ಹಡಿಲು ಬಿದ್ದ ಗದ್ದೆಯಲ್ಲಿ ಕೋಟ ಸಿಟಿ ರೋಟರಿ ಕ್ಲಬ್ ವತಿಯಿಂದ ರೈತ ಬಂಧು ಯೋಜನೆ
ಹಡಿಲು ಬಿದ್ದ ಗದ್ದೆಯಲ್ಲಿ ರೋಟರಿ ಸದಸ್ಯರೇ ನಾಟಿ ಮಾಡಿ, ಬೆಳೆಯನ್ನು ಅನಾಥಾಶ್ರಮಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಕೋಟ: ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182, ವಲಯ -2 ರ ರೋಟರಿ ಕ್ಲಬ್ ಕೋಟಿಸಿಟಿ ವತಿಯಿಂದ ರೋಟರಿಯ ಜಿಲ್ಲಾ ಯೋಜನೆ ರೈತ ಬಂಧು ಕಾರ್ಯಕ್ರಮದಡಿ ಹಡಿಲುಬಿದ್ದ ಗದ್ದೆಯಲ್ಲಿ ರೋಟರಿ ಸದಸ್ಯರು ಹಾಗೂ ಆನ್ಸ್ ಸದಸ್ಯರು ಜೊತೆಗೂಡಿ ನಾಟಿ ಮಾಡುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಇದೊಂದು ಮಹತ್ತರವಾದ ಯೋಜನೆಯಾಗಿದ್ದು, ಇತ್ತೀಚೆಗೆ ಯುವ ಜನತೆ ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವುದನ್ನು ಮನಗಂಡು ರೋಟರಿ ಸದಸ್ಯರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಈ ಯೋಜನೆಯನ್ನು ಕೈಗೊಂಡಿದ್ದು, ಈ ಯೋಜನೆಯಲ್ಲಿ ಬೆಳೆದ ಬೆಳೆಯನ್ನು ಅಗತ್ಯವಿರುವ ಅನಾಥಾಶ್ರಮಕ್ಕೆ ಹಾಗೂ ಬೈಹುಲ್ಲನ್ನು ಗೋಶಾಲೆಗೆ ನೀಡುವ ಸಂಕಲ್ಪವನ್ನು ಮಾಡಲಾಗಿರುತ್ತದೆ.
ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷರಾದ ರೊ. ವಿಷ್ಣುಮೂರ್ತಿ ಉರಾಳ, ಕಾರ್ಯದರ್ಶಿ ರೊ. ಶಿವಾನಂದ ನಾಯರಿ, ಮಾಜಿ ಅಧ್ಯಕ್ಷರುಗಳಾದ ರೊ. ಶ್ಯಾಮಸುಂದರ ನಾಯರಿ, ರೊ. ಡಾ|| ಗಣೇಶ್, ರೊ. ನಿತ್ಯಾನಂದ ನಾಯರಿ, ಸದಸ್ಯರಾದ ರೊ. ಸುಭಾಶ್ಚಂದ್ರ ಶೆಟ್ಟಿ, ರೊ. ನಾಗರಾಜ್ ಆಚಾರ್, ರೊ. ವೆಂಕಟೇಶ್ ಆಚಾರ್, ರೊ. ರಾಘವೇಂದ್ರ ಆಚಾರ್, ರೊ. ನಿತ್ಯಾನಂದ ಆಚಾರ್, ರೊ. ಶರತ್ ಶೆಟ್ಟಿ, ರೊ. ಸತೀಶ್ ಪೂಜಾರಿ, ಆನ್ಸ್ ಕ್ಲಬ್ ಕೋಟಿಸಿಟಿಯ ಸದಸ್ಯರಾದ ರೇವತಿ.ಎಸ್. ನಾಯರಿ, ಶಶಿಕಲಾ ಗಣೇಶ್, ಜ್ಯೋತಿ ನಿತ್ಯಾನಂದ ನಾಯರಿ, ರೂಪಶ್ರೀ ಶಿವಾನಂದ ನಾಯರಿ ಉಪಸ್ಥಿತರಿದ್ದರು