Home Mangalorean News Kannada News ಸ್ವಚ್ಛ ಭಾರತ ಮಿಷನ್ ಅಂಗವಾಗಿ ಸ್ವಚ್ಛ ಮಂಗಳೂರು ಅಭಿಯಾನ

ಸ್ವಚ್ಛ ಭಾರತ ಮಿಷನ್ ಅಂಗವಾಗಿ ಸ್ವಚ್ಛ ಮಂಗಳೂರು ಅಭಿಯಾನ

Spread the love

“ಸ್ವಚ್ಛ ಭಾರತ ಮಿಷನ್” ಅಂಗವಾಗಿ ಸ್ವಚ್ಛ ಮಂಗಳೂರು ಅಭಿಯಾನ

ಮ0ಗಳೂರು :- “ಸ್ವಚ್ಛ ಭಾರತ ಮಿಷನ್” ಅಂಗವಾಗಿ “ಸ್ವಚ್ಛ ಮಂಗಳೂರು ಅಭಿಯಾನ” ದಡಿ ಮಹಾನಗರ ಪಾಲಿಕೆಯ ಆಶ್ರಯದಲ್ಲಿ “ಬೆಂಗ್ರೆ ಸ್ವಚ್ಛತಾ ಆಂದೋಲನ”ವನ್ನು ಮಹಾಜನಾ ಸಭಾ, ಬೆಂಗ್ರೆ, ಬೆಸೆಂಟ್ ಮಹಿಳಾ ಕಾಲೇಜು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರುಗಳ ಸಹಯೋಗದೊಂದಿಗೆ ಸೆಪ್ಟಂಬರ್ 10 ಮತ್ತು 11 ರಂದು ಆಯೋಜಿಸಲಾಗಿತ್ತು .

ಸ್ವಚ್ಛತಾ ಆಂದೋಲನಾ ತೋಟ ಬೆಂಗ್ರೆ ಫೆರಿ ಪ್ರದೇಶದಲ್ಲಿ, ಶನಿವಾರ ಬೆಳಿಗ್ಗೆ ಸ್ವಚ್ಛತಾ ಆಂದೋಲನಕ್ಕೆ ಜೆ.ಆರ್.ಲೋಬೋ, ಶಾಸಕರು, ದಕ್ಷಿಣ ವಿಧಾನಸಭಾ ಕ್ಷೇತ್ರ ಇವರು ರಸ್ತೆ ಗುಡಿಸುವ ಮೂಲಕ ಚಾಲನೆ ನೀಡಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿನಾಥ್ ಎಂ., ಪೂಜ್ಯ ಮಹಾ ಪೌರರು ಇವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಕವಿತಾ ಸನಿಲ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು, ಬೆಂಗ್ರೆ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮೀರಾ ಕೆ.ಕರ್ಕೇರ,ಚೇತನ್ ಬೆಂಗ್ರೆ, ಅಧ್ಯಕ್ಷರು,ಮಹಾಜನಾ ಸಭಾ ಬೆಂಗ್ರೆ ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು “ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನೈರ್ಮಲ್ಯತೆಯನ್ನು ಕಾಪಾಡುವ ಚಿಂತನೆಯನ್ನು ಹೊಂದಿ, ಈ ನಿಟ್ಟಿಒಡನೆಗೆ ತಮ್ಮ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು” , ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಪೌರರು ಮಾತನಾಡಿ, ಬೆಂಗ್ರೆ ಪ್ರದೇಶವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಸುತ್ತಿರುವುದು, ಈ ಮೂಲಕ ಸಾರ್ವಜನಿಕರಲ್ಲಿ ನೈರ್ಮಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಅನುಕರಣೀಯ, ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಸಂಸ್ಥೆಗಳಿಗೆ ಅಭಿನಂದಿಸಿದರು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸ್ವಯಂ ಸೇವಕರಿಗೆ ಧನ್ಯವಾದಗಳನ್ನು ತಿಳಿಸಿದರು.

ಸ್ವಚ್ಛತಾ ಆಂದೋಲನದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಧರ್ ಹೆಗ್ಡೆ, ಸಚೇತಕರು, ಮಹಾನಗರಪಾಲಿಕೆ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ, ರೂಪಾ ಡಿ.ಬಂಗೇರಾ, ಪ್ರತಿಪಕ್ಷದ ನಾಯಕಿ, ಮಹಾನಗರಪಾಲಿಕೆ, ಮೀರಾ ಕರ್ಕೇರ, ಯೋಜನಾಧಿಕಾರಿ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಶ್ರೀ ದೇವಾನಂದ ಪೈ, ಸಂಚಾಲಕರು, ಬೆಸೆಂಟ್ ಮಹಿಳಾ ಕಾಲೇಜು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಂಗ್ರೆಯಲ್ಲಿ ನಡೆದ 2 ದಿನಗಳ ಸ್ವಚ್ಛತಾ ಆಂದೋಲನದಲ್ಲಿ ಮೇಲ್ಕಚಿಡ ವಿವಿದ ಸಂಸ್ಥೆಗಳ 1000ಕ್ಕೂ ಅಧಿಕ ವಿದ್ಯಾರ್ಥಿಗಳು, ಸ್ವಯಂ ಸೇವಕರು ಪಾಲ್ಗೊಂಡು, ತೋಟ ಬೆಂಗ್ರೆ ಪ್ರದೇಶದ ವಸತಿ ಪ್ರದೇಶ, ಗುರುಪುರ ನದಿ ದಡೆಯನ್ನು ಸ್ವಚ್ಛಗೊಳಿಸಿದರು, ಮಹಾನಗರಪಾಲಿಕೆಯ ಇಟಾಚಿಯು ಸಮುದ್ರಬದಿಯಲ್ಲಿ ಸ್ವಚ್ಛಗೊಳಿಸಲು ಉಪಯೋಗಿಸಲಾಯಿತು. ಇದಲ್ಲದೆ ವಿದ್ಯಾರ್ಥಿಗಳು ಮಹಾನಗರಪಾಲಿಕೆ ಯ ಮಲೇರಿಯಾ ನಿಯಂತ್ರಣ ಘಟಕದ ಸಿಬ್ಬಂದಿಗಳೊಂದಿಗೆ ಮನೆ-ಮನೆ ತೆರಳಿ ಮಲೇರಿಯಾ ಕುರಿತು ಜಾಗೃತಿ ಮಾಡಿಸುವ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕೆಲಸ ಮಾಡಿದರು. ಎಂದು ಪ್ರಕಟಣೆ ತಿಳಿಸಿದೆ.


Spread the love

Exit mobile version