Home Mangalorean News Kannada News ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 43 ರಿಂದ 52 ನೇ ಕಾರ್ಯಕ್ರಮಗಳು

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 43 ರಿಂದ 52 ನೇ ಕಾರ್ಯಕ್ರಮಗಳು

Spread the love

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 43 ರಿಂದ 52 ನೇ ಕಾರ್ಯಕ್ರಮಗಳು

ಮಂಗಳೂರು: ರಾಮಕೃಷ್ಣ ಮಿಷನ್3ನೇ ಹಂತದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿüಯಾನದ 43 ರಿಂದ 52 ನೇ ಕಾರ್ಯಕ್ರಮಗಳು ಭಾನುವಾರ ಜರುಗಿದವು

43 ಗಣಪತಿ ಹೈಸ್ಕೂಲ್‍ರಸ್ತೆ :ಗಣಪತಿ ಹೈಸ್ಕೂಲ್ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿತ್ಯಾಗಿಶ್ವರಾನಂದಜಿ ಹಾಗೂ ಶ್ರೀ ರಾಮಚಂದ್ರರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲಿ ್ಲಕ್ಯಾಪ್ಟನ್‍ಗಣೇಶ್‍ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಚ್ಛತೆಯ ಮಹತ್ವದ ಕುರಿತು ತಿಳಿಸಿದರು. ಶ್ರೀ ಮಹೇಶ್ ಬೋಂಡಾಲ್, ಶ್ರೀಮತಿ ರಂಜಿತಾ ಮತ್ತಿತರರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಜಿಎಚ್‍ಎಸ್ ರಸ್ತೆಯನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಶುಚಿಗೊಳಿಸಿದರು. ಸಾಮಾಜಿಕ Áರ್ಯಕರ್ತ ಶ್ರೀ ಸುರೇಶ್ ಶೆಟ್ಟಿ ಸಂಯೋಜಿಸಿದರು.

44 ಕೊಂಚಾಡಿ :ಕೊಂಚಾಡಿ ಫ್ರೆಂಡ್ಸ್ ಸರ್ಕಲ್ ನ ಸದಸ್ಯರು ನೆಕ್ಕಿಲ್ ಮಾಲೇಮಾರ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿದರು. ಬೆಂಗಳೂರಿನ ಸ್ವಾಮಿ ಅಭಯಾನಂದಜಿ ಹಾಗೂ ಶ್ರೀ ಜಗದೀಶ್ ಶೆಟ್ಟಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಸುಮಾರು 45 ಜನ ಯುವಕರು ಶ್ರೀ ಯೋಗಿಶ್ ಹಾಗೂ ದೀಕ್ಷಿತ್ ಮುಂದಾಳತ್ವದಲ್ಲಿ ಸುಮಾರು 3 ಗಂಟೆಗಳ ಸ್ವಚ್ಛತೆಯ ಕೈಂಕರ್ಯ ಕೈಗೊಂಡರು. ಅರ್ಜುನ ಮರೋಳಿ ಸಂಯೋಜಿಸಿದರು.

bejai-1

45 ಉರ್ವ್‍ಮಾರ್ಕೆಟ್ :  ಮಂಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಉರ್ವಾ ಮಾರ್ಕೆಟ್ ವೃತ್ತದಲ್ಲಿ ಸ್ವಚ್ಛತೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 7:30 ಕ್ಕೆ ಸ್ವಾಮಿತ್ಯಾಗೀಶ್ವರಾನಂದಜಿ ಹಾಗೂ  ನಿರ್ದೇಶಕರಾದ ಶ್ರೀ ಪ್ರಭಾಕರರಾವ್ ಅಭಿಯಾನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉರ್ವ ಸಾಂಸ್ಕೃತಿಕ ಸಂಘದ ಸದಸ್ಯರು, ಕರ್ನಾಟಕ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು, ಆಟೋಚಾಲಕರು ಮತ್ತಿತರರು ಭಾಗವಹಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ ಸ್ವಚ್ಛ ಮಂಗಳೂರು ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಸ್ವಯಂ ಸೇವಕರನ್ನು ಜಯರಾಂ ಕಾರಂದೂರು ಮಾರ್ಗದರ್ಶಿಸಿದರು. ಶ್ರೀ ಪಿ ಸುರೇಶ್ ಹಾಗೂ ಅವಿನಂದನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು. ಸುಮಾರು 150 ಜನ ಸ್ವಚ್ಛತಾ ಕೈಂಕರ್ಯದಲ್ಲಿ ಪಾಲ್ಗೊಂಡರು.

