Spread the love
ಹತ್ತನೇ ತರಗತಿ ಪರೀಕ್ಷೆ ಬರೆದು ಮನೆಗೆ ತೆರಳಿದ ವಿದ್ಯಾರ್ಥಿನಿ ಸಾವು
ಮಂಗಳೂರು: ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಮಂಗಳೂರಿನ ಸೈಂಟ್ ಆ್ಯನ್ಸ್ ಪ್ರೌಢಶಾಲೆಯ ಸ್ವೀಡಲ್ ಡಿಸೋಜಾ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ವಿದ್ಯಾರ್ಥಿನಿಯು ಬುಧವಾರ ತನ್ನ ಹತ್ತನೇ ತರಗತಿಯ ಪರಿಕ್ಷೆಯನ್ನು ರೊಸಾರಿಯಾ ಪ್ರೌಢಶಾಲೆಯಲ್ಲಿ ಬರೆದಿದ್ದು, ಭಾನುವಾರದಿಂದ ಆಕೆ ಜ್ವರದಿಂದ ಬಳಲುತ್ತಿದ್ದಳು.
ಬುಧವಾರದ ಪರಿಕ್ಷೆಯ ಬಳಿಕ ಮನೆಗೆ ತೆರಳಿದ ಸ್ವೀಡಲ್ ತನಗೆ ಹೊಟ್ಟೆ ನೋವು ಎಂದು ಹೇಳಿದ್ದು, ಕೂಡಲೇ ಆಕೆಯನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಸಾವಿಗೆ ನಿಜವಾದ ವೈದ್ಯಕೀಯ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.
Spread the love