Home Mangalorean News Kannada News ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 8ನೇ ಭಾನುವಾರದ ಶ್ರಮದಾನ

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 8ನೇ ಭಾನುವಾರದ ಶ್ರಮದಾನ

Spread the love

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 8ನೇ ಭಾನುವಾರದ ಶ್ರಮದಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 8ನೇ ಶ್ರಮದಾನವನ್ನು ನಗರದ ಬಂದರು ಪರಿಸರದಲ್ಲಿ ಆಯೋಜಿಸಲಾಯಿತು.   ಭಾನುವಾರ ಬೆಳಿಗ್ಗೆ 7-30 ಕ್ಕೆ ಅಜಿಝುದ್ದೀನ್ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ರಮೀಜಾ ನಾಸೀರ್ ಹಾಗೂ ದ.ಕ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶ್ರೀ ಹರೀಶ್ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು.

ಚಾಲನೆಯ ಬಳಿಕ ಮಾತನಾಡಿದ ರಮೀಜಾ ನಾಸೀರ್ “ಪ್ರತಿಯೊಬ್ಬರು ಸ್ವಚ್ಛತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಜನರ ಮನಸ್ಸನ್ನು ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ನಾವು ಸರ್ವಸಹಕಾರವನ್ನು ನೀಡಲು ಸಿದ್ಧ” ಎಂದು ತಿಳಿಸಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಹರೀಶ್ ಆಚಾರ್ “ಸ್ವಚ್ಛ ಭಾರತ ಒಂದು ಜನಾಂದೋಲನವಾಗಿ ನಿರ್ಮಾಣವಾಗುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ಸ್ವಚ್ಛ ಭಾರತ ನಿರ್ಮಾಣ ಪ್ರತಿಯೊಬ್ಬನ ಕರ್ತವ್ಯವಾಗಬೇಕು. ಜನರು ರಸ್ತೆಗಿಳಿದು ಕಸಗುಡಿಸುವುದು ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನವಾಗಿದೆ. ಜೊತೆಜೊತೆಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ಕೆ ಹೆಚ್ಚು ಹೆಚ್ಚು ಒತ್ತು ನೀಡುವಂತಾಗಬೇಕು. ಈ ಕಾರ್ಯವನ್ನು ನಾವು ಕಾಯಾ ವಾಚಾ ಮನಸಾ ನಿಷ್ಠೆಯಿಂದ ಮಾಡೋಣ” ಎಂದು ಹೇಳಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ನಾಸೀರ್‍ಯಾದ್ಗಾರ್, ವಿಜಯೇಂದ್ರ ಚಿಲಿಂಬಿ, ಇಮ್ತಿಯಾಜ್ ಶೇಖ್, ಸುರೇಂದ್ರ ಕುಡ್ವ ಶ್ರೀಕಾಂತ್ ರಾವ್, ಕೋಡಂಗೆ ಬಾಲಕೃಷ್ಣ ನಾೈಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ವಚ್ಛತೆ: