರಿಹಿಲ್‍ನಲ್ಲಿನ ಹರಿಪದವು ಸಾಗುವ ರಸ್ತೆ ಪುಟ್ಪಾಥ್ ಹಾಗೂ ತೋಡುಗಳನ್ನು ಶುಚಿಗೊಳಿಸಿದರು.
223) ಚಿಲಿಂಬಿ : ಓಬಿಸಿ ವಸತಿನಿಲಯದ ವಿದ್ಯಾರ್ಥಿನಿಯರಿಂದ ಚಿಲಿಂಬಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಹರೀಶ್ ಹಾಗೂ ಸಾಕ್ಷಿತ ಅಭಿಯಾನವನ್ನು ಶುಭಾರಂಭಗೊಳಿಸಿದರು. ಸುಮಾರು 3 ಗಂಟೆಗಳ ಕಾಲ ಜರುಗಿದ ಅಭಿಯಾನದಲ್ಲಿ ಸುಮಾರು 50 ವಿದ್ಯಾರ್ಥಿನಿಯರು ಪಾಲ್ಗೊಂಡರು.
224) ಪಿವಿಎಸ್ ವೃತ್ತ : ಪ್ರೇರಣಾ ತಂಡದ ಸದಸ್ಯರಿಂದ ಪಿವಿಎಸ್‍ನಲ್ಲಿ ಅಭಿಯಾನ ನಡೆಯಿತು. ಶ್ರಿಮತಿ ಜಯಾ ರಾವ್ ಹಾಗೂ ವಿಹಾ ಕಾರ್ಯಕ್ರಮಕ್ಕೆ ಹಸಿರು ಧ್ವಜ ತೋರಿಸಿ ಆರಭಗೊಳಿಸಿದರು.ಶ್ರೀ ಸದಾನಂದ ಉಪಾಧ್ಯಾಯ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಮುಖ್ಯರಸ್ತೆ ಹಾಗೂ ತೊಡುಗಳನ್ನು ಶುಚಿಗೊಳಿಸಿದರು. ಹಿರಿಯರೂ ಕಿರಿಯರೂ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
225) ಅಸೈಗೋಳಿ: ಮಂಗಳುರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಅಸೈಗೋಳಿ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ಥಳೀಯ ಪೆÇೀಲಿಸ್ ಸಿಬ್ಬಂದಿ, ಭಜರಂಗದಳ, ಹಾಗೂ ಅಯ್ಯಪ್ಪ ಭಜನಾ ಮಂದಿರದ ಸದಸ್ಯರೆಲ್ಲ ಸೇರಿ ಸ್ವಚ್ಛತಾ ಕೈಂಕರ್ಯ ಮಾಡಿದರು. ಸುಮಾರು 3 ಗಂಟೆಯ ಕಾಲ ಅಭಿಯಾನ ನಡೆಯಿತು.
226) ಮಂಗಳಾದೇವಿ: ಶ್ರೀ ಶಾರದಾ ಮಹಿಳಾ ವೃಂದದ ಸದಸ್ಯೆಯರಿಂದ ಇಂದು ಮಂಗಳಾ ನಗರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಬೆಂಗಳೂರಿನ ಸ್ವಾಮಿ ತ್ರೈಲೋಕ್ಯಾನಂದಜಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ನಂತರ ಮಹಿಳಾ ವೃಂದದ ಸದಸ್ಯೆಯರು ಮಂಕಿಸ್ಟಾಂಡ್ ಮುಖ್ಯ ರಸ್ತೆಯಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಸ್ವಚ್ಛಗೊಳಿಸಿದರು. ಮನೆ ಮನೆಗೆ ತೆರಳಿ ಜಾಗೃತಿಗಾಗಿ ಕರಪತ್ರ ಹಂಚಲಾಯಿತು.
227) ಕರಂಗಲಪಾಡಿ; ಶ್ರೀ ಸುಬ್ರಮಣ್ಯ ಸಭಾದ ಸದಸ್ಯರಿಂದ ಕರಂಗಲಪಾಡಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕರಂಗಲಪಾಡಿ ಸುಬ್ರಮಣ್ಯ ಸಭಾಕ್ಕೆ ಸಾಗುವ ಮಾರ್ಗದ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ಎಂ ಆರ್ ವಾಸುದೇವ್, ಶ್ರೀ ಶ್ರೀಕಾಂತ್ ರಾವ್ ಸೇರಿದಂತೆ ಅನೇಕರು ಸ್ವಚ್ಛತೆಯ ಕಾರ್ಯದಲ್ಲಿ ಪಾಲ್ಗೊಂಡರು.
228) ರಥಬೀದಿ: ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂಡ ರಥಬೀದಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಪ್ರಾಚಾರ್ಯ ಶ್ರೀ ರಾಜಶೇಖರ್ ಹೆಬ್ಬಾರ್ ಹಾಗೂ ಶ್ರೀ ಪುರುಷೋತ್ತಮ್ ಭಟ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಪೆÇ್ರ. ಶೇಷಪ್ಪ ಅಮೀನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಟೆಂಪಲ್ ಸ್ಕ್ವೇರ್, ನ್ಯೂ ಪೀಲ್ಡ್ ಸ್ಟ್ರೀಟ್ ಹಾಗೂ ರಥಬೀದಿಯ ಕೊನೆಯ ತನಕ ರಸ್ತೆಯ ಇಕ್ಕೆಲಗಳನ್ನು ಶುಚಿಗೊಳಿಸಿದರು.
229) ಪಡೀಲ್: ಸ್ವಚ್ಛ ಪಡೀಲ್ ತಂಡದ ಸದಸ್ಯರು ಕರ್ಮರ ಬಜಾಲ್ ಪ್ರದೇಶದಲ್ಲಿ ಅಭಿಯಾನ ನಡೆಸಿದರು. ಬೆಳಿಗ್ಗೆ ಸುಮಾರು 7:30 ರಿಂದ 9:30 ರ ವರೆಗೆ ಬಜಾಲ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.