Home Mangalorean News Kannada News ಸ್ವಚ್ಛ ಮಂಗಳೂರು ಅಭಿಯಾನವು ಆಯೋಜಿಸಿದ 14 ಸ್ವಚ್ಛತಾ ಕಾರ್ಯಕ್ರಮಗಳ

ಸ್ವಚ್ಛ ಮಂಗಳೂರು ಅಭಿಯಾನವು ಆಯೋಜಿಸಿದ 14 ಸ್ವಚ್ಛತಾ ಕಾರ್ಯಕ್ರಮಗಳ

Spread the love

ಸ್ವಚ್ಛ ಮಂಗಳೂರು ಅಭಿಯಾನವು ಆಯೋಜಿಸಿದ 14 ಸ್ವಚ್ಛತಾ ಕಾರ್ಯಕ್ರಮಗಳ 

391) ಹಂಪಣಕಟ್ಟೆ: ಸ್ವಚ್ಛ ಮಂಗಳೂರು ಅಭಿಯಾನ 400 ಕಾರ್ಯಕ್ರಮಗಳನ್ನು ಪೂರೈಸುತ್ತಿರುವುದರ ಹಿನ್ನಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಮಿನಿವಿಧಾನಸೌಧದ ಎದುರು ಹಮ್ಮಿಕೊಳ್ಳಲಾಗಿತ್ತು. ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಿ ಕಳೆದ ಒಂಬತ್ತು ತಿಂಗಳಿನಿಂದ ಸಾಗಿ ಬಂದ ಅಭಿಯಾನಕ್ಕೆ ಸಹಕರಿಸಿದ ಸ್ವಯಂಸೇವಕರಿಗೆ ಹಾಗೂ ಸಾರ್ವಜನಿಕರಿಗೆ ಧನ್ಯವಾದ ಹೇಳಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದ್ದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಅಲಹಾಬಾದ್ ರಾಮಕೃಷ್ಣ ಮಿಷನ್ನಿನ ಸ್ವಾಮಿ ಗೀತಾಮೃತಾನಂದಜಿ ಹಾಗೂ ಎಂ ಆರ್ ಪಿ ಎಲ್ ಸೀನಿಯರ್ ಮ್ಯಾನೇಜರ್ ಶ್ರೀಮತಿ ವೀಣಾ ಶೆಟ್ಟಿ ಜಂಟಿಯಾಗಿ 400 ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಶ್ರೀಶ ಕರ್ಮರನ್, ಪ್ರಾಧ್ಯಾಪಕ ಅಶೋಕ್ ಕಾಮತ್, ರವೀಂದ್ರ ಕೆ ಸೇರಿದಂತೆ ಹಲವಾರು ಜನ ಅಭಿಯಾನದಲ್ಲಿ ಪಾಲ್ಗೊಂಡರು. ತದನಂತರ ಸರಕಾರಿ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು  ಕ್ಲಾಕ್ ಟವರ್ ವೃತ್ತದಿಂದ ಎ ಬಿ ಶೆಟ್ಟಿ ವೃತ್ತದ ತನಕ ಸ್ವಚ್ಛತಾ ಕಾರ್ಯ ಮಾಡಿದರು.

392) ಯಕ್ಕೂರು: ಹಿಂದೂ ಯುವಸೇನೆಯ ಸದಸ್ಯರು ಹಾಗೂ ಸ್ಥಳಿಯರಿಂದ ಯಕ್ಕೂರು ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಶ್ರೀಮತಿ ತೇಜಸ್ವಿನಿ ಆಚಾರ್ಯ ಹಾಗೂ ಶ್ರೀ ರೋಹಿತ ಪೂಜಾರಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ನಂತರ  ರಸ್ತೆಯನ್ನು ಗುಡಿಸುವುದರ  ಜೊತೆಗೆ ತೋಡುಗಳನ್ನೂ ಶುಚಿಗೊಳಿಸಲಾಯಿತು. ಸಾರ್ವಜನಿಕರೊಂದಿಗೆ ಹಲವಾರು ಬಾಲಕ ಬಾಲಕಿಯರು ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶ್ರೀ ಪ್ರಶಾಂತ ಅಭಿಯಾನವನ್ನು ಸಂಯೋಜಿಸಿದರು. ಶ್ರೀ ಅಯ್ಯಪ್ಪ ಭಜನಾ ಮಂದಿರ ಹಾಗೂ ನಂದಾದೀಪ ಮಹಿಳಾ ಮಂಡಳಿಯ ಸದಸ್ಯರು ಸಹಕರಿಸಿದರು.

