Home Mangalorean News Kannada News ಹಣ  ಪಣವಾಗಿಟ್ಟು  ಜೂಜಾಟವಾಡುತ್ತಿದ್ದ ಕ್ಲಬ್ಬಿಗೆ ಪೊಲೀಸರ ದಾಳಿ- 13 ಮಂದಿ ಬಂಧನ

ಹಣ  ಪಣವಾಗಿಟ್ಟು  ಜೂಜಾಟವಾಡುತ್ತಿದ್ದ ಕ್ಲಬ್ಬಿಗೆ ಪೊಲೀಸರ ದಾಳಿ- 13 ಮಂದಿ ಬಂಧನ

Spread the love

ಹಣ  ಪಣವಾಗಿಟ್ಟು  ಜೂಜಾಟವಾಡುತ್ತಿದ್ದ ಕ್ಲಬ್ಬಿಗೆ ಪೊಲೀಸರ ದಾಳಿ- 13 ಮಂದಿ ಬಂಧನ

ಮಂಗಳೂರು: ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದ ಸಾಗರ್ ರಿಕ್ರಿಯೇಷನ್ ಕ್ಲಬ್ಬಿಗೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ 13 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕ್ಲಬ್ಬಿನ ಮ್ಯಾನೇಜರ್ ಅಶೋಕ ಕೆ ಗಟ್ಟಿ, ರಾಧಾಕೃಷ್ಣ, ವಿಠಲ, ಮಹಮ್ಮದ್, ಗಣೇಶ್, ಸುಲೈಮಾನ್, ಕೃಷ್ಣ, ಶ್ರೀಧರ, ಅಶ್ರಫ್, ಅಬ್ಬಾಸ್, ಕುಮಾರ ಕೆ, ಹಮೀದ್, ಪ್ರದೀಪ್ ಎಂದು ಗುರುತಿಸಲಾಗಿದ್ದು, ಕ್ಲಬ್ಬಿನ ಅಧ್ಯಕ್ಷ ಪ್ರದೀಪ್ ಪಾಂಬಾರು, ಕಟ್ಟಡದ ಮಾಲಿಕ ಶರತ್ ಕುಮಾರ್ ತಪ್ಪಿಸಿಕೊಂಡಿದ್ದು ಪೊಲೀಸರು ಬಂಧನಕ್ಕೆ ಬಲೆಬೀಸಿದ್ದಾರೆ.

ಫೆಬ್ರವರಿ 27ರಂದು ದಕ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ಉಪವಿಭಾಗದ ಉಪಾಧೀಕ್ಷಕರು ಮತ್ತು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ನಿರ್ದೇಶನದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಕ್ತಿವೇಲು ಮತ್ತು ಸಿಬಂದಿಗಳು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಕನ್ನಟಿಮಾರ್ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿದ್ದ ಸಾಗರ್ ರಿಕ್ರಿಯೇಶನ್ ಕ್ಲಬ್ಬಿಗೆ ದಾಳಿ ನಡೆಸಿ ಜೂಜಾಟಕ್ಕೆ ಬಳಸಿದ ನಗದು ರೂ 52370, ಒಂದು ಜೀಪು, ಒಂದು ಅಟೊರಿಕ್ಷಾ 9 ದ್ವಿಚಕ್ರ ವಾಹನಗಳನ್ನು ಹಾಗೂ ಆಟಕ್ಕೆ ಬಳಸಿದ ಪೀಠೋಪರಕರಣಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 450470 ಆಗಿರುತ್ತದೆ.’

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


Spread the love

Exit mobile version