46 ಮೋರ್ಗನ್ಸ್‍ಗೇಟ್ : ಭಗಿನಿ ಸಮಾಜದ ಮಕ್ಕಳು ಹಾಗೂ ಮೋರ್ಗನ್ಸ್‍ಗೇಟ್ ಸಾರ್ವಜನಿಕರಿಂದ ಭಗಿನಿ ಸಮಾಜಜೆಪ್ಪು ಮಾರ್ಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಗದಗ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿಜಗನ್ನಾಥಾನಂದಜಿ ಹಾಗೂ ಶ್ರೀ ಮತಿರತ್ನಾ ಆಳ್ವ ಅಭಿüಯಾನಕ್ಕೆ ಹಸಿರು ನಿಶಾನೆ ತೋರಿಸಿದರು. ಶ್ರೀ ಉಮಾನಾಥ ಕೋಟೇಕಾರ್ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರು.

47 ಲೇಡಿಹಿಲ್: ಮಂಗಳೂರು ಆರ್ಟ್‍ಆಫ್ ಲಿವೀಂಗ್ ಬಳಗ ಶ್ರೀ ಸದಾಶಿವ ಕಾಮತ್ ನೇತೃತ್ವದಲ್ಲಿ ಲೇಡಿಹಿಲ್ ವೃತ್ತದ ಸುತ್ತಮುತ್ತ ಸ್ವಚ್ಛ ಮಾಡಿದರು. ಸ್ವಾಮಿತ್ಯಾಗೀಶ್ವರಾನಂದಜಿ ಹಾಗೂ ಶ್ರೀ ಅಶೋಕ ಕುಮಾರ್, ಮದನ್ ಲಾಲ್‍ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಳ್ಳಾಲ ಹಾಗೂ ಸುರತ್ಕಲ್ ಆರ್ಟ್‍ಆಫ್ ಲೀವಿಂಗ್ ಸದಸ್ಯರು ಸ್ವಚ್ಛತೆಯಲ್ಲಿ ಕೈಜೋಡಿಸಿದರು. ಮನಪಾ ಸದಸ್ಯೆ ಶ್ರೀಮತಿ ಜಯಂತಿ ಆಚಾರ್ ಸ್ವಚ್ಛತೆಯ ಕಾರ್ಯದಲ್ಲಿ ಮೂಂಚೂಣಿಯಲ್ಲಿದ್ದರು. ಸಂಯೊಜಕ ಸುಜಿತ್ ಪ್ರತಾಪ್‍ಕಾರ್ಯಕ್ರಮ ಸಂಘಟಿಸಿದರು.

48 ವೆಲೆನ್ಸಿಯಾ: ಸಹ್ಯಾದ್ರಿ ಇಂಜನಿಯರಿಂಗ್ ವಿದ್ಯಾರ್ಥಿಗಳು ಶ್ರೀಲತಾ ಉಳ್ಳಾಲಇವರ ಮಾರ್ಗದರ್ಶದಲ್ಲಿ ವೆಲೆನ್ಸಿಯಾ ಪರಿಸರದಲ್ಲಿ ಸ್ವಚ್ಚ ಮಂಗಳೂರು ಅಭಿಯಾನವನ್ನು ಕೈಗೊಂಡರು. ಕೊಡಗಿನ  ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಬೋಧಸ್ವರೂಪಾನಂದಜಿ ಹಾಗೂ ಸಹ್ಯಾದ್ರಿ ಕಾಲೇಜಿನ ಸಹಪ್ರಾಧ್ಯಾಪಕ ಶ್ರೀ ಪ್ರಭಾಕರ್ ಬಿ ಕೆ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಸಾನೆ ತೋರಿಸಿ ಚಾಲನೆ ನೀಡಿದರು. ಸ್ವಾಮಿಜಿ ಸ್ವಚ್ಚತೆಯ ಮಹತ್ವದಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ವಿದ್ಯಾರ್ಥಿಗಳು ವೆಲೆನ್ಸಿಯಾ ವೃತ್ತದ ಸುತ್ತಮುತ್ತ ಸ್ವಚ್ಛತೆ ಮಾಡಿದರು. ಶ್ರೀ ಪ್ರಕಾಶ್ ಗರೋಡಿ ಹಾಗೂ ಧನುಷ್ಯ ಕಾರ್ಯಕ್ರಮ ಸಂಯೋಜಿಸಿದರು.