393) ಭವಂತಿ ರಸ್ತೆ: ಶ್ರೀಪರ್ತಗಾಳಿ ಗೋಕರ್ಣ ಮಠದ ಸ್ವಯಂ ಸೇವಕರಿಂದ ಭವಂತಿ ರಸ್ತೆಯಿಂದ ನಂದಾದೀಪ ರಸ್ತೆಯ ತನಕ  ಸ್ವಚ್ಛತಾ ಕಾರ್ಯ ಜರುಗಿತು. ಶ್ರೀ ತಪನ ಶೆಣೈ ಹಾಗೂ ಶಿವಾನಿ ರಾವ್ ಸ್ವಚ್ಛತೆಗೆ ಚಾಲನೆ ನೀಡಿದರು. ರಸ್ತೆಯ ಬದಿಯಲ್ಲಿ ಬೆಳೆದಿದ್ದ ಹುಲ್ಲನ್ನು ಕತ್ತರಿಸಿ ತೆಗೆದು ರಸ್ತೆಯ ಬದಿಗಳನ್ನು ಶುಚಿಮಾಡಲಾಯಿತು. ಶ್ರೀ ಕಮಲಾಕ್ಷ ಪೈ ಅಭಿಯಾನವನ್ನು ಸಂಯೋಜನೆ ಮಾಡಿದರು.

394) ಮಂಗಳಾದೇವಿ: ಶ್ರೀ ಶಾರದಾ ಮಹಿಳಾ ವೃಂದ, ನಿವೇದಿತಾ ಬಳಗ ಹಾಗೂ ಭಗಿನಿ ಸಮಾಜ ಮೂರು ತಂಡಗಳ ಸಂಯುಕ್ತಾಶ್ರಯದಲ್ಲಿ ಮಂಗಳಾದೇವಿ ರಸ್ತೆ ಹಾಗೂ ಮಂಗಳಾ ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಶ್ರೀಮತಿ ನಂದಿನಿ ರಘುಚಂದ್ರ ಹಾಗೂ ಶ್ರೀ ವಿನಾಯಕ ಪ್ರಭು ಅಭಿಯಾನಕ್ಕೆ ನಿಶಾನೆ ತೋರಿ ಚಾಲನೆ ನೀಡಿದರು. ಮಂಗಳಾದೇವಿ ಮುಖ್ಯರಸ್ತೆ ಹಾಗೂ ಮಂಗಳಾ ನಗರದ ವಿವಿಧ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.  ಶ್ರೀಮತಿ ಮಣಿ ರೈ, ಚಿತ್ರಾ ಪ್ರಭು, ರತ್ನಾ ಆಳ್ವ ಸೇರಿದಂತೆ ಅನೇಕರು ಅಭಿಯಾನದಲ್ಲಿ ಭಾಗವಹಿಸಿದರು.

395) ಕೊಡಿಯಾಲ್ ಬೈಲ್: ಟೀಂ ಪ್ರೇರಣಾ ಸದಸ್ಯರಿಂದ ಪಿವಿಎಸ್ ವೃತ್ತ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಶ್ರೀ ಸಿ ಎಸ್ ಭಂಡಾರಿ ಹಾಗೂ ಶ್ರೀ ರಾಮಚಂದ್ರ ರಾವ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಸಂಯೋಜಕ ಶ್ರೀ ಸದಾನಂದ ಉಪಾಧ್ಯಾಯ ಮಾರ್ಗದರ್ಶನದಲ್ಲಿ ರಸ್ತೆಯ ಶುಚಿತ್ವದೊಂದಿಗೆ ಅಲ್ಲಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಲಾಯಿತು. ಅಲ್ಲಲ್ಲಿ ಬಿಸಾಡಿದ್ದ ಹಳೆ ಕಟ್ಟಡ ತ್ಯಾಜ್ಯವನ್ನು ತೆಗೆದು ಸಾಗಿಸಲಾಯಿತು.

396) ಗಣಪತಿ ಹೈಸ್ಕೂಲ್ ರಸ್ತೆ: ಶ್ರೀ ಕೃಷ್ಣ ಭವನ ಆಟೋ ಪಾರ್ಕಿನ ಸದಸ್ಯರು ಜಿಎಚ್ ಎಸ್ ರಸ್ತೆಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಜಿಎಚ್ ಎಸ್ ರಸ್ತೆಯಲ್ಲದೇ ವಿಶ್ವವಿದ್ಯಾನಿಲಯ ಕಾಲೇಜಿನ ಮುಂಭಾಗದ ಮುಖ್ಯರಸ್ತೆ ಹಾಗೂ ಕಾಲುದಾರಿಗಳನ್ನು ಗುಡಿಸಿ ಸ್ವಚ್ಛ ಮಾಡಲಾಯಿತು.

