ಸ್ವಧರ್ಮ ನಿಷ್ಟೆ ಹಾಗೂ ಪರಧರ್ಮ ಸಹಿಷ್ಣುತೆಗೆ ಸದಾ ಬದ್ಧ : ಮುತಾಲಿಕ್ ಆರೋಪಕ್ಕೆ ಪೇಜಾವರ ಶ್ರೀ ಸ್ಪಷ್ಟನೆ

Spread the love

ಸ್ವಧರ್ಮ ನಿಷ್ಟೆ ಹಾಗೂ ಪರಧರ್ಮ ಸಹಿಷ್ಣುತೆ  ಸದಾ ಬದ್ಧ : ಮುತಾಲಿಕ್ ಆರೋಪಕ್ಕೆ ಪೇಜಾವರ ಶ್ರೀ ಸ್ಪಷ್ಟನೆ

ಉಡುಪಿ : ನಾನು ಸ್ವಧರ್ಮ ನಿಷ್ಟೆ ಹಾಗೂ ಪರಧರ್ಮ ಸಹಿಷ್ಣುತೆ ವಿಷಯದಲ್ಲಿ ಸದಾ ಬದ್ಧನಾಗಿದ್ದೇನೆ ಎಂದು ಉಡುಪಿ ಪರ್ಯಾಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಸ್ಪಷ್ಟಪಡಿಸಿದ್ದಾರೆ.

ಕೃಷ್ಣಮಠದಲ್ಲಿ ಮುಸ್ಲಿಂ ಭಾಂಧವರಿಗಾಗಿ ಆಯೋಜಿಸಿದ ಇಫ್ತಾರ್ ಕೂಟದ ಕುರಿತು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾಡಿರುವ ವಿರೋಧಧ ಕುರಿತು ಸ್ಪಷ್ಟನೆ ನೀಡಿರುವ ಸ್ವಾಮೀಜಿಯವರು ನಾವು ನಮ್ಮ ಧರ್ಮಕ್ಕೆ ಅಪಚಾರವಾಗದಂತೆ ಇತರ ಧರ್ಮದವರೊಂದಿಗೆ ಪ್ರೀತಿಯ ಸಂಬಂಧವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಹಿಂದೂ ಧರ್ಮಕ್ಕೆ ನಿಷ್ಟರಾಗಿದ್ದುಕೊಂಡು ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಹೋರಾಟ ಮಾಡಿದ್ದೇನೆ ಮುಂದೇಯೂ ಮಾಡುತೇನೆ ಇದೇವೇಳೆ ಇತರ ಧರ್ಮದವರೊಂದಿಗೆ ಸೌಹಾರ್ಧತೆಯನ್ನು ಕಾಪಾಡುವುದು ಕೂಡ ಅಷ್ಟೆ ಮುಖ್ಯವಾಗಿದೆ.  ಸ್ನೇಹ ಮತ್ತು ಸೌಹಾರ್ದತೆಯನ್ನು ಇತರ ಧರ್ಮಗಳೊಂದಿಗೆ ಬೆಳೆಸುವುದು ನನ್ನ ಸಿದ್ದಾಂತವಾಗಿದೆ.

ಮುಸ್ಲಿಂ ಸಮುದಾಯ ಕೂಡ ಹಲವಾರು ಬಾರಿ ಕೃಷ್ಣ ಮಠದ ಪರವಾಗಿ ನಿಂತಿದೆ. ಉಡುಪಿ ಚಲೋ ಸಮಯದಲ್ಲಿ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆ ಒಡ್ಡಿದಾಗ ಮುಸ್ಲಿಂ ಸಮುದಾಯ ಮಠದ ಬೆಂಬಲಕ್ಕೆ ನಿಂತಿದ್ದರು ಅಲ್ಲದೆ ಪರ್ಯಾಯ ಸಂದರ್ಭದಲ್ಲಿ ಅವರ ಸೇವೆ ಶ್ಲಾಘನಾರ್ಹವಾಗಿದೆ. ಅಂತೆಯೆ ರಮ್ಜಾನ್ ಹಬ್ಬದ ಉಪವಾಸದ ಸಮಯದಲ್ಲಿ ಅವರಿಗಾಗಿ ಸೌಹಾರ್ದ ಕೂಟವನ್ನು ನಾವು ಆಯೋಜಿಸಿದ್ದು ಕೇವಲ ನಮ್ಮ ಮತ್ತು ಅವರ ನಡುವೆ ಇರುವ ಅನೋನ್ಯತೆ ಮುಂದುವರೆಯಲ್ಲಿ ಎಂಬ ಉದ್ದೇಶದಿಂದ ಮಾತ್ರ. ಇದರ ಆಯೋಜನೆಯಿಂದ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಅಪಚಾವಾಗಿಲ್ಲ ಬದಲಾಗಿ ಹಿಂದೂ ಧರ್ಮದ ಶ್ರೇಷ್ಠತೆ ಹೆಚ್ಚಿದಂತಾಗಿದೆ ಎಂದರು.