ಬಂದರ್ ಪ್ರದೇಶದ ಅಜಿಝುದ್ದೀನ್ ರಸ್ತೆ, ಕಂಡತ್ತಪಲ್ಲಿ ಜುಮ್ಮಾ ಮಸೀದಿ. ಕಾರ್‍ಸ್ಟ್ರೀಟ್ ಕೊನೆಯ ಭಾಗಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಮೊದಲಿಗೆ ಐದು ತ್ಯಾಜ್ಯ ರಾಶಿಗಳನ್ನು ಗುರುತಿಸಲಾಯಿತು. ಅನೇಕ ದಿನಗಳಿಂದ ರಾಶಿರಾಶಿ ತ್ಯಾಜ್ಯ ಶೇಖರಣೆಗೊಂಡು ದಾರಿಯಲ್ಲಿ ಹೋಗುವರು ಅಸಹ್ಯ ಪಟ್ಟುಕೊಳ್ಳುತ್ತಿದ್ದರು, ಜೊತೆಗೆ ರಸ್ತೆಯ ಬದಿಯ ಜಾಗೆಯನ್ನು ಆಕ್ರಮಿಸಿಕೊಂಡು ನಗರದ ಶುಚಿತ್ವಕ್ಕೂ ಧಕ್ಕೆ ತರಿಸುತ್ತಿದ್ದವು. ಇಂದು ಅವುಗಳನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಲಾಗಿದೆ. ಮೊದ¯ ಸ್ಥಳವನ್ನು ಪ್ರೀತಮ್ ಮುಗಿಲ್ ಹಾಗೂ ಕಾರ್ಯಕರ್ತರು ಜೆ.ಸಿ.ಬಿ ಬಳಸಿ ತ್ಯಾಜ್ಯ ಹಾಗೂ ದೊಡ್ಡ ಕಲ್ಲುಗಳು ಹಾಗೂ ಸ್ಲಾಬ್‍ಗಳ ರಾಶಿಯನ್ನು ತೆಗೆದು ಶುಚಿಗೊಳಿಸಿದರು. ಮತ್ತೊಂದೆಡೆ ಶಿಶಿರ್ ಅಮೀನ್, ಅವಿನಾಶ್ ಅಂಚನ್ ಹಾಗೂ ಸ್ವಯಂ ಸೇವಕರು ಅಜಿಝುದ್ದೀನ್ ಕ್ರಾಸ್ ರಸ್ತೆಯಲ್ಲಿದ್ದ ಪ್ಲಾಸ್ಟಿಕ್ ಸಹಿತವಾದ ತ್ಯಾಜ್ಯವನ್ನು ತೆರವು ಮಾಡಿದರು. ಬಂದರ್ ರಸ್ತೆಯಲ್ಲಿಯ ಮೂರನೇ ರಾಶಿಯನ್ನು ಕಮಲಾಕ್ಷ ಪೈ, ರಾಮಕುಮಾರ್ ಬೇಕಲ್ ಹಾಗೂ ಇನ್ನಿತರರು ಸೇರಿ ತೆಗೆದು ಸ್ವಚ್ಛ ಮಾಡಿದರು. ಸ್ಥಳೀಯ ಕಾಪೆರ್Çೀರೇಟರ್ ನೆರವಿನಿಂದ ಇನ್ನೆರಡು ಸ್ಥಳಗಳನ್ನು ಕಸಮುಕ್ತವನ್ನಾಗಿಸಲಾಯಿತು. ಇನ್ನುಳಿದಂತೆ ಮಹಿಳಾ ಕಾರ್ಯಕರ್ತೆಯರು ರಸ್ತೆಯ ಬದಿಗಳು, ಕಾಲುದಾರಿಗಳನ್ನು ಪೆÇರಕೆಯಿಂದ ಗುಡಿಸಿ ಸ್ವಚ್ಛ ಮಾಡಿದರು. ತ್ಯಾಜ್ಯ ತೆರವುಗೊಳಿಸಿದ ಬಳಿಕ ಈ ಸ್ಥಳಗಳಲ್ಲಿ ಹೂಕುಂಡಗಳನ್ನಿಡುವುದರ ಮೂಲಕ ಸುಂದರಗೊಳಿಸಲಾಗಿದೆ ಹಾಗೂ ಪ್ರತಿದಿನ ಅಲ್ಲಿ ಕಾವಲು ಕಾಯುವುದರ ಮೂಲಕ ಆ ಸ್ಥಳಗಳಲ್ಲಿ ಮತ್ತೆ ಕಸ ಬೀಳದಂತೆ ಎಚ್ಚರ ವಹಿಸಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಏರ ಪೆÇೀರ್ಟ್ ರಸ್ತೆ: ಕರ್ನಾಟಕ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಉಡುಪಿ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಪ್ರಾಂಶುಪಾಲರಾದ ಮೇಜರ್ ವಿಜಯಕುಮಾರ ಹಾಗೂ ಸಂತೋಷ್ ಕುಮಾರ ಇವರು ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ರಾಜೇಂದ್ರ ಸುಬ್ರಮಣ್ಯ, ಮಹಾಗುಂಡ ಹಾಗೂ ಗೌತಮ ಶ್ರಮದಾನವನ್ನು ಸಂಘಟನೆ ಮಾಡಿದರು.