397) ಅಶೋಕ ನಗರ: ಎಂ.ಸಿ.ಎಫ್ ಮಂಗಳಾ ಸದಸ್ಯರು ಅಶೋಕ ನಗರದಿಂದ ಉರ್ವಾ ಮಾರ್ಕೆಟ್ ವರೆಗಿನ ರಸ್ತೆ ಹಾಗು ಪರಿಸರವನ್ನು ಶುಚಿಗೊಳಿಸಲಾಯಿತು. ಶ್ರೀ ಪ್ರಭಾಕರ್ ರಾವ್ ಅಭಿಯಾನವನ್ನು ಶುಭಾರಂಭಗೊಳಿಸಿದರು. ಶ್ರೀ ಜಯರಾಂ ಕಾರಂದೂರು, ಪಿ ಜಯಶಂಕರ ರೈ ಮತ್ತಿತರರು ಭಾಗವಹಿಸಿದರು. ಶ್ರೀ ಅವಿನಂದನ್ ಅಚನಳ್ಳಿ ಹಾಗೂ ಶ್ರೀ ಸುರೇಶ್ ಕಾರ್ಯಕ್ರಮವನ್ನು ಸಂಯೋಜಿಸಿದರು.

398) ಕ್ಲಾಕ್ ಟವರ್ ವೃತ್ತ: ಹಿಂದೂ ವಾರಿಯರ್ಸ್ ಯುವತಂಡದ ವತಿಯಿಂದ ಕ್ಲಾಕ್ ಟವರ್ ಸುತ್ತಮುತ್ತ ಹಾಗೂ ಹಂಪನಕಟ್ಟೆಯಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಕ್ಲಾಕ್ ಟವರ್ ವೃತ್ತದಲ್ಲಿ ಬೆಳೆದಿದ್ದ ಕಳೆಯನ್ನು ಕಿತ್ತು ಸ್ವಚ್ಛಗೊಳಿಸಲಾಯಿತು ತದನಂತರ ನಿರ್ವಹಣೆ ದೃಷ್ಟಿಯಿಂದ ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ವೆನ್ ಲಾಕ್ ಆಸ್ಪತ್ರೆಯ ಆವರಣ ಗೋಡೆಗಳ ಮೇಲಿನ ಚಿತ್ರಗಳನ್ನು ನೀರು ಹಾಕಿ ತೊಳೆದು ಶುಚಿಗೊಳಿಸಲಾಯಿತು. ಶ್ರೀ ಶಿವು ಪುತ್ತೂರು, ಯೋಗೀಶ್ ಕಾಯರ್ತಡ್ತ ಶ್ರೀ ಮನೋಹರ ಪೂಜಾರಿ, ಶ್ರೀ ಗಣೇಶ್ ಪಾಂಗಾಳ ಸೇರಿದಂತೆ ಹಲವು ಯುವಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

399) ಬೋಳಾರ; ಶ್ರೀ ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಬೋಳಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀ ಜಿ ಗಂಗಾಧರ ಹಾಗೂ ಶ್ರೀ ಭುಜಂಗ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಬೋಳಾರ ಪ್ರಾಥಮಿಕ ಶಾಲೆಯ ಸುತ್ತಮುತ್ತ ಹಾಗೂ ಜೆಪ್ಪು ಮಾರ್ಕೆಟ್ ರಸ್ತೆಗಳಲ್ಲಿ ಸ್ವಚ್ಛತಯನ್ನು ಕೈಗೊಂಡು ಜಾಗೃತಿ ಮೂಡಿಸಲು ಪ್ರಯತ್ನಿಸಲಾಯಿತು. ಸುಮಂತ ನಿಶಾಂತ ಜೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಶ್ರೀ ಕಮಲಾಕ್ಷ ಹಾಗೂ ಶ್ರೀ ಪುನೀತ್ ಅಭಿಯಾನವನ್ನು ಸಂಯೋಜಿಸಿದರು.

