ಸ್ವಾತಂತ್ರ್ಯ: ಜಿಲ್ಲೆಯಾದ್ಯಂತ ಬಿಗಿ ಭದ್ರತೆ
ಮ0ಗಳೂರು: ಆಗಸ್ಟ್ 15 ರಂದು ದೇಶದಾದ್ಯಂತ ಸ್ವಾತಂತ್ರೋತ್ಸವವನ್ನು ಆಚರಿಸಲಿದ್ದಾರೆ. ಇತ್ತೀಚಿಗೆ ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಸ್ಪೋಟವಾಗಿರುವುದರಿಂದ ಇಂತಹ ಸಂಧರ್ಭಗಳಲ್ಲಿ ಸಮಾಜಘಾತುಕ ಶಕ್ತಿಗಳು ಅಹಿತಕರ ಘಟನೆಗಳಿಗೆ ಯತ್ನಿಸಿ ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು, ಅಪರಿಚಿತರು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ವೃತ್ತ ಕಛೇರಿ, ಉಪವಿಭಾಗ ಕಛೇರಿ, ಜಿಲ್ಲಾ ಪೊಲೀಸ್ ಕಛೇರಿಯ ಕಂಟ್ರೋಲ್ ರೂಮ್‍ಗೆ ಮಾಹಿತಿ ನೀಡುವಂತೆ ಕೋರಿದೆ.
ಜಿಲ್ಲಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಪೆಟ್ರೋಲಿಂಗ್ ಹಾಗೂ ಪಿಕೇಟಿಂಗ್ ಕರ್ತವ್ಯಕ್ಕಾಗಿ ಹೆಚ್ಚಿನ ಅಧಿಕಾರಿ/ಸಿಬ್ಬಂದಿಗಳನ್ನು ನೇಮಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜನಸಂದಣಿ ಹೆಚ್ಚು ಸೇರುವ ಕಡೆಗಳಾದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಉಪವಿಭಾಗ ಅಧಿಕಾರಿ ಮತ್ತು ತಹಶೀಲ್ದಾರರ ಕಛೇರಿ, ಕೋರ್ಟ್ ಹಾಗೂ ಇತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಛೇರಿಗಳಲ್ಲಿ, ಶೌಚಾಲಾಯಗಳಲಿ,್ಲ ಕಸದ ತೊಟ್ಟಿಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಬಾಂಬ್ ತಪಾಸಣೆ ದಳ ಹಾಗೂ ಶ್ವಾನದಳದವರಿಂದ ಪರಿಶೀಲನೆ ನಡೆಸಲಾಗುತ್ತದೆ.
ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವಾಗ ಸಂಘಟಕರು ಭಾರತೀಯ ಧ್ವಜ ಸಂಹಿತೆಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆಮಾಡುವಂತೆ ಸೂಚಿಸಲಾಗಿದೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವಾಗ ಸಂಘಟಕರು ಭಾರತೀಯ ಧ್ವಜ ಸಂಹಿತೆಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆಮಾಡುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸಾರ್ವಜನಿಕರು ತಮ್ಮ ತಮ್ಮ ಬಾಡಿಗೆ ಮನೆಗಳಲ್ಲಿ ಮತ್ತು ಲಾಡ್ಜ್ ಮಾಲಿಕರು ತಮ್ಮ ಲಾಡ್ಜ್‍ಗಳಲ್ಲಿ, ಹೊಟೇಲ್‍ಗಳಲ್ಲಿ, ಚೌಟರಿಗಳಲ್ಲಿ ಅಪರಿಚಿತರು ಅನುಮಾಸ್ಪದ ವ್ಯಕ್ತಿಗಳು ತಂಗದಂತೆ ಎಚ್ಚರವಹಿಸುವುದು ಹಾಗೂ ತಂಗಿದ ವ್ಯಕ್ತಿಗಳ ಭಾವಚಿತ್ರ ಮತ್ತು ಮೊಬೈಲ್ ನಂಬ್ರನ್ನು ಪರಿಶೀಲಿಸಿ ಪಡೆದುಕೊಳ್ಳುವುದು. ಸಂಶಯವಿದ್ದಲ್ಲಿ ಮಾಹಿತಿಯನ್ನು ಒದಗಿಸುವಂತೆ ಕೋರಿದೆ.
ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಸಂಯಮದಿಂದ ವರ್ತಿಸುವಂತೆ ಕೋರಿದೆ.
ಸಾರ್ವಜನಿಕರು ಪೊಲೀಸ್ ತಪಾಸಣೆ ವೇಳೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಪೊಲೀಸ್‍ರೊಂದಿಗೆ ಸಹಕರಿಸುವಂತೆ ಹಾಗೂ ಮಾಹಿತಿಯಿದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ 0824-2220500, 0824-2440284, ಮೊಬೈಲ್ ನಂಬ್ರ: 9480805300 ಸಂಪರ್ಕಿಸುವಂತೆ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.