Home Mangalorean News Kannada News ಹದಿಹರೆಯದ ಮಾನಸಿಕ ಸಮಸ್ಯೆಗಳು: ಕಾರ್ಯಾಗಾರ

ಹದಿಹರೆಯದ ಮಾನಸಿಕ ಸಮಸ್ಯೆಗಳು: ಕಾರ್ಯಾಗಾರ

Spread the love

ಹದಿಹರೆಯದ ಮಾನಸಿಕ ಸಮಸ್ಯೆಗಳು: ಕಾರ್ಯಾಗಾರ 

ಮ0ಗಳೂರು : ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿಯ ಮಹಿಳಾ ವೇದಿಕೆಯ ವತಿಯಿಂದ ವಿದ್ಯಾರ್ಥಿನಿಯರಿಗಾಗಿ“ಹದಿ ಹರೆಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು” ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಪ್ತ ಸಲಹೆಗಾರರಾದ ಶ್ವೇತಾ ಮಾತನಾಡಿ, ಶಾರೀರಿಕ ವಿಕಸಿತಗೊಳ್ಳುವ ಈ ಅವಧಿಯಲ್ಲಿ, ವಿದ್ಯಾರ್ಥಿಗಳು ತಮ್ಮಲ್ಲಿಉಂಟಾಗುವ ಅನೇಕ ಬದಲಾವಣೆಗಳ ಅರಿವು, ಪ್ರಾಮುಖ್ಯತೆ ಹಾಗು ವ್ಯೆಶಿಷ್ಟತೆಯ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ, ತಮ್ಮ ಮಾನಸಿಕ ಸಮತೋಲನವನ್ನು ಕಾಪಾಡುವುದು ಅತ್ಯವಶ್ಯಕ ಎಂದರು.

ಕಾಲೇಜಿನ ಆಪ್ತಸಲಹೆಗಾರರಾದ ರಾಣಿಮಂಗಳಾ ಹಾಗು ನಮ್ರತಾ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಶ್ಯೆಕ್ಷಣಿಕ ಸಲಹೆಗಾರ ಡಾ.ಶಿವರಾಮ ಪಿ.ಹಾಗೂ ಮಹಿಳಾವೇದಿಕೆ ಸಂಚಾಲಕಿ ಡಾ.ಶ್ಯೆಲಾ ರಾಣಿ ಬಿ., ಸಹ ಸಂಚಾಲಕಿ ಡಾ.ಶರ್ಮಿಳಾ ರೈ ಹಾಗೂ ಪ್ರೊ.ಗೀತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಕೀಲಾ ಸ್ವಾಗತಿಸಿ, ದೀಪಿಕಾ ವಂದನಾರ್ಪಣೆಗೈದರು.


Spread the love

Exit mobile version