400) ನಂತೂರು: ದಕ್ಷಿಣ ಕನ್ನಡ ಹವ್ಯಕ ಸಭಾದ ಸದಸ್ಯರಿಂದ ನಂತೂರಿನ ಭಾರತೀ ಕಾಲೇಜಿನ ಬಳಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಸಮ್ಮುಖದಲ್ಲಿ ಕರ್ಣಾಟಕ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕರಾದ ಶ್ರೀ ರಾಘವೇಂದ್ರ ಭಟ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಅಭಿಯಾನಕ್ಕೆ ಶುಭ ಹಾರೈಸಿದರು. ತದನಂತರ ನಂತೂರು ರಾಷ್ಟ್ರೀಯ ಹೆದ್ದಾರಿಯ ಆಸುಪಾಸು ಹಾಗೂ ವಿವೇಕಾನಂದ ಅಡ್ಡರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಡಾ. ರಾಜೇಂದ್ರ ಪ್ರಸಾದ ಹಾಗೂ ಶ್ರೀ ವೇಣುಗೋಪಾಲ್ ಮಾಂಬಾಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.

401) ಪಾಂಡೇಶ್ವರ: ಫೋರಂ ಫಿಜಾ ಮಾಲ್ ಸಿಬ್ಬಂದಿ ಹಾಗೂ ನಿರ್ವಾಹಕರು ಪಾಂಡೇಶ್ವರದಲ್ಲಿ ಸ್ವಚ್ಛತೆ ಕೈಗೊಂಡರು. ಶ್ರೀ ಅಶ್ವಿತ್ ಶೆಟ್ಟಿ ಹಾಗೂ ಶ್ರೀ ತಿಲಕ ಸಾಲಿಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಪಿ ಆಫೀಸ್, ಫೋಸ್ಟ್ ಆಫೀಸ್, ಭಾರತೀಯ ವಿದ್ಯಾಭವನ ಹಾಗೂ ಪೋರಂ ಮಾಲ್ ಎದುರಿನ ರಸ್ತೆ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದ್ದಲ್ಲದೇ ಮಾರ್ಗ ವಿಭಾಜಕಗಳಲ್ಲಿನ ಕಳೆತೆಗೆದು ಶುಚಿಗೊಳಿಸಿದರು.

402) ಕರಂಗಲಪಾಡಿ: ಸ್ಥಳೀಯ ಆಟೋ ಚಾಲಕರು ಕರಂಗಲಪಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಶ್ರೀ ಎಂ ಆರ್ ವಾಸುದೇವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಕರಂಗಲಪಾಡಿಯ ಬೇರೆ ಬೇರೆ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಶ್ರೀ ಕೃಷ್ಣಪ್ಪ ಸಂಯೋಜಿಸಿದರು.

 403) ಯಯ್ಯಾಡಿ: ಫ್ರೆಂಡ್ಸ್ ಪಾರ್ ಎವರ್ ಸದಸ್ಯರು ಏರ್ ಪೋರ್ಟ್ ರಸ್ತೆ ಹಾಗೂ ಯೆಯ್ಯಾಡಿಯ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಶಾಲಿಮಾರ್ ಪೇಂಟ್ಸ್ ರೀಜನಲ್ ಮ್ಯಾನೇಜರ್ ಆದ ಶ್ರೀ ಅಶೋಕ್ ಕುಮಾರ್ ಹೆಗಡೆ ಮತ್ತು ಮೆಸ್ಕಾಂ ನ ನಿಕಟಪೂರ್ವ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಸುಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಚರಣಪ್ರಸಾದ್ ಅಡ್ಯಂತಾಯ, ಶ್ರೀ ನಿರ್ಮಲ್ ಕುಮಾರ್, ಶ್ರೀ ಕೆ. ವಿ. ಪ್ರಸಾದ್, ಶ್ರೀ ಎಮ್. ಎಸ್. ಪ್ರಭಾಕರ್ ಪದವಿನಂಗಡಿ, ಶ್ರೀ ಬಾಲಕೃಷ್ಣ ರೈ ಮುಂತಾದವರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

404) ಪಂಪವೆಲ್ : ಸ್ವಚ್ಛತಾ ಕಾರ್ಯವನ್ನು ನ್ಯಾಯವಾದಿಯಾದ ಶ್ರೀ ಅಶ್ವಿನ್ ನಾಯಕ್ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ಪೂಜಾ ರೈ ಅವರು ಉದ್ಘಾಟಿಸಿದರು. ಸ್ವಯಂಸೇವಕರು ಪಂಪ್ ವೆಲ್ ವೃತ್ತ ಮತ್ತು ಪೋಲೀಸ್ ಚೌಕವನ್ನು ಶುಚಿಗೊಳಿಸಿದರು. ಶ್ರೀ ನಿಹಾಲ್ ಶೆಟ್ಟಿ, ಶ್ರೀ ವಿಧಾತ್ ರೈ ಮತ್ತಿತರರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ.


Spread the love

Exit mobile version