ಸ್ವಚ್ಛ ಸೋಚ್ ಸೆಮಿನಾರ್: ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ಈ ತಿಂಗಳಲ್ಲಿ ಒಟ್ಟು ಆರು ಸೆಮಿನಾರಗಳನ್ನು ಆಯೋಜನೆ ಮಾಡಲಾಯಿತು. ಸ್ವಚ್ಛತೆಯ ಕುರಿತಂತೆ ಭಾಷಣ, ಸಂವಾದ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಪೆÇ್ರೀ. ರಾಜಮೋಹನ್ ರಾವ್, ಶ್ರೀ ಗೋಪಿನಾಥ್ ರಾವ್ ಹಾಗೂ ಡಾ. ನಿವೇದಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ವಿಶ್ವವಿದ್ಯಾನಿಲಯ ಕಾಲೇಜು ಹಂಪಣಕಟ್ಟ, ರಾಮಕೃಷ್ಣ ಪದವಿ ಕಾಲೇಜು, ಶ್ರೀನಿವಾಸ ಪದವಿ ಕಾಲೇಜು, ಸರಕಾರಿ ಐಟಿಐ ಕಾಲೇಜು, ಯೂನಿವರ್ಸಿಟಿ ಸ್ನಾತಕೋತ್ತರ ವಿಭಾಗ, ಶ್ರೀನಿವಾಸ ಫಿಸಿಯೋಥೆರಪಿ ಕಾಲೇಜುಗಳಲ್ಲಿ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಯಿತು. ಸ್ವಚ್ಛ ಸೋಚ್ ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರಪಾಡಿ ವಿಚಾರ ಸಂಕಿರಣಗಳನ್ನು ಸಂಘಟಿಸಿದರು.

ಸ್ವಚ್ಛ ಗ್ರಾಮ : ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ನಲವತ್ತು ಗ್ರಾಮಗಳಲ್ಲಿ ಸ್ವಚ್ಛ ಗ್ರಾಮ ಶ್ರಮದಾನ ಜರುಗಿತು. ಅರಂತೋಡು, ಕಳಂಜ, ಒಳಮೊಗರು, ಬೆಟ್ಟಂಪಾಡಿ, ಅಳದಂಗಡಿ, ಅರ್ಜಿ, ನಲ್ಲೂರು, ಸಾನೂರು, ದುರ್ಗಾ, ಮಾಳ, ಮುದ್ರಾಡಿ, ಕಾಯರ್ತಡ್ಕ ಮತ್ತಿತರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸಿದರು.

ಸ್ವಚ್ಛ ಐವರ್ನಾಡು: ಗ್ರಾಮ ಪಂಚಾಯತ್ ಸಹಯೋಗದಲ್ಲಿ ಇಂದು ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಐವರ್ನಾಡಿನಲ್ಲಿ ಶ್ರಮದಾನವನ್ನು ಆಯೋಜನೆ ಮಾಡಲಾಯಿತು. ಪೇಟೆಯಿಂದ ಶ್ರೀಪಂಚಲಿಂಗೇಶ್ವರ ದೇವಸ್ಥಾನದವರೆಗೂ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಸುಮಾರು ಮೂನ್ನೂರಕ್ಕೂ ಅಧಿಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗ್ರಾಮ ಪಂಚಯತ್ ಅಭಿವೃದ್ಧಿ ಅಧಿಕಾರಿ ಯು ಡಿ ಶೇಖರ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಎಲ್ಲ ಸ್ವಚ್ಛತಾ ಕಾರ್ಯಕ್ರಮಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.


Spread the love

Exit mobile version