49 ಚಿಲಿಂಬಿ : ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿನಿಯರು ಈ ವಾರದ ಸ್ವಚ್ಛತೆಯಲ್ಲಿ ಕೈಜೋಡಿಸಿದರು. ಎಂ ಆರ್ ಪಿ ಎಲ್  ಪ್ರಧಾನ ಪ್ರಬಂಧಕರಾದ ಶ್ರೀ ಬಿ ಎಚ್ ವಿ ಪ್ರಸಾದ ಹಾಗೂ ನಾಯಲ್ ಪೀಂಟೋಚಿಲಿಂಬಿಯಲ್ಲಿ ಜರುಗಿದ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳು ಅತೀಉತ್ಸಾಹದಿಂದ  ಮಹೇಶ್ ಮಾರ್ಗದರ್ಶನದಲ್ಲಿರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆಯನ್ನುಕೈಗೊಂಡರು. ಶ್ರೀ ವಿಠಲದಾಸ ಪ್ರಭು ಹಾಗೂ ಶ್ರೀ ಸುಬ್ರಾಯ ನಾಯಕಕಾರ್ಯಕ್ರಮ ಸಂಯೋಜಿಸಿದರು.

50 ಜೆಪ್ಪು (ಕಾಸ್ಸಿಯಾ)ನಿವೇದಿತಾ ಬಳಗದ ಸದಸ್ಯೆಯರಿಂದ ಕಾಸ್ಸಿಯಾ ಶಾಲೆಯ ಹೊರ ಪರಿಸರದಲ್ಲಿ ಸ್ವಚ್ಛತಾಅಭಿಯಾನ ನಡೆಯಿತು. ಸ್ವಾಮಿಜಗನ್ನಾಥಾನಂದಜಿಕಾರ್ಯಕ್ರಮವನ್ನು ವೇದಘೋಷದ ಮೂಲಕ ಪ್ರಾರಂಭಿüಸಿದರು. ಅನೇಕ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಶುಭೋದಯ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸ್ವಚ್ಛ ಮಂಗಳೂರು ಸಂಯೋಜಕಕೊಡಂಗೆ ಬಾಲಕೃಷ್ಣ ನಾಯಕ್ ಹಾಗೂ ಶ್ರಿ ಶಿಶಿರ್ ಅಮೀನ್ ನೇತೃತ್ವ ವಹಿಸಿಕೊಂಡಿದ್ದರು.

51 ಕುದ್ರೋಳಿ : ಪರಂಜ್ಯೋತಿ ಮಾನವ ಸೇವಾ ಸಮಿತಿ ಹಾಗೂ ಶ್ರೀ ನಾರಯಣಗುರುಕಾಲೇಜಿನಜಂಟಿಆಶ್ರಯದಲ್ಲಿ ನಗರದ ಕುದ್ರೋಳಿಯಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು  ಕೈಗೊಳ್ಳಲಾಗಿತ್ತು. ರಾಣೇಬೆನ್ನೂರಿನರಾಮಕೃಷ್ಣ ವಿವೇಕಾನಂದಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಹಾಗೂ ಶ್ರೀಮತಿ ಉಷಾ ರಾಹುಲ್‍ ಕಾರ್ಯಕ್ರಮಕ್ಕೆ ಜಂಟಿಯಾಗಿ ಚಾಲನೆ ನೀಡಿದರು. ಶ್ರೀ ಮನೋಹರ್ ಪ್ರಭು ಅಭಿಯಾನವನ್ನು ಸಂಘಟಿಸಿದರು.

52 ಬಿಜೈ: ಮಂಗಳೂರು ಸೀನಿಯರ್ಸ್ ಕೇಂದ್ರ ಬಸ್ ನಿಲ್ದಾಣದ ಹೊರಭಾಗದಲ್ಲಿ ಸ್ವಚ್ಛತಾಕಾರ್ಯವನ್ನುಕೈಗೊಂಡರು. ಶ್ರೀ ಕೃಷ್ಣಪ್ಪ ಸ್ವಚ್ಛತೆಯ ಪ್ರತಿಜ್ಞೆ ಕೊಡಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಹಿರಿಯರಾದ ಶ್ರೀ ರಮೇಶ್‍ರಾವ್ ನೇತೃತ್ವದಲ್ಲಿಕಾರ್ಯಕರ್ತ್ರರು ಬಿಜೈ ಬಸ್ ನಿಲ್ದಾಣ ಹೊರಭಾಗದ ರಸ್ತೆಗಳನ್ನು ಶುಚಿಗೊಳಿಸಿದರು. ಶ್ರೀ ನಾಗೇಶ್ ಹಾಗೂ ಶ್ರೀ ರಾಮಕುಮಾರ್ ಬೇಕಲ್‍ಕಾರ್ಯಕ್ರಮವನ್ನು ಸಂಯೋಜಿಸಿದರು. ಹಿರಿಯರ ಸಹಾಯಕ್ಕಾಗಿ ಕೆಲವು ಯುವಕಯುವತಿಯರೂಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಒಟ್ಟು 10 ಪ್ರದೇಶಗಳಲ್ಲಿ ಈ ವಾರದಅಭಿಯಾನವನ್ನು ಸಂಯೋಜಿಸಲಾಗಿತ್ತು.

 


Spread the love

Exit mobile version