ಉಪವಾಸ ಬಿಡುವ ವೇಳೆಯಲ್ಲಿ ನಮಾಝ್ ಮಾಡುವುದು ಅವರ ಧರ್ಮದ ಪದ್ದತಿ ಅದಕ್ಕಾಗಿ ಅವರು ಸ್ಥಳವನ್ನು ಕೇಳಿದ್ದರು ಅದರಂತೆ ಅನ್ನಚ್ಚತ್ರದಲ್ಲಿ ಅವಕಾಶ ಕಲ್ಪಿಸಲಾಗಿತ್ತು ಅದು ಸಾರ್ವಜನಿಕ ಸ್ಥಳವಾಗಿದೆ. ಈ ನಡುವೆ ಗೋಮಾಂಸ ಭಕ್ಷಕರನ್ನು ಕರೆತಂದು ಮಠದ ಆವರಣದ ಒಳಗೆ ನಮಾಜ್ ಅವಕಾಶ ನೀಡಿರುವುದರ ಬಗ್ಗೆ ಮಾತನಾಡಿದ ಸ್ವಾಮೀಜಿವರು ಮುಸ್ಲಿಂರು ಗೋಮಾಂಸ ಭಕ್ಷಣೆ ಮಾಡುತ್ತಿದ್ದಾರೆ ಅದರಂಥೆಯೇ ಕೆಲವೊಂದು ಹಿಂದೂಗಳು ಕೂಡ ಮಾಡುತ್ತಿದ್ದಾರೆ. ನಾವು ಕೇವಲ ಅವರಲ್ಲಿ ಗೋಮಾಂಸ ತಿನ್ನಬೇಡಿ ಎಂಬ ವಿನಂತಿ ಮಾಡಬಹುದೇ ವಿನಃ ಅದನ್ನೆ ಅವರ ಮೇಲೆ ಹೇರಲು ಸಾಧ್ಯವಿಲ್ಲ ಎಂದರು.

ದೇವಸ್ಥಾನದಲ್ಲಿ ಇಫ್ತಾರ್ ಕೂಟಕ್ಕೆ ಅವಕಾಶ ನೀಡಿದಂತೆ ಸ್ವಾಮೀಜಿಗಳಿಗೆ ಮಸೀದಿಯಲ್ಲಿ ಗಣೇಶ ಚತುರ್ಥಿ, ಯುಗಾದಿಗೆ ಅವಕಾಶ ನೀಡುವರೇ ಎಂಬ ಮುತಾಲಿಕ್ ಪ್ರಶ್ನೆ ಕುರಿತು ಪ್ರತಿಕ್ರಿಯೀಸಿದ ಸ್ವಾಮೀಜಯವರು ನಾನು ಹಲವಾರು ಮಸೀದಿಗಳಲ್ಲಿ ವಿಚಾರಗೋಷ್ಟಿ, ಪ್ರವಚನಗಳಲ್ಲಿ ಭಾಗವಹಿದಿದ್ದೇನೆ. ಭಟ್ಕಳ, ಉಡುಪಿ, ಮಂಗಳೂರು, ಉಡುಪಿ ಕ್ಷೇತ್ರಗಳಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂರು

 


Spread the love